ಉತ್ತರಾಖಂಡ್ ಕಾಂಗ್ರೆಸ್ ಗೆ ದಲಿತ ನಾಯಕ ಅಧ್ಯಕ್ಷ!?

ಉತ್ತರಾಖಂಡ್ ಕಾಂಗ್ರೆಸ್ ಗೆ ದಲಿತ ಸಮುದಾಯದ ನಾಯಕ ಅಧ್ಯಕ್ಷರಾಗುವ ಸಾಧ್ಯತೆ ಇದೆ. 

Published: 29th November 2020 04:49 PM  |   Last Updated: 29th November 2020 04:56 PM   |  A+A-


Congress

ಕಾಂಗ್ರೆಸ್

Posted By : Srinivas Rao BV
Source : IANS

ನವದೆಹಲಿ: ಉತ್ತರಾಖಂಡ್ ಕಾಂಗ್ರೆಸ್ ಗೆ ದಲಿತ ಸಮುದಾಯದ ನಾಯಕ ಅಧ್ಯಕ್ಷರಾಗುವ ಸಾಧ್ಯತೆ ಇದೆ. 

ಐಎಎನ್ಎಸ್ ವರದಿಯ ಪ್ರಕಾರ ಹಲವು ಸುತ್ತಿನ ಚರ್ಚೆಯ ಬಳಿಕ ಈ ಪ್ರಸ್ತಾವನೆಯನ್ನು ಪಕ್ಷದ ಅಧ್ಯಕ್ಷರಿಗೆ ಕಳಿಸಿಕೊಡಲಾಗಿದೆ.

ಆದರೆ ಉತ್ತರಾಖಂಡ್ ನ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗುವ ಸಾಧ್ಯತೆ ಇರುವ ಆ ದಲಿತ ನಾಯಕರ ಹೆಸರನ್ನು ಈ ವರೆಗೂ ಬಹಿರಂಗಗೊಳಿಸಲಾಗಿಲ್ಲ.

ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಗೆ ಮಹತ್ವದ್ದಾಗಿದ್ದು, 18 ವಿಧಾನಸಭಾ ಕ್ಷೇತ್ರಗಳಲ್ಲಿ ದಲಿತರು ನಿರ್ಣಾಯಕರಾಗಿದ್ದು, ಉಳಿದೆಡೆ 5,000-10,000 ಮತಗಳನ್ನು ಹೊಂದಿದ್ದಾರೆ. ಬಹುಜನ ಸಮಾಜವಾದಿ ಪಕ್ಷ ದಲಿತ ಮತಗಳನ್ನು ಸೆಳೆಯುವುದನ್ನು ತಪ್ಪಿಸಲು ಕಾಂಗ್ರೆಸ್ ಈ ರಣತಂತ್ರ ರೂಪಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
 

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp