ಪಕ್ಷದ ಆಧಾರಸ್ತಂಭಗಳಲ್ಲಿ ಒಂದಾಗಿದ್ದರು: ಅಹ್ಮದ್ ಪಟೇಲ್ ಅಗಲಿಕೆಗೆ ಕಾಂಗ್ರೆಸ್ ತೀವ್ರ ಸಂತಾಪ

ಪಕ್ಷದ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದರು, ಹಿರಿಯ ನಾಯಕನ ಅಗಲಿಕೆ ಸಾಕಷ್ಟು ನೋವು ತಂದಿದೆ ಎಂದು ಅಹ್ಮದ ಪಟೇಲ್ ಅವರ ನಿಧನಕ್ಕೆ ಕಾಂಗ್ರೆಸ್ ತೀವ್ರ ಸಂತಾಪ ಸೂಚಿಸಿದೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಪಕ್ಷದ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದರು, ಹಿರಿಯ ನಾಯಕನ ಅಗಲಿಕೆ ಸಾಕಷ್ಟು ನೋವು ತಂದಿದೆ ಎಂದು ಅಹ್ಮದ ಪಟೇಲ್ ಅವರ ನಿಧನಕ್ಕೆ ಕಾಂಗ್ರೆಸ್ ತೀವ್ರ ಸಂತಾಪ ಸೂಚಿಸಿದೆ. 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ತೀವ್ರ ಸಂತಾಪ ಸೂಚಿಸಿದ್ದಾರೆ.

ಇಂದು ಅತ್ಯಂತ ದುಃಖದಾಯ ದಿನ. ಅಹ್ಮದ್ ಪಟೇಲ್ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿದ್ದರು. ಎಂತಹ ಕಠಿಣ ಸಂದರ್ಭಗಳಲ್ಲಿಯೂ ಕಾಂಗ್ರೆಸ್ ಪರವಾಗಿ ನಿಂತ ನಾಯಕ. ಅಹ್ಮದ್ ಪಟೇಲ್ ನಮ್ಮ ದೊಡ್ಡ ಶಕ್ತಿಯಾಗಿದ್ದರು. ನಾವು ಪಟೇಲರು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ರಾಹುಲ್ ಗಾಂಧಿ ಸಂತಾಪ ಸೂಚಿಸಿ ಪಟೇಲರ ಕುಟುಂಬದ ಜೊತೆ ನಾವು ಇರುತ್ತೇವೆ ಎಂದು ಹೇಳಿದ್ದಾರೆ. 

ಅಹ್ಮದ್ ಪಟೇಲ್ ಅವರು ಬುದ್ಧಿವಂತ ಮತ್ತು ಅನುಭವಿ ಸಹೋದ್ಯೋಗಿಯಾಗಿದ್ದರು. ಅವರಿಂದ ನಿರಂತರವಾಗಿ ಸಲಹೆಗಳನ್ನು ಪಡೆಯುತ್ತಿದ್ದೆ. ಅವರು ನಮ್ಮೆಲ್ಲರ ಜೊತೆ ನಿಂತಿದ್ದರು. ದೃಢ, ನಿಷ್ಠಾವಂತ ಮತ್ತು ಕೊನೆಯವರೆಗೂ ನಂಬಲರ್ಹವಾಗ ವ್ಯಕ್ತಿಯಾಗಿದ್ದರು. ಅವರ ನಿಧನವು ಅಪಾರ ನೋವನ್ನು ತಂದಿದೆ. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದ್ದಾರೆ. 

ಅಹ್ಮದ್ ಪಟೇಲ್ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ. ನಿಮ್ಮ ತಂದೆಯಂತಹ ಸೇವೆ, ಪಕ್ಷಕ್ಕಾಗಿ ಇದ್ದ ನಿಮ್ಮ ಬದ್ಧತೆಯನ್ನು ಅಳೆಯಲಾಗದು. ನಾವೆಲ್ಲರೂ ಅಹ್ಮದ್ ಪಟೇಲ್ ಅವರನ್ನು ಅಪಾರವಾಗಿ ಕಳೆದುಕೊಂಡಿದ್ದೇವೆ. ಅವರಿಗಿದ್ದ ಧೈರ್ಯ ನಿಮಗೆ ಬರಲಿ, ಈ ದೊಡ್ಡ ನೋವನ್ನು ಎದುರಿಸುವ ಶಕ್ತಿ ನಿಮಗೆ ಸಿಗಲಿ ಎಂದು ಕುಟುಂಬಸ್ಥರ ಕುರಿತು ಸಂತಾಪ ಸೂಚಿಸಿದ್ದಾರೆ. 

ಪಕ್ಷಕ್ಕಾಗಿ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದ ನನ್ನೊಬ್ಬ ಸಹೋದ್ಯೋಗಿಯನ್ನು ಕಳೆದುಕೊಂಡಿದ್ದೇನೆ. ಬದಲಿಸಲಾಗದ ಒಡನಾಡಿ, ನಿಷ್ಠಾವಂತ ಸಹೋದ್ಯೋಗಿ ಮತ್ತು ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಹೇಳಿದ್ದಾರೆ. 

ಅಹ್ಮದ್ ಪಟೇಲ್ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ .ಶಿವಕುಮಾರ್ ಸಂತಾಪ
ಎಐಸಿಸಿ ಖಜಾಂಚಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

'ಅಹ್ಮದ್ ಪಟೇಲ್ ಅವರ ಅವರ ಅಗಲಿಕೆ ಸುದ್ದಿ ಆಘಾತ ತಂದಿದೆ. ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಶಕ್ತಿಯಾಗಿದ್ದರು. ತಮ್ಮ ಇಡೀ ಜೀವನವನ್ನು ಪಕ್ಷಕ್ಕೆ ಮುಡಿಪಾಗಿಟ್ಟ ನಿಷ್ಠಾವಂತ ನಾಯಕ ಎಂದು ಶಿವಕುಮಾರ್ ಸ್ಮರಿಸಿಕೊಂಡಿದ್ದಾರೆ.

ಪಕ್ಷ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದಾಗಲೆಲ್ಲ ಬಲವಾಗಿ ನಿಲ್ಲುತ್ತಿದ್ದವರು ಅಹ್ಮದ್ ಪಟೇಲ್ ಅವರು. ಪಕ್ಷಕ್ಕೆ ಆಧಾರ ಸ್ತಂಭದಂತಿದ್ದ ಹಿರಿಯ ನಾಯಕನ ಅಗಲಿಕೆ ಪಕ್ಷಕ್ಕೆ ಭರಿಸಲಾರದ ನಷ್ಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com