ಪೂರ್ವ ಲಡಾಕ್‌ನ ಪಾಂಗೊಂಗ್ ಸರೋವರದ ಬಳಿ ಮಾರ್ಕೋಸ್ ನಿಯೋಜನೆ: ಚೀನಾಗೆ ನಡುಕ!

ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಪೂರ್ವ ಲಡಾಕ್‌ನ ಪಂಗೊಂಗ್ ಸರೋವರ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಮೆರೈನ್ ಕಮಾಂಡೋಗಳನ್ನು(ಮಾರ್ಕೋಸ್) ಕೇಂದ್ರ ಸರ್ಕಾರ ನಿಯೋಜಿಸಿದೆ.
ಮಾರ್ಕೋಸ್
ಮಾರ್ಕೋಸ್

ನವದೆಹಲಿ: ಪೂರ್ವ ಲಡಾಕ್‌ನ ಪಾಂಗೊಂಗ್ ಸರೋವರದ ಬಳಿ ಮಾರ್ಕೋಸ್ ನಿಯೋಜನೆ: ಸೇನೆಗೆ ಆನೆ ಬಲ!
ನವದೆಹಲಿ: ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಪೂರ್ವ ಲಡಾಕ್‌ನ ಪಂಗೊಂಗ್ ಸರೋವರ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಮೆರೈನ್ ಕಮಾಂಡೋಗಳನ್ನು(ಮಾರ್ಕೋಸ್) ಕೇಂದ್ರ ಸರ್ಕಾರ ನಿಯೋಜಿಸಿದೆ.

ಪೂರ್ವ ಲಡಾಕ್‌ನಲ್ಲಿ ಮಾರ್ಕೋಸ್ ಅನ್ನು ನಿಯೋಜಿಸುವುದರ ಹಿಂದಿನ ಉದ್ದೇಶ. ಅದಾಗಲೇ ಭಾರತೀಯ ವಾಯುಪಡೆಯ ಗರುಡ ಪಡೆ ಮತ್ತು ಭಾರತೀಯ ಸೇನೆಯ ಪ್ಯಾರಾ ವಿಶೇಷ ಪಡೆಗಳು ಘರ್ಷಣೆಗಳ ಬಳಿಕ ನಿಯೋಜನೆಗೊಂಡಿದ್ದು ಇದೀಗ ಮಾರ್ಕೋಸ್ ಪಡೆಯನ್ನು ನಿಯೋಜಿಸುವ ಮೂಲಕ ಹೆಚ್ಚಿನ ಬಲವನ್ನು ತರುವುದಾಗಿದೆ.

ಭಾರತೀಯ ಮತ್ತು ಚೀನೀ ಪಡೆಗಳು ಸಂಘರ್ಷಕ್ಕೆ ಕಾರಣವಾಗಿದ್ದ ಪ್ಯಾಂಗೊಂಗ್ ಸರೋವರ ಪ್ರದೇಶದಲ್ಲಿ ಮಾರ್ಕೋಸ್ ಅನ್ನು ನಿಯೋಜಿಸಲಾಗಿದೆ. ನೌಕಾಪಡೆಯ ಕಮಾಂಡೋಗಳು ಶೀಘ್ರದಲ್ಲೇ ಸರೋವರದಲ್ಲಿ ಕಾರ್ಯಾಚರಣೆಗಾಗಿ ಹೊಸ ಬೋಟ್ ಗಳನ್ನು ಪಡೆಯಲಿದ್ದಾರೆ. ಅದರಲ್ಲಿ ಸರೋವರದ ಕಾರ್ಯಾಚರಣೆಗೆ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳಿವೆ ಎಂದು ಮೂಲಗಳು ತಿಳಿಸಿವೆ.

ಪ್ಯಾರಾ ವಿಶೇಷ ಪಡೆ ಮತ್ತು ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನ ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ ಸೇರಿದಂತೆ ಭಾರತೀಯ ಸೇನೆಯ ವಿಶೇಷ ಪಡೆಗಳು ಪೂರ್ವ ಲಡಾಖ್‌ನಲ್ಲಿ ವಿಶೇಷ ಕಾರ್ಯಾಚರಣೆಗಾಗಿ ದೀರ್ಘಕಾಲ ಕಾರ್ಯನಿರ್ವಹಿಸುತ್ತಿವೆ. ಭಾರತೀಯ ವಾಯುಪಡೆಯ ಗರುಡ ವಿಶೇಷ ಪಡೆಗಳು ಸಂಘರ್ಷದ ಆರಂಭಿಕ ದಿನಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ(ಎಲ್‌ಎಸಿ) ಆಯಕಟ್ಟಿನ ಎತ್ತರಕ್ಕೆ ಬೆಟ್ಟದ ತುದಿಗಳನ್ನು ತನ್ನ ಸುಪರ್ಧೀಗೆ ತೆಗೆದುಕೊಂಡಿದ್ದು ಶತ್ರುದೇಶ ಮೇಲೆ ಹಿಡಿತ ಸಾಧಿಸಿತ್ತು.

ಮಾರ್ಕೋಸ್ ಸಾಮರ್ಥ್ಯ ಏನು?
ಭೂಸೇನೆಯಲ್ಲಿ ಎನ್ ಎಸ್ ಜಿ, ಪ್ಯಾರಾ ಕಮಾಂಡೊ, ವಾಯುಪಡೆಯಲ್ಲಿ ಗರುಡಾ ಕಮಾಂಡೊಗಳಿದ್ದಂತೆ ನೌಕಾ ಪಡೆಯಲ್ಲಿ ಈ ಮಾರ್ಕೋಸ್ ಪಡೆಯಿದೆ. ಮಾರ್ಕೋಸ್ ವಾಯುಪಡೆ, ಗುರುಡಾಕ್ಕಿಂತ ಹಳೆಯದು ಮತ್ತು ಶಕ್ತಿಶಾಲಿಯಾಗಿರುತ್ತದೆ. ಯಾವುದೇ ಪ್ರತಿಕೂಲ ಸನ್ನಿವೇಶದಲ್ಲೂ ಭೂಸೇನೆ, ವಾಯುಪಡೆಯ ಜೊತೆಗೂಡಿ ಕೆಲಸ ಮಾಡುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com