ಭಾರತ ಆತಿಥ್ಯದ ಎಸ್ ಸಿಒ ಸರ್ಕಾರದ ಮುಖ್ಯಸ್ಥರ ಶೃಂಗಸಭೆಯಲ್ಲಿ ಆರು ರಾಷ್ಟ್ರಗಳ ಪ್ರಧಾನಿಗಳು ಭಾಗಿ

 ಸೋಮವಾರ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಸರ್ಕಾರದ ಮುಖ್ಯಸ್ಥರ ಶೃಂಗಸಭೆಯಲ್ಲಿ ರಷ್ಯಾ, ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ನ ಪ್ರದಾನ ಮಂತ್ರಿಗಳು ಪಾಲ್ಗೊಳ್ಳಲಿದ್ದು, ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಂಸದೀಯ ಕಾರ್ಯದರ್ಶಿ ಅದರ ಸಂಸತ್ ಪ್ರತಿನಿಧಿಸುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸೋಮವಾರ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಸರ್ಕಾರದ ಮುಖ್ಯಸ್ಥರ ಶೃಂಗಸಭೆಯಲ್ಲಿ ರಷ್ಯಾ, ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ನ ಪ್ರದಾನ ಮಂತ್ರಿಗಳು ಪಾಲ್ಗೊಳ್ಳಲಿದ್ದು, ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಂಸದೀಯ ಕಾರ್ಯದರ್ಶಿ ಅದರ ಸಂಸತ್ ಪ್ರತಿನಿಧಿಸುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ತಿಳಿಸಿದೆ.

2017 ರಲ್ಲಿ ಪ್ರಭಾವಿ ಗುಂಪಿನ ಸಂಪೂರ್ಣ ಸದಸ್ಯತ್ವವನ್ನು ಪಡೆದ ನಂತರ ಭಾರತ ಮೊದಲ ಬಾರಿಗೆ ಶೃಂಗಸಭೆಯನ್ನು ಆಯೋಜಿಸುತ್ತಿದೆ. ವರ್ಚುಯಲ್ ಮಾದರಿಯಲ್ಲಿ ಶೃಂಗಸಭೆ ನಡೆಯಲಿದೆ.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ  19ನೇ ಶಾಂಘೈ ಸಹಕಾರ ಸಂಘಟನೆಯ ಸರ್ಕಾರದ ಮುಖ್ಯಸ್ಥರ ಸಭೆಯಲ್ಲಿ ವ್ಯಾಪಾರ ಮತ್ತು ಆರ್ಥಿಕ ಸಿದ್ದಾಂತದ ಗಮನ ಹರಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. 

ಶಾಂಘೈ ಸಹಕಾರ ಸಂಘಟನೆಯ ಸದಸ್ಯರಲ್ಲದೇ ಅಪ್ಘಾನಿಸ್ತಾನ್, ಬೆಲಾರೂಸ್, ಇರಾನ್ ಮತ್ತು ಮೊಂಗಲಿಯಾ ರಾಷ್ಟ್ರಗಳು ವೀಕ್ಷಕ ರಾಷ್ಟ್ರಗಳಾಗಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿವೆ. ಅಪ್ಘಾನಿಸ್ತಾನದ ಅಧ್ಯಕ್ಷ,ರು, ಇರಾನ್ ನ ಮೊದಲ ಉಪಾಧ್ಯಕ್ಷ, ಬೆಲಾರೂಸ್ ಪ್ರಧಾನ ಮಂತ್ರಿ ಮತ್ತು ಮೊಂಗಲಿಯಾದ ಪ್ರಧಾನ ಮಂತ್ರಿ ಅವರ ರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ. ತುರ್ಕಮೆನಿಸ್ತಾನವನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ ಮತ್ತು ಅದರ ಮಂತ್ರಿಮಂಡಲದ ಉಪಾಧ್ಯಕ್ಷರು ಪ್ರತಿನಿಧಿಸಲಿದ್ದಾರೆ.

ಎಸ್‌ಸಿಒ ಪ್ರಧಾನ ಕಾರ್ಯದರ್ಶಿ ಮತ್ತು ಎಸ್‌ಸಿಒ ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ರಚನೆ ರಾಟ್ಸ್ ಕಾರ್ಯನಿರ್ವಾಹಕ ನಿರ್ದೇಶಕರು ಸಹ ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.2017 ರಲ್ಲಿ ಸಂಘಟನೆಯ ಸಂಪೂರ್ಣ ಸದಸ್ಯತ್ವವನ್ನು ಪಡೆದ ನಂತರ ಭಾರತದ ಅಧ್ಯಕ್ಷತೆಯಲ್ಲಿ ಇದೇ ಮೊದಲ ಬಾರಿಗೆ ಶೃಂಗಸಭೆ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕೋವಿಡ್-19  ಸಾಂಕ್ರಾಮಿಕ ರೋಗದಿಂದ ಎದುರಾಗಿರುವ ಆರ್ಥಿಕ ಸವಾಲುಗಳನ್ನು ನಿವಾರಿಸಲು ಭಾರತದ ಕಾರ್ಯಕ್ರಮಗಳು 
ಎಸ್‌ಸಿಒ ಸದಸ್ಯ ರಾಷ್ಟ್ರಗಳಿಗೆ ಸಹಕಾರಿಯಾಗುತ್ತವೆ ಎಂದು ಭಾವಿಸುತ್ತೇವೆ. ಆದರೆ ಸಂಘಟನೆಯನ್ನು ಬಲಪಡಿಸುವ ನಮ್ಮ ನಿರಂತರ ಬದ್ಧತೆಯನ್ನು ಇದು ತೋರಿಸಲಿದೆ.  ಜಂಟಿ ಸಂವಹನವನ್ನು ಅಳವಡಿಸಿಕೊಳ್ಳುವುದರೊಂದಿಗೆ ಶೃಂಗಸಭೆ ಕೊನೆಗೊಳ್ಳಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

2020ರ ಶಾಂಘೈ ಸಹಕಾರ ಸಂಘಟನೆಯ ಸರ್ಕಾರದ ಮುಖ್ಯಸ್ಥರ ಸಭೆಯಲ್ಲಿ ಸಹಕಾರದ ಮೂರು ಹೊಸ ಸ್ತಂಭಗಳಾದ ಸ್ಟಾರ್ಟ್ ಅಪ್ ಮತ್ತು ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಂಪ್ರಾದಾಯಿಕ ಔಷಧವನ್ನು ರಚಿಸುವತ್ತ ಗಮನ ಸಂಪೂರ್ಣ ಗಮನ ಹರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com