ಹೈದರಾಬಾದ್: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಒಸ್ಮಾನಿಯಾ ವಿಶ್ವವಿದ್ಯಾಲಯ ದೂರು ದಾಖಲು
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್ ನ ಒಸ್ಮಾನಿಯಾ ವಿಶ್ವವಿದ್ಯಾಲಯ ಪೊಲೀಸ್ ಕೇಸು ದಾಖಲಿಸಿದೆ. ಭಾರತೀಯ ದಂಡಸಂಹಿತೆ ಸೆಕ್ಷನ್ 447ರಡಿಯಲ್ಲಿ ಅಪರಾಧ ಅತಿಕ್ರಮಣ ಕೇಸನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನೀಡಿರುವ ದೂರಿನ ಆಧಾರದ ಮೇಲೆ ದಾಖಲಿಸಲಾಗಿದೆ.
Published: 26th November 2020 09:32 AM | Last Updated: 26th November 2020 09:32 AM | A+A A-

ಸಂಸದ ತೇಜಸ್ವಿ ಸೂರ್ಯ
ಹೈದರಾಬಾದ್: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್ ನ ಒಸ್ಮಾನಿಯಾ ವಿಶ್ವವಿದ್ಯಾಲಯ ಪೊಲೀಸ್ ಕೇಸು ದಾಖಲಿಸಿದೆ. ಭಾರತೀಯ ದಂಡಸಂಹಿತೆ ಸೆಕ್ಷನ್ 447ರಡಿಯಲ್ಲಿ ಅಪರಾಧ ಅತಿಕ್ರಮಣ ಕೇಸನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನೀಡಿರುವ ದೂರಿನ ಆಧಾರದ ಮೇಲೆ ದಾಖಲಿಸಲಾಗಿದೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಸಂಬಂಧ ಪಕ್ಷದ ಪ್ರಚಾರದಲ್ಲಿ ಭಾಗವಹಿಸಲು ಹೈದರಾಬಾದ್ ಗೆ ಬಂದಿದ್ದ ಸಂಸದ ತೇಜಸ್ವಿ ಸೂರ್ಯ, ವಿಶ್ವವಿದ್ಯಾಲಯದ ಎನ್ ಸಿಸಿ ಗೇಟ್ ಬಳಿ ಹಾಕಲಾಗಿದ್ದ ತಡೆಯನ್ನು ತಮ್ಮ ಬೆಂಬಲಿಗರೊಂದಿಗೆ ಭೇದಿಸಿ ಒಳನುಗ್ಗಿದ್ದಾರೆ ಎಂದು ಆಡಳಿತ ಮಂಡಳಿ ಆರೋಪಿಸಿದೆ.
ನಂತರ ತೇಜಸ್ವಿ ಸೂರ್ಯ ಕಲಾ ಕಾಲೇಜಿನಲ್ಲಿ ಭಾಷಣ ಮಾಡಿದ್ದರು.ವಿಶ್ವವಿದ್ಯಾಲಯ ರೆಜಿಸ್ಟ್ರಾರ್ ಡಾ ಸಿ ಎಚ್ ಗೋಪಾಲ್ ರೆಡ್ಡಿ, ಕಾರ್ಯಕ್ರಮ ನಡೆಸಲು ಅವರಿಗೆ ಅನುಮತಿಯಿರಲಿಲ್ಲ. ವಿಶ್ವವಿದ್ಯಾಲಯದಲ್ಲಿ ಇಂತಹ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಉಪ ಕುಲಪತಿಗಳ ಆದೇಶದ ಮೇರೆಗೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಎಂದರು.