ನಿವಾರ್ ಚಂಡಮಾರುತ: ಭಾರೀ ಮಳೆಗೆ ಚೆನ್ನೈನಲ್ಲಿ 5 ಸಾವು, 80ಕ್ಕೂ ಹೆಚ್ಚು ಮರಗಳು ಧರೆಗೆ

ಭಾರಿ ಮಳೆ ಮತ್ತು ತೀವ್ರ ಗಾಳಿಯೊಂದಿಗೆ ಭೀಕರ ‘ನಿವಾರ’ ಚಂಡಮಾರುತ ಬುಧವಾರ ತಡರಾತ್ರಿ ಪುದುಚೇರಿ ಮತ್ತು ಕಡಲೂರು ಜಿಲ್ಲೆಯ ಕರಾವಳಿ ಪ್ರವೇಶಿಸಲಾರಂಭಿಸಿದೆ. ಭಾರೀ ಮಳೆಯಿಂದಾಗಿ ಸಂಭವಿಸಿದ ವಿವಿಧ ಅನಾಹುತಗಳಲ್ಲಿ ಚೆನ್ನೈನಲ್ಲಿ 5 ಮಂದಿ ಸಾವನ್ನಪ್ಪಿ, 80ಕ್ಕೂ ಹೆಚ್ಚು ಮರಗಳು ಧರುಗುರುಳಿರುವುದಾಗಿ ವರದಿಗಳಿಂದ ತಿಳಿದುಬಂದಿದೆ. 
ಮರಗಳು ಬಿದ್ದಿರುವ ಜಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಗಳು
ಮರಗಳು ಬಿದ್ದಿರುವ ಜಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಗಳು

ಚೆನ್ನೈ: ಭಾರಿ ಮಳೆ ಮತ್ತು ತೀವ್ರ ಗಾಳಿಯೊಂದಿಗೆ ಭೀಕರ ‘ನಿವಾರ’ ಚಂಡಮಾರುತ ಬುಧವಾರ ತಡರಾತ್ರಿ ಪುದುಚೇರಿ ಮತ್ತು ಕಡಲೂರು ಜಿಲ್ಲೆಯ ಕರಾವಳಿ ಪ್ರವೇಶಿಸಲಾರಂಭಿಸಿದೆ. ಭಾರೀ ಮಳೆಯಿಂದಾಗಿ ಸಂಭವಿಸಿದ ವಿವಿಧ ಅನಾಹುತಗಳಲ್ಲಿ ಚೆನ್ನೈನಲ್ಲಿ 5 ಮಂದಿ ಸಾವನ್ನಪ್ಪಿ, 80ಕ್ಕೂ ಹೆಚ್ಚು ಮರಗಳು ಧರುಗುರುಳಿರುವುದಾಗಿ ವರದಿಗಳಿಂದ ತಿಳಿದುಬಂದಿದೆ. 

ಚಂಡಮಾರುತದಿಂದ ಭಾರೀ ಮಳೆ ಶುರುವಾಗಿದೆ ಎಂದು ಚೆನ್ನೈನ ಹವಾಮಾನ ಇಲಾಖೆ ಅಧಿಕಾರಿ ಎಸ್ ಬಾಲಚಂದ್ರನ್ ಹೇಳಿದ್ದಾರೆ.

ಚಂಡಮಾರುತ ಸದ್ಯ, ಕಡಲೂರಿನ ಪೂರ್ವ-ಆಗ್ನೇಯಕ್ಕೆ 50 ಕಿ.ಮೀ ಮತ್ತು ಪುದುಚೇರಿಯ ಪೂರ್ವ ಆಗ್ನೇಯಕ್ಕೆ ಸುಮಾರು 40 ಕಿ.ಮೀ.ದೂರದಲ್ಲಿದೆ.

ಬುಧವಾರ ರಾತ್ರಿಯೇ ನಿವಾಸ್ ತೀವ್ರ ಸ್ವರೂಪ ಪಡೆದುಕೊಂಡಿದ್ದು. ತಮುಳುನಾಡು ಮತ್ತು ಪುದುಚೇರಿಯನ್ನು ಕಾರೈಕಲ್ ಮತ್ತು ಮಾಮಲ್ಲಪುರಂ ನಡುವೆ ಹಾದುಹೋಗಲಿದೆ. ಈ ವೇಳೆಗೆ ಗಂಟೆಗೆ 120-130 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶಗಳಲ್ಲಿ ಭಾರೀ ಮಳೆಯ ಸಾಧ್ಯತೆಗಳಿವೆ. 

ಹೀಗಾಗಿ ಯಾರೂ ಕೂಡ ಮೀನುಗಾರಿಕೆ, ಮೋಟರ್ ಬೋಟ್ಸ್ ಸೇರಿ ಇನ್ನಿತರ ಚಟುವಟಿಕೆಗಳಿಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಮಿಳುನಾಡಿನಲ್ಲಿ ಮಂಗಳವಾರದಿಂದಲೇ ಮಳೆಯಾಗುತ್ತಿದ್ದು, ಚಂಡಮಾರುತದ ಹಿನ್ನೆಲೆಯಲ್ಲಿ ಗುರುವಾರ ರಜೆ ಘೋಷಿಸಲಾಗಿದೆ. 

ಈ ನಡುವೆ ಚಂಡಮಾರುತದ ಸವಾಲುಗಳನ್ನು ಎದುರಿಸಲು ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 1200 ಸಿಬ್ಬಂದಿ ಸಜ್ಜಾಗಿದ್ದಾರೆ. ಇತರೆ 800 ಹೆಚ್ಚುವರಿ ಮಂದಿ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಮತ್ತೊಂದೆಡೆ ಆಂಧ್ರಪ್ರದೇಶದ ಮೇಲೆ ಗತಿ ಚಂಡಮಾರುತ ಕೂಡ ದಾಳಿ ನಡೆಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com