'ಸಂವಿಧಾನ ದಿನದಂದು ರೈತರ ಹಕ್ಕುಗಳನ್ನು ಹತ್ತಿಕ್ಕಲು ನೋಡಿದ್ದು ದುರಂತ ವ್ಯಂಗ್ಯ': ಪಂಜಾಬ್ ಸಿಎಂ ಕ್ಯಾ. ಅಮರಿಂದರ್ ಸಿಂಗ್ 

ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ರೈತರ ವಿರುದ್ಧ ಹರ್ಯಾಣ ಪೊಲೀಸರ ಕ್ರೂರತೆಯ ನಡವಳಿಕೆ ಸಂವಿಧಾನ ದಿನವಾದ ನವೆಂಬರ್ 26ರ ಈ ದಿನ ಸಂವಿಧಾನ ದಿನದ ದುರಂತವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ಹೇಳಿದ್ದಾರೆ.
ಕ್ಯಾ.ಅಮರಿಂದರ್ ಸಿಂಗ್
ಕ್ಯಾ.ಅಮರಿಂದರ್ ಸಿಂಗ್

ನವದೆಹಲಿ: ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ರೈತರ ವಿರುದ್ಧ ಹರ್ಯಾಣ ಪೊಲೀಸರ ಕ್ರೂರತೆಯ ನಡವಳಿಕೆ ಸಂವಿಧಾನ ದಿನವಾದ ನವೆಂಬರ್ 26ರ ಈ ದಿನ ಸಂವಿಧಾನ ದಿನದ ದುರಂತವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಹೇಳಿದ್ದಾರೆ.

ಸಂವಿಧಾನ ದಿನವಾದ ಇಂದು ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಹೊರಟಿದ್ದ ರೈತರ ಹಕ್ಕುಗಳನ್ನು ಹತ್ತಿಕ್ಕಲು ನೋಡಿದ್ದು ಬೇಸರದ ದುರಂತ. ರೈತರು ಅವರ ಪಾಡಿಗೆ ದೆಹಲಿ ಚಲೋ ಮಾಡಿಕೊಂಡು ಹೋಗಲಿ ಮುಖ್ಯಮಂತ್ರಿ ಎಂ ಎಲ್ ಖಟ್ಟರ್ ರವರೇ, ಅವರನ್ನು ಅಂಚಿಗೆ ತಳ್ಳಬೇಡಿ.ರೈತರ ಧ್ವನಿಯನ್ನು ಹತ್ತಿಕ್ಕಬೇಡಿ, ದೆಹಲಿಗೆ ಶಾಂತಿಯುತವಾಗಿ ಹೋಗಲು ಬಿಡಿ ಎಂದು ಕ್ಯಾ.ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ದೇಶದ ಜನರಿಗೆ ಅನ್ನ ಹಾಕುವ ಕೈಗಳನ್ನು ಕಟ್ಟಿಹಾಕಬೇಡಿ, ಅವರ ಕೈಗಳನ್ನು ಮೇಲೆತ್ತಬೇಕು, ಅದು ಬಿಟ್ಟು ತಳ್ಳಬೇಡಿ, ರೈತರ ವಿರುದ್ಧ ಇಂತಹ ಬೆದರಿಕೆ ತಂತ್ರಗಳನ್ನು ಅನುಸರಿಸಬೇಡಿ ಎಂದು ಹರ್ಯಾಣ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಟ್ಯಾಗ್ ಮಾಡಿ ಪಂಜಾಬ್ ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com