ಡಿ.3ಕ್ಕೆ ಮತ್ತೆ ರೈತರನ್ನು ಮಾತುಕತೆಗೆ ಕರೆದ ಕೇಂದ್ರ ಸಚಿವ ತೋಮರ್ 

ಮೂರು ನೂತನ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ರೈತರು ರಾಷ್ಟ್ರ ರಾಜಧಾನಿಯಲ್ಲಿ ರೊಚ್ಚಿಗೆದ್ದಿರುವಂತೆಯೇ, ಅವರ ಸಮಸ್ಯೆಗಳನ್ನು ಬಗೆಹರಿಸಲು ಡಿಸೆಂಬರ್ 3ರಂದು ಮತ್ತೆ ರೈತರ ಒಕ್ಕೂಟಗಳೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿರುವುದಾಗಿ ಕೇಂದ್ರ ಗೃಹ ಸಚಿವ ನರೇಂದ್ರ ಸಿಂಗ್ ತೋಮರ್ ಪುನರುಚ್ಚರಿಸಿದ್ದಾರೆ.
ರೈತರ ಪ್ರತಿಭಟನೆ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್
ರೈತರ ಪ್ರತಿಭಟನೆ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್

ನವದೆಹಲಿ: ಮೂರು ನೂತನ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ರೈತರು ರಾಷ್ಟ್ರ ರಾಜಧಾನಿಯಲ್ಲಿ ರೊಚ್ಚಿಗೆದ್ದಿರುವಂತೆಯೇ, ಅವರ ಸಮಸ್ಯೆಗಳನ್ನು ಬಗೆಹರಿಸಲು ಡಿಸೆಂಬರ್ 3ರಂದು ಮತ್ತೆ ರೈತರ ಒಕ್ಕೂಟಗಳೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿರುವುದಾಗಿ ಕೇಂದ್ರ ಗೃಹ ಸಚಿವ ನರೇಂದ್ರ ಸಿಂಗ್ ತೋಮರ್ ಪುನರುಚ್ಚರಿಸಿದ್ದಾರೆ.

ರೈತರ ಏಳಿಗೆಗೆ ಅಗತ್ಯವಾದ ಯಾವುದೇ ಕೆಲಸವನ್ನು ಮಾಡಲು ಸರ್ಕಾರ ಸಿದ್ಧವಿದೆ. ಡಿಸೆಂಬರ್ 3 ರಂದು ಮತ್ತೆ ಮಾತುಕತೆಗೆ ಆಹ್ವಾನಿಸಿದ್ದು, ಅವರು ಬರುವ ವಿಶ್ವಾಸವಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಕನಿಷ್ಠ  ಬೆಂಬಲ ಬೆಲೆಯನ್ನು ಹೆಚ್ಚಿಸಿದ್ದು, ರೈತರಿಗಾಗಿ 1 ಲಕ್ಷ ಕೋಟಿ ಮೂಲಸೌಕರ್ಯ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ತೋಮರ್ ಹೇಳಿದ್ದಾರೆ.

ಪ್ರತಿಪಕ್ಷಗಳು ಈ ವಿಚಾರವನ್ನು ರಾಜಕೀಯಗೊಳಿಸುತ್ತಿವೆ ಎಂದು ಆರೋಪಿಸಿದ ಅವರು, ಒಂದು ವೇಳೆ ರಾಜಕೀಯ ಪಕ್ಷಗಳು ರಾಜಕೀಯ ಮಾಡಲು ಬಯಸಿದರೆ ಅವರ ಸ್ವಂತ ಹೆಸರಿನಲ್ಲಿ ಮಾಡಲಿ, ಆದರೆ, ರೈತರ ಹೆಸರಿನಲ್ಲಿ ಮಾಡಬಾರದು ಎಂದರು.

ರೈತರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರ ಫೋಟೊವೊಂದನ್ನು ಕಾಂಗ್ರೆಸ್ ಮುಖಂಡರೊಬ್ಬರು ಫೋಸ್ಟ್ ಮಾಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಕೆಟ್ಟದು ಮತ್ತು ಸುಳ್ಳುಗಳನ್ನು ಹೇಗೆ ರಾಜಕೀಯ ಮಾಡಬೇಕು ಎಂಬುದು ಮಾತ್ರ ಕಾಂಗ್ರೆಸ್ ಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು. 

ಕೇಂದ್ರ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾನೂನುಗಳ ವಿರುದ್ಧ ಗುರುವಾರ ದಿಂದ ದೆಹಲಿ ಚಲೋ ಪ್ರತಿಭಟನೆಯನ್ನು ರೈತರು ನಡೆಸುತ್ತಿದ್ದಾರೆ. 

ದೆಹಲಿ- ಹರಿಯಾಣ ಗಡಿಯಲ್ಲಿ ಎರಡು ದಿನಗಳ ಕಾಲ ಪೊಲೀಸರು ಮತ್ತು ರೈತರು ನಡುವಣ ಸಂಘರ್ಷ ನಂತರ ಟಿಕ್ರಿ ಗಡಿ ಮೂಲಕ ಶುಕ್ರವಾರ  ದೆಹಲಿ ತಲುಪುವಲ್ಲಿ ಯಶಸ್ವಿಯಾದ ರೈತರಿಗೆ ರಾಷ್ಟ್ರ ರಾಜಧಾನಿಯ ಹೊರವಲಯ ಬುರಾರಿಯಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದು, ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com