ಸಮಾಜ ತನ್ನ ಕರ್ತವ್ಯ ನಿಭಾಯಿಸಿದಾಗಲಷ್ಟೇ ಸಂವಿಧಾನದ ಹಕ್ಕುಗಳೂ ಸುರಕ್ಷಿತ: ಯೋಗಿ ಆದಿತ್ಯನಾಥ್

"ಸಮಾಜ ತನ್ನ ಮೂಲಭೂತ ಕರ್ತವ್ಯಗಳನ್ನು ಜಾಗೃತೆಯಿಂದ ನಿಭಾಯಿಸಿದಾಗಲಷ್ಟೇ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ನೀಡಿರುವ ಹಕ್ಕುಗಳು ಸುರಕ್ಷಿತವಾಗಿರಲು ಸಾಧ್ಯ" ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: "ಸಮಾಜ ತನ್ನ ಮೂಲಭೂತ ಕರ್ತವ್ಯಗಳನ್ನು ಜಾಗೃತೆಯಿಂದ ನಿಭಾಯಿಸಿದಾಗಲಷ್ಟೇ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ನೀಡಿರುವ ಹಕ್ಕುಗಳು ಸುರಕ್ಷಿತವಾಗಿರಲು ಸಾಧ್ಯ" ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

'ಸಂವಿಧಾನ ದಿನ' ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಎಲ್ಲರೂ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ, ಆದರೆ ಕರ್ತವ್ಯದ ವಿಷಯ ಬಂದಾಗ  ಓಡಿಹೋಗುತ್ತೇವೆ" ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

"ಒಂದೆಡೆ ನಮ್ಮ ದೇಶದ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿದೆ, ಹಾಗೆಯೇ ಅದಕ್ಕೆ ತಕ್ಕಂತೆ ಒಂದಷ್ಟು ಕರ್ತವ್ಯ, ಜವಾಬ್ದಾರಿಗಳನ್ನೂ ನೀಡಿದೆ, ಈ ಕರ್ತವ್ಯ, ಜವಾಬ್ದಾರಿಗಳನ್ನು ನೆನಪಿಸುವುದು ಸಂವಿಧಾನ ದಿನದ ಮುಖ್ಯ ಉದ್ದೇಶ" ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

"ಈ ಮೂಲಭೂತ ಕರ್ತವ್ಯಗಳು ಪ್ರಜೆಗಳಿಗೆ ಅವರ ವೈಯಕ್ತಿಕ ಜೀವನದಷ್ಟೇ ಮುಖ್ಯವಾಗಿರುವಂಥಹದ್ದು ಸಮಾಜ ತನ್ನ ಮೂಲಭೂತ ಕರ್ತವ್ಯಗಳನ್ನು ಜಾಗೃತೆಯಿಂದ ನಿಭಾಯಿಸಿದಾಗಲಷ್ಟೇ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ನೀಡಿರುವ ಹಕ್ಕುಗಳು ಸುರಕ್ಷಿತವಾಗಿರಲು ಸಾಧ್ಯ" ಎಂದು ಕಿವಿಮಾತು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com