ಹೆಮ್ಮೆಯ ಆರಕ್ಷಕರು: ಪ್ಲಾಸ್ಮಾ ದಾನ ಮಾಡಿ 350 ಕೋವಿಡ್ ರೋಗಿಗಳ ಜೀವ ಉಳಿಸಿದ ದೆಹಲಿ ಪೊಲೀಸರು

ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ.

42 ವರ್ಷದ ಮುಖ್ಯ ಪೇದೆ ಕೃಷ್ಣನ್ ಕುಮಾರ್ ಸದ್ಯ ನೈರುತ್ಯ ಜಿಲ್ಲೆಯ ಕಾಪಶೇರಾ ಗಡಿಗೆ ನಿಯೋಜಿಸಲಾಗಿದೆ. ಸುಮಾರು 1 ತಿಂಗಳ ಕಾಲ ವೆಂಟಿಲೇಟರ್ ನಲ್ಲಿದ್ದ ಕೃಷ್ಣನ್ ಕುಮಾರ್ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು.

ನಾನು ಮತ್ತೆ ಬದುಕಿ ಬರುತ್ತೇನೆ ಎಂದು ಯಾರೋಬ್ಬರು ಎಣಿಸಿರಲಿಲ್ಲ,  ದೇವರ ದಯೆ ನಾನು ಚೇತರಿಸಿಕೊಂಡೆ, ನನ್ನ ಆರೋಗ್ಯ ಚೇತರಿಕೆಯಾದ ನಂತರ ನನಗೆ ತಿಳಿಯಿತು ತಮ್ಮ ಪ್ರೀತಿ ಪಾತ್ರರನ್ನು ಉಳಿಸಿಕೊಳ್ಳಲು ಜನ ಏನೆಲ್ಲಾ ಪ್ರಯತ್ನ ಪಡುತ್ತಾರೆ ಎಂದು. ಈ ಯೋಚನೆ ನಾನು ಪ್ಲಾಸ್ಮಾ ದಾನ ಮಾಡಲು ಪ್ರೇರೇಪಿಸಿತು ಎಂದು ಕುಮಾರ್ ತಿಳಿಸಿದ್ದಾರೆ.

ಇದುವರೆಗೂ ಸುಮಾರು ಐದು ಬಾರಿ ಪ್ಲಾಸ್ಮಾ ದಾನ ಮಾಡಿರುವ ಕುಮಾರ್ 15 ಮಂದಿ ಜೀವ ಉಳಿಸಿದ್ದಾರೆ. ಒಬ್ಬ ವ್ಯಕ್ತಿ ಪ್ಲಾಸ್ಮಾ ದಾನ ಮಾಡಿದರೇ ಮೂವರು ರೋಗಿಗಳ ಪ್ರಾಣ ಉಳಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಕುಮಾರ್ ಅವರಿಗೆ ಕೊರೋನಾ ಪಾಸಿಟಿವ್ ಕಂಡು ಬಂತು. ಇವರ ಇಬ್ಬರು ಮಕ್ಕಳು ಮತ್ತು ಪತ್ನಿ ಕೂಡ ಕೊರೋನಾ ಪೀಡಿತರಾಗಿದ್ದರು.  ತಮ್ಮ ಪತ್ನಿ ಪ್ಲಾಸ್ಮಾ ದಾನ ಮಾಡುವುದರಿಂದ ಪ್ರೇರೇಪಿತರಾದ ಕುಮಾರ್ ತಾವು ಪ್ಲಾಸ್ಮಾ ದಾನ ಮಾಡಲು ಮುಂದಾದರು. ಯಾರಿಗಾದರೂ ಪ್ಲಾಸ್ಮಾ ಬೇಕಿದ್ದರೇ ತಾವು ದಾನ ಮಾಡುವುದಾಗಿ ತಮ್ಮನ್ನು ಸಂಪರ್ಕಿಸಲು ತಮ್ಮ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು. 81.346 ಸಿಬ್ಬಂದಿಯಲ್ಲಿ ದೆಹಲಿಯ 6,937 ಸಿಬ್ಬಂದಿ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದರು. ಅದರಲ್ಲಿ 26 ಮಂದಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. 

ನವೆಂಬರ್ 23ರ ವರೆಗೂ ದೆಹಲಿಯ 323 ಪೊಲೀಸ್ ಸಿಬ್ಬಂದಿ ಪ್ಲಾಸ್ಮಾ ದಾನ ಮಾಡಿದ್ದು, ಅದರಲ್ಲಿ 87 ಮಂದಿ ಸಹೋದ್ಯೋಗಿಗಳಿಗೆ ದಾನ ಮಾಡಿದ್ದಾರೆ.  107 ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿದ್ದು ಉಳಿದಂತೆ 134 ಮಂದಿ ಹೊರಗಿನವರಿಗೆ ದಾನ ಮಾಡಿದ್ದಾರೆ.  

ಆಗ್ನೇಯ ಜಿಲ್ಲೆಯ ನಾಲ್ಕು ಪೊಲೀಸ್ ಸಿಬ್ಬಂದಿ ಮತ್ತು ಪೊಲೀಸ್ ತರಬೇತಿ ಕಾಲೇಜಿನ ಒಬ್ಬರು ತಲಾ ಮೂರು ಬಾರಿ ಪ್ಲಾಸ್ಮಾ ದಾನ ಮಾಡಿದ್ದರೆ, ಆಗ್ನೇಯ ಜಿಲ್ಲೆಯ ಎಂಟು ಪೊಲೀಸ್ ಸಿಬ್ಬಂದಿ ಎರಡು ಪ್ಲಾಸ್ಮಾ ದಾನ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com