
ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಶನಿವಾರ ಪುಣೆಯಲ್ಲಿರುವ ಸೀರಮ್ ಲ್ಯಾಬ್ ಗೆ ಭೇಟಿ ನೀಡಲಿದ್ದಾರೆ.
ಜಗತ್ತಿನಾದ್ಯಂತ ಕೊರೋನಾ ಮಹಾಮಾರಿ ದೊಡ್ಡ ಅನಾಹುತ ಸೃಷ್ಟಿಸಿದೆ. ಹೀಗಾಗಿ ಬಲಿಷ್ಠ ರಾಷ್ಟ್ರಗಳು ಲಸಿಕೆ ಕಂಡು ಹಿಡಿಯುವಲ್ಲಿ ನಿರತವಾಗಿವೆ. ಇನ್ನು ಭಾರತದಲ್ಲೂ ಲಸಿಕೆ ತಯಾರಿ ಹಾಗೂ ವಿತರಣಾ ವ್ಯವಸ್ಥೆಯ ಕುರಿತು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ.
ಪುಣೆಯಲ್ಲಿರುವ ಸೀರಮ್ ಲ್ಯಾಬ್ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಜೊತೆಗೂಡಿ ಭಾರತದಲ್ಲಿ ಕೋವಿಡ್ ವೈರಸ್ ನಿಯಂತ್ರಣದ ಲಸಿಕೆ ತಯಾರಿಕೆಗೆ ಮುಂದಾಗುತ್ತಿದ್ದು ಹೀಗಾಗಿ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ)ದ ಲ್ಯಾಬ್ ಗೆ ಶನಿವಾರ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ.
ಕೇಂದ್ರ ಔಷದ ಪ್ರಮಾಣಿತ ನಿಯಂತ್ರಣ ಸಂಸ್ಥೆ ದೇಶದಲ್ಲಿ ಏಳು ಸಂಸ್ಥೆಗಳಿಗೆ ಪ್ರಿ ಕ್ಲಿನಿಕಲ್ ಟೆಸ್ಟ್ ಕೊರೋನಾ ಲಸಿಕೆ ತಯಾರಿಸಲು ಅನುಮತಿ ನೀಡಿದೆ. ಇವುಗಳ ಪೈಕಿ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಜೆನ್ನೋವಾ ಬಯೋಫಾರ್ಮಾಸಿಟಿಕಲ್ಸ್ ಸಹ ಸೇರಿವೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಲಸಿಕೆ ವಿತರಣೆಗೆ ಸಿದ್ಧತೆ ಕೈಗೊಳ್ಳಲಾಗಿದ್ದು, ರಾಜ್ಯಾದ್ಯಂತ 29,451 ಲಸಿಕೆ ವಿತರಣೆ ಕೇಂದ್ರಗಳು, 10,000 ವ್ಯಾಕ್ಸಿನೇಟರ್ ಸಿಬ್ಬಂದಿಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ 2,855 ಕೋಲ್ಡ್ ಚೇನ್ ಕೇಂದ್ರಗಳು ಲಭ್ಯವಿದ್ದು, ಪಶು ಸಂಗೋಪನೆ ಇಲಾಖೆ, ಖಾಸಗಿ ಆಸ್ಪತ್ರೆಗಳ ಸೌಲಭ್ಯಗಳನ್ನೂ ಬಳಸಲಾಗುವುದು. (2/2) pic.twitter.com/Jt5HAhiHto
— Dr Sudhakar K (@mla_sudhakar) November 24, 2020