ಭಾರತದ ಏಕತೆ ಮತ್ತು ಅಭಿವೃದ್ಧಿಗೆ ಪ್ರಗತಿಪರ ಸಂವಿಧಾನವೇ ಬಹುದೊಡ್ಡ ಶಕ್ತಿ: ಅಮಿತ್ ಶಾ

:ಸಂವಿಧಾನ ದಿನ ಅಂಗವಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತದ ಏಕತೆ ಮತ್ತು ಅಭಿವೃದ್ಧಿಗೆ ನಮ್ಮ ಪ್ರಗತಿಪರ ಸಂವಿಧಾನವೇ ಬಹುದೊಡ್ಡ ಶಕ್ತಿ ಎಂದಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ:ಸಂವಿಧಾನ ದಿನ ಅಂಗವಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತದ ಏಕತೆ ಮತ್ತು ಅಭಿವೃದ್ಧಿಗೆ ನಮ್ಮ ಪ್ರಗತಿಪರ ಸಂವಿಧಾನವೇ ಬಹುದೊಡ್ಡ ಶಕ್ತಿ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಸಂವಿಧಾನ ದಿನದಂದು, ನಾನು ಭಾರತೀಯ ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ್ ಅವರಿಗೆ ವಂದಿಸುತ್ತೇನೆ. ನಮ್ಮ ಪ್ರಗತಿಪರ ಸಂವಿಧಾನ ಭಾರತದ ಏಕತೆ ಮತ್ತು ಅಭಿವೃದ್ಧಿಗೆ ಬಹುದೊಡ್ಡ ಶಕ್ತಿಯಾಗಿದೆ ಎಂದಿದ್ದಾರೆ.

ದೇಶದ ಶ್ರೇಷ್ಠ ವ್ಯಕ್ತಿಗಳ ಕನಸು ಮತ್ತು ಸಂವಿಧಾನದ ನಿಯಮಗಳ ಅನುಸಾರ ದೇಶದ ಪ್ರತಿ ವರ್ಗಕ್ಕೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಂವಿಧಾನ ದಿನ ಅಥವಾ ‘ಸಂವಿದಾನ್ ದಿವಾಸ್’ ಅನ್ನು ರಾಷ್ಟ್ರೀಯ ಕಾನೂನು ದಿನ ಎಂದೂ ಕರೆಯುತ್ತಾರೆ. ಇದನ್ನು ಭಾರತ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಪ್ರತಿವರ್ಷ ನ. 26 ರಂದು ಭಾರತದಲ್ಲಿ ಆಚರಿಸಲಾಗುತ್ತದೆ. 1949ರ ನ. 26ರಂದು, ಭಾರತದ ಸಂಸತ್ತು ಭಾರತದ ಸಂವಿಧಾನವನ್ನು ಅಂಗೀಕರಿಸಿತು ಮತ್ತು ಇದು 26 ಜನವರಿ 1950 ರಿಂದ ಜಾರಿಗೆ ಬಂದಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com