ಹೈದ್ರಾಬಾದ್: ದ್ವೇಷಕಾರಿ ಭಾಷಣ, ಅಕ್ಬರುದ್ದೀನ್ ಓವೈಸಿ ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು

ಷ ಹರಡುವ ಭಾಷಣಗಳಿಂದಲೇ ಪ್ರಸಿದ್ಧಿಯಾಗಿರುವ  ಆಲ್ ಇಂಡಿಯಾ  ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖಂಡ ಅಕ್ಬರುದ್ದೀನ್ ಓವೈಸಿ ಮತ್ತು ತೆಲಂಗಾಣ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಕ್ಬರುದ್ದೀನ್ ಓವೈಸಿ
ಅಕ್ಬರುದ್ದೀನ್ ಓವೈಸಿ

ಹೈದ್ರಾಬಾದ್: ದ್ವೇಷ ಹರಡುವ ಭಾಷಣಗಳಿಂದಲೇ ಪ್ರಸಿದ್ಧಿಯಾಗಿರುವ  ಆಲ್ ಇಂಡಿಯಾ  ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖಂಡ ಅಕ್ಬರುದ್ದೀನ್ ಓವೈಸಿ ಮತ್ತು ತೆಲಂಗಾಣ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 ಭಾರತೀಯ ದಂಡ ಸಂಹಿತೆಯ ( ಐಪಿಸಿ) ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ ಆರ್ ನಗರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗ್ರೇಟರ್ ಹೈದ್ರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಅಕ್ಬರುದ್ದೀನ್, ನೆಕ್ಲೇಸ್ ರಸ್ತೆ ನಿರ್ಮಿಸಲಾಗಿರುವ ಪಿವಿ ನರಸಿಂಹ ರಾವ್   ( ಜ್ಞಾನ ಭೂಮಿ) ಮತ್ತು ಎನ್ ಟಿ ರಾಮ ರಾವ್ ( ಎನ್ ಟಿಆರ್ ಘಾಟ್ ) ಸ್ಮಾರಕಗಳನ್ನು ತೆರವುಗೊಳಿಸಲು ಒತ್ತಾಯಿಸಿದ್ದರು. 

ಇದಕ್ಕೂ ಮುನ್ನ ಚುನಾವಣಾ ಪ್ರಚಾರ ಭಾಷಣ ಮಾಡಿದ್ದ ತೆಲಂಗಾಣ ಬಿಜೆಪಿ ಅಧ್ಯಕ್ಷರು,  ಗ್ರೇಟರ್ ಹೈದ್ರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ ಒಂದು ಬಾರಿ ಗೆದ್ದರೆ,  ಅಕ್ರಮವಾಗಿ ವಾಸಿಸುತ್ತಿರುವ ರೋಹಿಂಗ್ಯಗಳನ್ನು ಓಡಿಸಲು ಸರ್ಜಿಕಲ್ ಸ್ಟ್ರೈಕ್ ನಡೆಸಲಾಗುವುದು ಎಂದು  ಹೇಳಿಕೆ ನೀಡಿದ್ದರು.

ಡಿಸೆಂಬರ್ 1 ರಂದು ಗ್ರೇಟರ್ ಹೈದ್ರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ನಡೆಯಲಿದ್ದು, ಡಿಸೆಂಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com