ಜೈಲಿನಿಂದಲೇ ಬಿಹಾರ ಸರ್ಕಾರ ಕೆಡವಲು ಲಾಲೂ ಪ್ರಸಾದ್ ಸಂಚು: ಸುಶೀಲ್ ಮೋದಿ ಆರೋಪ

ಬಿಜೆಪಿ ಹಿರಿಯ ನಾಯಕ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಟ್ವಿಟ್ಟರ್ ನಲ್ಲಿ ಸಂಚಲನ ಹೇಳಿಕೆ ನೀಡಿದ್ದಾರೆ. ಆರ್ ಜೆಡಿ ಪರಮೋಚ್ಛ ನಾಯಕ ಲಾಲೂ ಪ್ರಸಾದ್ ಯಾದವ್ ಜೈಲಿನಿಂದಲೇ ತಮ್ಮ ಸರ್ಕಾರವನ್ನು ಉರುಳಿಸಲು ನೋಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಲಾಲೂ ಪ್ರಸಾದ್ ಯಾದವ್
ಲಾಲೂ ಪ್ರಸಾದ್ ಯಾದವ್

ಪಾಟ್ನಾ: ಬಿಜೆಪಿ ಹಿರಿಯ ನಾಯಕ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಟ್ವಿಟ್ಟರ್ ನಲ್ಲಿ ಸಂಚಲನ ಹೇಳಿಕೆ ನೀಡಿದ್ದಾರೆ. ಆರ್ ಜೆಡಿ ಪರಮೋಚ್ಛ ನಾಯಕ ಲಾಲೂ ಪ್ರಸಾದ್ ಯಾದವ್ ಜೈಲಿನಿಂದಲೇ ತಮ್ಮ ಸರ್ಕಾರವನ್ನು ಉರುಳಿಸಲು ನೋಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎನ್ ಡಿ ಎ ಶಾಸಕರನ್ನು ಖರೀದಿಸಿ, ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಹೊಸ ಸರ್ಕಾರವನ್ನು ಉರುಳಿಸಲು ಲಾಲು ಪ್ರಸಾದ್ ಯಾದವ್ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಹೀಗೆ ಶಾಸಕರನ್ನು ಖರೀದಿಸಿ, ಮಹಾಘಟ್ ಬಂಧನ್ ಗೆ ನೆರವಾಗಲು ಲಾಲೂ ಪ್ರಸಾದ್ ಪ್ರಯತ್ನಿಸುತ್ತಿದ್ದಾರೆ ಎಂದು ಸುಶೀಲ್ ಮೋದಿ ಆರೋಪಿಸಿದ್ದಾರೆ.

“8051216302” ದೂರವಾಣಿ ಸಂಖ್ಯೆಯಿಂದ ಲಾಲೂ ಪ್ರಸಾದ್ ಯಾದವ್ ಎನ್‌ಡಿಎ ಶಾಸಕರಿಗೆ ಕರೆ ಮಾಡುತ್ತಿದ್ದಾರೆ. ಸಚಿವ ಸ್ಥಾನ ಖಚಿತ  ಎಂದು ಭರವಸೆ ನೀಡುತ್ತಿದ್ದಾರೆ. ನಾನು ದೂರವಾಣಿ ಮಾಡಿದಾಗ ಲಾಲು ಪ್ರಸಾದ್ ಯಾದವ್ ಫೋನ್ ಎತ್ತಿಕೊಂಡರು. ಜೈಲಿನಿಂದ ಇಂತಹ  ಚಿಲ್ಲರೆ ರಾಜಕೀಯ ಮಾಡಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಈ ಪ್ರಯತ್ನದಲ್ಲಿ ನೀವು ಯಶಸ್ವಿಯಾಗುವುದಿಲ್ಲ ಎಂದು ಕೂಡಾ ನಾನು ಲಾಲೂಗೆ ಹೇಳಿದ್ದೇನೆ ಎಂದು ಸುಶೀಲ್ ಮೋದಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಮೇವು ಹಗರಣದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಯಾದವ್ ತಮ್ಮ ಪ್ರಭಾವವನ್ನೇನು   ಕಳೆದುಕೊಂಡಿಲ್ಲ. ಅವರು ಎನ್ ಡಿ ಎ ಶಾಸಕರನ್ನು ಖರೀದಿಸಿದರೂ ಯಾರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಮೋದಿ ಹೇಳಿದ್ದಾರೆ.

ರಾಂಚಿಯಿಂದ ಲಾಲು ಪ್ರಸಾದ್ ಯಾದವ್ ಎನ್‌ಡಿಎ ಶಾಸಕರಿಗೆ ಫೋನ್ ಕರೆ ಮಾಡುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನದ ಆಮಿಷವೊಡ್ಡುತ್ತಿದ್ದಾರೆ ಎಂದು ಸುಶೀಲ್ ಮೋದಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com