ಡ್ರ್ಯಾಗನ್ ಹಣಿಯಲು ಭಾರತೀಯ ಸೇನೆ ಹೊಸ ತಂತ್ರ: ಚೀನಾ ಮೇಲೆ ಕಣ್ಣಿಡಲು ಇಸ್ರೇಲ್, ಅಮೆರಿಕ ಡ್ರೋನ್‌ ಬಳಕೆ

ತನ್ನ ಸೇನಾ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನ ನೀಡುವ ಉದ್ದೇಶದೊಡನೆ, ಭಾರತೀಯ ಸೇನೆಯು ಶೀಘ್ರದಲ್ಲೇ ಇಸ್ರೇಲಿ ಹೆರಾನ್ ಮತ್ತು ಅಮೇರಿಕನ್ ಮಿನಿ ಡ್ರೋನ್‌ಗಳನ್ನು ಪೂರ್ವ ಲಡಾಖ್ ಮತ್ತು ಚೀನಾ ಗಡಿಯಲ್ಲಿರುವ ಇತರ ಪ್ರದೇಶಗಳಲ್ಲಿ ಇರಿಸುವ ಮೂಲಕ ತನ್ನ ಕಣ್ಗಾವಲು ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಲಲು ಮುಂದಾಗಿದೆ.
ಇಸ್ರೇಲ್ ನಿರ್ಮಿತ ಹೆರಾನ್ ಡ್ರೋನ್ (ಸಂಗ್ರಹ ಚಿತ್ರ)
ಇಸ್ರೇಲ್ ನಿರ್ಮಿತ ಹೆರಾನ್ ಡ್ರೋನ್ (ಸಂಗ್ರಹ ಚಿತ್ರ)

ನವದೆಹಲಿ: ತನ್ನ ಸೇನಾ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನ ನೀಡುವ ಉದ್ದೇಶದೊಡನೆ, ಭಾರತೀಯ ಸೇನೆಯು ಶೀಘ್ರದಲ್ಲೇ ಇಸ್ರೇಲಿ ಹೆರಾನ್ ಮತ್ತು ಅಮೇರಿಕನ್ ಮಿನಿ ಡ್ರೋನ್‌ಗಳನ್ನು ಪೂರ್ವ ಲಡಾಖ್ ಮತ್ತು ಚೀನಾ ಗಡಿಯಲ್ಲಿರುವ ಇತರ ಪ್ರದೇಶಗಳಲ್ಲಿ ಇರಿಸುವ ಮೂಲಕ ತನ್ನ ಕಣ್ಗಾವಲು ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಲಲು ಮುಂದಾಗಿದೆ.

"ಹೆರಾನ್ ಕಣ್ಗಾವಲು ಡ್ರೋನ್‌ಗಳನ್ನು ಸ್ವಾಧೀನ ಪಡಿಸಿಕೊಳ್ಲುವ ಒಪ್ಪಂದಗಳು ಅಂತಿಮ ಹಂತದಲ್ಲಿವೆ ಮತ್ತು ಡಿಸೆಂಬರ್‌ನಲ್ಲಿ ಇದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ. ಹೆರಾನ್‌ಗಳನ್ನು ಲಡಾಖ್ ವಲಯದಲ್ಲಿ ನಿಯೋಜಿಸಲಾಗುವುದು ಮತ್ತು ಅವು ಭಾರತೀಯ ಸಶಸ್ತ್ರಪಡೆಯಲ್ಲಿ ಅಸ್ತಿತ್ವದಲ್ಲಿರುವ ನೌಕಾಪಡೆಗಿಂತ ಹೆಚ್ಚು ಆಧುನಿಕವಾದವುಗಳಾಗಿದೆ" ಸರ್ಕಾರಿ ಮೂಲಗಳು ಎಎನ್‌ಐಗೆ ತಿಳಿಸಿವೆ.

ಈ ಡ್ರೋನ್‌ಗಳ ಸ್ವಾಧೀನ ಪ್ರಕ್ರಿಯೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರರಕ್ಷಣಾ ಪಡೆಗಳಿಗೆ ನೀಡಿದ ತುರ್ತು ಆರ್ಥಿಕ ಶಕ್ತಿಗಳ ಅಡಿಯಲ್ಲಿ ಬರುತ್ತದೆ. ಪ್ರಧಾನಿ ಮೋದಿ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷದ ಮಧ್ಯೆ ತಮ್ಮ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಲು 500 ಕೋಟಿ ರೂ. ತುರ್ತು ಆರ್ಥಿಕ ಶಕ್ತಿಯನ್ನು ನೀಡಿದ್ದಾರೆ. 

ಮೂಲಗಳ ಪ್ರಕಾರ, ಇತರ ಸಣ್ಣ ಅಥವಾ ಮಿನಿ ಡ್ರೋನ್‌ಗಳನ್ನು ಯುಎಸ್‌ನಿಂದ ಸ್ವಾಧೀನಪಡಿಸಿಕೊಳ್ಳಲಾಗುತ್ತಿದ್ದು, ಅದನ್ನು ಬೆಟಾಲಿಯನ್ ಮಟ್ಟದಲ್ಲಿ ಆಯಾ ಸ್ಥಳದ ಸೈನಿಕರಿಗೆ ಒದಗಿಸಲಾಗುವುದು ಮತ್ತು ಕೈಯಿಂದ ವಆಲಿತವಾಗುವ ಡ್ರೋನ್‌ಗಳನ್ನು ಆಯಾ ಸ್ಥಳ ಅಥವಾ ಪ್ರದೇಶದ ಬಗ್ಗೆ ಜಾಗೃತಿ ಮೂಡಿಸಲು ಬಳಸಲಾಗುತ್ತದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com