20 ದಿನಗಳಿಂದ ಸ್ಟ್ರಾ, ಸಿಪ್ಪರ್ ಗಾಗಿ ಕೇಳುತ್ತಿರುವ ಭೀಮಾ ಕೊರೆಗಾಂವ್ ನ ಆರೋಪಿ ಸ್ತಾನ್ ಸ್ವಾಮಿ

ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಲ್ಲಿ ಬಂಧನಕ್ಕೊಳಗಾಗಿರುವ ಫಾದರ್ ಸ್ತಾನ್ ಸ್ವಾಮಿ ಜೈಲಿನಲ್ಲಿದ್ದು ಕಳೆದ 20 ದಿನಗಳಿಂದ ಸ್ಟ್ರಾ ಮತ್ತು ಸಿಪ್ಪರ್ ಗಳಿಗಾಗಿ ಕೇಳುತ್ತಿದ್ದು, ಅವುಗಳನ್ನು ಕನಿಷ್ಟ ಮುಂದಿನ ಶುಕ್ರವಾರದವರೆಗೂ ಕಾಯಬೇಕಾಗುತ್ತದೆ.   
20 ದಿನಗಳಿಂದ ಸ್ಟ್ರಾ, ಸಿಪ್ಪರ್ ಗಾಗಿ ಕೇಳುತ್ತಿರುವ ಭೀಮಾ ಕೊರೆಗಾಂವ್ ನ ಆರೋಪಿ ಸ್ತಾನ್ ಸ್ವಾಮಿ

ಮುಂಬೈ: ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಲ್ಲಿ ಬಂಧನಕ್ಕೊಳಗಾಗಿರುವ ಬುಡಕಟ್ಟು ಹಕ್ಕು ಹೋರಾಟಗಾರ ಫಾದರ್ ಸ್ತಾನ್ ಸ್ವಾಮಿ ಜೈಲಿನಲ್ಲಿದ್ದು ಕಳೆದ 20 ದಿನಗಳಿಂದ ಸ್ಟ್ರಾ ಮತ್ತು ಸಿಪ್ಪರ್ ಗಳಿಗಾಗಿ ಕೇಳುತ್ತಿದ್ದು, ಅವುಗಳನ್ನು ಕನಿಷ್ಟ ಮುಂದಿನ ಶುಕ್ರವಾರದವರೆಗೂ ಕಾಯಬೇಕಾಗುತ್ತದೆ.   

ಪಾರ್ಕಿನ್ಸನ್ ಸಮಸ್ಯೆ ಎದುರಿಸುತ್ತಿರುವ ಫಾದರ್ ಸ್ತಾನ್ ಸ್ವಾಮಿ, ಚಳಿಗಾಲಕ್ಕೆ ಧರಿಸುವ ಬಟ್ಟೆಗಳನ್ನೂ ಕೇಳಿದ್ದರು.

ತಮ್ಮ ಬಂಧನದ ವೇಳೆ ವಶಕ್ಕೆ ಪಡೆಯಲಾಗಿದ್ದ ಸ್ಟ್ರಾ ಮತ್ತು ಸಿಪ್ಪರ್ ನ್ನು ತಮಗೆ ವಾಪಸ್ ನೀಡಬೇಕೆಂದು ಮನವಿ ಮಾಡಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ಎನ್ಐಎ, ತನಿಖಾ ಸಂಸ್ಥೆ ಅದನ್ನು ವಶಕ್ಕೆ ಪಡೆದಿಲ್ಲ ಎಂದು ಕೋರ್ಟ್ ಗೆ ಸ್ಪಷ್ಟನೆ ನೀಡಿದೆ.

ಎನ್ಐಎ ಸ್ತಾನ್ ಸ್ವಾಮಿ ಅವರನ್ನು ಎಂದಿಗೂ ವಶಕ್ಕೆ ಪಡೆದಿಲ್ಲ, ಆದ್ದರಿಂದ ಅವರಿಗೆ ಸಂಬಂಧಪಟ್ಟ ಯಾವುದೇ ವಸ್ತುಗಳೂ ಇಲ್ಲ, ಅವರನ್ನು ನೇರವಾಗಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು, ಆದ್ದರಿಂದ ಅವರು ಜೈಲು ಅಧಿಕಾರಿಗಳನ್ನೇ ಕೇಳಬೇಕೆಂದು ಎನ್ಐಎ ಹೇಳಿದೆ.

ಈಗ ನ್ಯಾಯಾಲಯ ಜೈಲು ಅಧಿಕಾರಿಗಳಿಂದ ಪ್ರತಿಕ್ರಿಯೆ ಕೇಳಿದ್ದು ಡಿ.4 ಕ್ಕೆ ವಿಚಾರಣೆಯನ್ನು ಮುಂದೂಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com