ಉಗ್ರ ಸಂಘಟನೆಯೊಡನೆ ನಂಟು: ಎನ್‌ಐಎನಿಂದ ಪಿಡಿಪಿ ಯುವ ವಿಭಾಗದ ನಾಯಕನ ಬಂಧನ

ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಪಿ ಯುವ ವಿಭಾಗದ ಅಧ್ಯಕ್ಷ ವಹೀದ್ ಪರ‍್ರಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಹೀದ್ ಪರ‍್ರಾ
ವಹೀದ್ ಪರ‍್ರಾ

ಶ್ರೀನಗರ: ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಪಿ ಯುವ ವಿಭಾಗದ ಅಧ್ಯಕ್ಷ ವಹೀದ್ ಪರ‍್ರಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಲ್ವಾಮಾ ಕ್ಷೇತ್ರದಿಂದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಪರ‍್ರಾ ಅವರನ್ನು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಸೋಮವಾರದಿಂದ ನವದೆಹಲಿಯ ಎನ್‌ಐಎ ಕೇಂದ್ರ ಕಚೇರಿಯಲ್ಲಿ ವಿಚಾರಣೆ ನಡೆಸಲಾಯಿತು.

ದಕ್ಷಿಣ ಕಾಶ್ಮೀರದಲ್ಲಿ ಪಿಡಿಪಿಯ ಪುನರುಜ್ಜೀವನಕ್ಕಾಗಿ ಅದರಲ್ಲಿಯೂ ಉಗ್ರರ ಉಪಟಳವಿರುವ ಪುಲ್ವಾಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪರ‍್ರಾ ಅವರ ಹೆಸರು, ಅಮಾನತುಗೊಂಡ ಉಪ ಪೊಲೀಸ್ ವರಿಷ್ಠಾಧಿಕಾರಿ ದವೀಂದರ್ ಸಿಂಗ್ ಪ್ರಕರಣದ ತನಿಖೆಯ ವೇಳೆ ಹೊರಬಿದ್ದಿದೆ. ನವೀದ್ ಬಾಬು-ಡೇವಿಂದರ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಯುವ ವಿಭಾಗದ ನಾಯಕ ವಹೀದ್ ಉರ್ ರೆಹಮಾನ್ ಪರ‍್ರಾ ಅವರನ್ನು ಇಂದು ಎನ್ಐಎ ಬಂಧಿಸಿದೆ.

ಸೋಮವಾರ, ಪಿಟಿಐ ಜೊತೆ ಮಾತನಾಡಿದ ಪರ‍್ರಾ ಈ ಪ್ರಕರಣದ ಬಗ್ಗೆ ಪ್ರಶ್ನಿಸಲಾಗುತ್ತದೆಯೆ ಎನ್ನುವುದು ನನಗೆ ಅರಿವಿಲ್ಲ ಎಂದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com