ಆರ್ಟಿಕಲ್ 370 ರದ್ದತಿ ನಂತರ ಮೊದಲ ಚುನಾವಣೆಗೆ ಜಮ್ಮು-ಕಾಶ್ಮೀರ ಸನ್ನದ್ಧ

ಆರ್ಟಿಕಲ್ 370 ಹಾಗೂ ಜಮ್ಮು-ಕಾಶ್ಮೀರದ ಮರು ವಿಂಗಡಣೆಯ ನಂತರ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು ಕೇಂದ್ರಾಡಳಿತ ಪ್ರದೇಶ ಸನ್ನದ್ಧವಾಗಿದೆ. 
ಚುನಾವಣೆ (ಸಂಗ್ರಹ ಚಿತ್ರ)
ಚುನಾವಣೆ (ಸಂಗ್ರಹ ಚಿತ್ರ)

ಶ್ರೀನಗರ: ಆರ್ಟಿಕಲ್ 370 ಹಾಗೂ ಜಮ್ಮು-ಕಾಶ್ಮೀರದ ಮರು ವಿಂಗಡಣೆಯ ನಂತರ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು ಕೇಂದ್ರಾಡಳಿತ ಪ್ರದೇಶ ಸನ್ನದ್ಧವಾಗಿದೆ. 

ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವುದಕ್ಕೆ ಕೊನೆಯ ಪ್ರಯತ್ನ ಮಾಡಿವೆ. ನವೆಂಬರ್ 28 ರಿಂದ ಡಿಸೆಂಬರ್ 22 ವರೆಗೆ 8 ಹಂತಗಳಲ್ಲಿ ಜಿಲ್ಲಾ ಅಭಿವೃದ್ಧಿ ಪರಿಷತ್ (ಡಿಡಿಸಿ) ಚುನಾವಣೆಗಳು ನಡೆಯಲಿದ್ದು, 20 ಜಿಲ್ಲೆಗಳಿಂದ 280 ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. 

ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾಯಿತ ಸರ್ಕಾರ ಇಲ್ಲದೇ ಇರುವುದರಿಂದ ಈಗ ಈ ಪರಿಷತ್ ಗಳೇ ಆಡಳಿತದ ಹೊಸ ವಿಭಾಗಗಳಾಗಿ ಕಾರ್ಯನಿರ್ವಹಿಸಲಿವೆ.

ಡಿಡಿಸಿ ಚುನಾವಣೆಯ ಜೊತೆಗೆ 230 ನಗರ ಸ್ಥಳೀಯ ಸಂಸ್ಥೆ (ಯುಎಲ್ ಬಿ) ಗಳಿಗೆ ಹಾಗೂ 12000 ಪಂಚಾಯತ್ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com