ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಮತ್ತೊಂದು ಆಘಾತ: ಮತ್ತೋರ್ವ ಟಿಎಂಸಿ ನಾಯಕ ಬಿಜೆಪಿಗೆ ಸೇರ್ಪಡೆ
ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಸಂದರ್ಭದಲ್ಲಿ ಟಿಎಂಸಿಗೆ ಮತ್ತೊಂದು ಆಘಾತ ಎದುರಾಗಿದ್ದು, ತನ್ನ ಶಾಸಕ ಮಿಹಿರ್ ಗೋಸ್ವಾಮಿ ಪಕ್ಷ ತೊರೆದಿದ್ದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
Published: 27th November 2020 11:14 PM | Last Updated: 27th November 2020 11:20 PM | A+A A-

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಮತ್ತೊಂದು ಆಘಾತ: ಮತ್ತೋರ್ವ ಟಿಎಂಸಿ ನಾಯಕ ಬಿಜೆಪಿಗೆ ಸೇರ್ಪಡೆ
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಸಂದರ್ಭದಲ್ಲಿ ಟಿಎಂಸಿಗೆ ಮತ್ತೊಂದು ಆಘಾತ ಎದುರಾಗಿದ್ದು, ತನ್ನ ಶಾಸಕ ಮಿಹಿರ್ ಗೋಸ್ವಾಮಿ ಪಕ್ಷ ತೊರೆದಿದ್ದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಮೋದಿ ನೇತೃತ್ವದಲ್ಲಿ ಹೊಸ ರಾಜಕೀಯ ಯುಗಕ್ಕಾಗಿ ತಾವು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರ ಸಮ್ಮುಖದಲ್ಲಿ ಶಾಸಕ ಮಿಹಿರ್ ಗೋಸ್ವಾಮಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಅನೈತಿಕ, ತಪ್ಪುಗಳ ವಿರುದ್ಧದ ಹೋರಾಟ ಎಂದು ಗೋಸ್ವಾಮಿ ತಿಳಿಸಿದ್ದಾರೆ.
ಕೂಚ್ ಬೆಹೆರ್ ದಕ್ಷಿಣದ ಶಾಸಕರಾಗಿರುವ ಗೋಸ್ವಾಮಿ 22 ವರ್ಷಗಳಿಂದ ಟಿಎಂಸಿ ಜೊತೆ ಗುರುತಿಸಿಕೊಂಡಿದ್ದು, ತಮಗೆ ಪಕ್ಷದಲ್ಲಿ ಆಗುತ್ತಿರುವ ಇನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಟಿಎಂಸಿ ತೊರೆಯುತ್ತಿರುವ ನಾಯಕರ ಸಂಖ್ಯೆ ಹೆಚ್ಚಾಗತೊಡಗಿದ್ದು, ಹಿರಿಯ ನಾಯಕ, ಸಚಿವರಾಗಿದ್ದ ಸುವೇಂದು ಅಧಿಕಾರಿ ಪಕ್ಷ ತೊರೆದಿದ್ದರು. 2021 ರ ಮೊದಲಾರ್ಧದಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದೆ.