ರೈತರ ಪ್ರತಿಭಟನೆ: ಹೊಸ ಕೃಷಿ ಕಾನೂನಿನ ಮೂಲಕ ರೈತರಿಗೆ ಹೊಸ ಹಕ್ಕು, ಅವಕಾಶಗಳು ದೊರೆತಿವೆ; ಪ್ರಧಾನಿ ಮೋದಿ

ಅತ್ತ ದೆಹಲಿ ಗಡಿಯಲ್ಲಿ ರೈತರ ವ್ಯಾಪಕ ಪ್ರತಿಭಟನೆ ಮುಂದುವರೆದಿರುವಂತೆಯೇ ಇತ್ತ ಮನ್ ಕಿ ಬಾತ್ ಈ ವಿಚಾರದ ಕುರಿತು ಪರೋಕ್ಷವಾಗಿ ಮಾತನಾಡಿರುವ ಪ್ರಧಾನಿ ಮೋದಿ ತಮ್ಮ ಸರ್ಕಾರದ ಕೃಷಿ ಕಾನೂನ್ನು ಸಮರ್ಥಿಸಿಕೊಂಡಿದ್ದಾರೆ.
ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ನವದೆಹಲಿ:  ಅತ್ತ ದೆಹಲಿ ಗಡಿಯಲ್ಲಿ ರೈತರ ವ್ಯಾಪಕ ಪ್ರತಿಭಟನೆ ಮುಂದುವರೆದಿರುವಂತೆಯೇ ಇತ್ತ ಮನ್ ಕಿ ಬಾತ್ ಈ ವಿಚಾರದ ಕುರಿತು ಪರೋಕ್ಷವಾಗಿ ಮಾತನಾಡಿರುವ ಪ್ರಧಾನಿ ಮೋದಿ ತಮ್ಮ ಸರ್ಕಾರದ ಕೃಷಿ ಕಾನೂನ್ನು ಸಮರ್ಥಿಸಿಕೊಂಡಿದ್ದಾರೆ.

ಇಂದು ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನಿನ ಮೂಲಕ ರೈತರಿಗೆ ಹೊಸ ಹಕ್ಕು, ಅವಕಾಶಗಳು ದೊರೆತಿವೆ.  ಸಂಸತ್ತು ಇತ್ತೀಚೆಗೆ ಕಠಿಣ ಸುಧಾರಣೆಯ ನಂತರ ಕೃಷಿ ಸುಧಾರಣಾ ಕಾನೂನುಗಳನ್ನು ಜಾರಿಗೆ ತಂದಿದೆ. ಈ  ಸುಧಾರಣೆಗಳು ರೈತರ ಸಂಕೋಲೆಗಳನ್ನು ಮುರಿದುಬಿಟ್ಟಿದೆ. ಮಾತ್ರವಲ್ಲದೆ ಅವರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಿವೆ ಎಂದು ಹೇಳಿದರು.

'ಇತ್ತೀಚಿನ ಕೃಷಿ ಸುಧಾರಣೆಗಳು ರೈತರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿವೆ. ಅನೇಕ ರಾಜಕೀಯ ಪಕ್ಷಗಳು ಭರವಸೆ ನೀಡಿದ ರೈತರ ದಶಕಗಳ ಹಳೆಯ ಬೇಡಿಕೆಗಳನ್ನು ಈಗ ಈಡೇರಿಸಲಾಗಿದೆ. ಸಂಸತ್ತು ಇತ್ತೀಚೆಗೆ ಕಠಿಣ ಸುಧಾರಣೆಯ ನಂತರ ಕೃಷಿ ಸುಧಾರಣಾ  ಕಾನೂನುಗಳನ್ನು ಜಾರಿಗೆ ತಂದಿದೆ. ಈ ಸುಧಾರಣೆಗಳು ರೈತರ ಸಂಕೋಲೆಗಳನ್ನು ಮುರಿದಿರುವುದು ಮಾತ್ರವಲ್ಲದೆ ಅವರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಿವೆ.  ಈ ಕಾನೂನಿನ ಪ್ರಕಾರ, ಉತ್ಪನ್ನಗಳನ್ನು ಖರೀದಿಸಿದ ಮೂರು ದಿನಗಳಲ್ಲಿ ರೈತರಿಗೆ ಪಾವತಿಸುವುದು  ಕಡ್ಡಾಯವಾಗಿದೆ. ಪಾವತಿ ಮಾಡದಿದ್ದರೆ, ರೈತ ದೂರು ನೀಡಬಹುದು. ಮತ್ತೊಂದು ಪ್ರಮುಖ ನಿಬಂಧನೆಯೆಂದರೆ ಪ್ರದೇಶದ ಎಸ್‌ಡಿಎಂ (ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್) ಅಧಿಕಾರಿಗಳು ಒಂದು ತಿಂಗಳಲ್ಲಿ ರೈತನ ದೂರನ್ನು ಪರಿಹರಿಸಬೇಕು ಎಂದು ಹೇಳಿದರು.

ಯುವಕರಿಗೆ ವಿಶೇಷವಾಗಿ ಕೃಷಿ ಅಧ್ಯಯನ ಮಾಡುವವರು ಹತ್ತಿರದ ಹಳ್ಳಿಗಳಿಗೆ ಹೋಗಿ ಆಧುನಿಕ ಕೃಷಿ ಮತ್ತು ಇತ್ತೀಚಿನ ಕೃಷಿ ಸುಧಾರಣೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವಂತೆ ಪ್ರಧಾನಿ ಮೋದಿ ವಿನಂತಿಸಿದರು. ಇದನ್ನು ಮಾಡುವುದರಿಂದ, ದೇಶದಲ್ಲಿ ಆಗುತ್ತಿರುವ ದೊಡ್ಡ  ಬದಲಾವಣೆಯಲ್ಲಿ ನೀವು ಪಾಲುದಾರರಾಗುತ್ತೀರಿ ಎಂದು ಅವರು ಹೇಳಿದರು.

ಹೊಸ ಕೃಷಿ ಕಾನೂನುಗಳ ಪ್ರಯೋಜನಗಳನ್ನು ವಿವರಿಸಿದ ಪ್ರಧಾನಿ, ಮಹಾರಾಷ್ಟ್ರದ ಧುಲೆ ಅವರ ಉದಾಹರಣೆಯನ್ನು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಗೆ ದೂರು ಸಲ್ಲಿಸಿದ ನಂತರ ಬಾಕಿ ಹಣವನ್ನು ಪಡೆದರು. ಧುಲೇ ಗ್ರಾಮದ ರೈತ ಜಿತೇಂದ್ರ ಭೋಜಿ ಈ ಹೊಸ ಕೃಷಿ  ಕಾನೂನುಗಳನ್ನು ಹೇಗೆ ಬಳಸಿದ್ದಾರೆಂದು ನೀವು ತಿಳಿದಿರಬೇಕು. ಅವರು ಮೆಕ್ಕೆಜೋಳವನ್ನು ಬೆಳೆದಿದ್ದರು ಮತ್ತು ಅದನ್ನು ಸರಿಯಾದ ಬೆಲೆಗೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ನಿರ್ಧರಿಸಿದರು. ಮಾರಾಟಕ್ಕೆ ಒಪ್ಪಿದ ಒಟ್ಟು ಮೊತ್ತ ಸುಮಾರು 3.32 ಲಕ್ಷ ರೂ. ಮುಂಚಿತವಾಗಿ (ಅಡ್ವಾನ್ಸ್)  25 ಸಾವಿರ ರೂ. ಅವರು 15 ದಿನಗಳಲ್ಲಿ ಉಳಿದ ಮೊತ್ತವನ್ನು ಪಡೆಯುವು ಕುರಿತು ಒಪ್ಪಂದವಾಯಿತು. ಆದರೆ ರೈತನಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಬಾಕಿ ಹಣ ಪಾವತಿಯಾಗಲಿಲ್ಲ. ಇಂತಹ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಕೃಷಿ ಮಸೂದೆ ಮಾಡಲಾಗಿದೆ. ಹೊಸ  ಕಾನೂನಿನ ಪ್ರಕಾರ, 3 ದಿನಗಳಲ್ಲಿ ರೈತರಿಗೆ ಬಾಕಿ ಹಣ ಪಾವತಿಸುವುದು ಕಡ್ಡಾಯವಾಗಿದೆ. ಪಾವತಿ ಮಾಡದಿದ್ದರೆ, ರೈತ ದೂರು ನೀಡಬಹುದು. ಅಂತೆಯೇ ಜಿತೇಂದ್ರ ಬೋಜಿ ಕೂಡ ದೂರು ನೀಡಿ ತಮ್ಮ ಬಾಕಿ ಹಣ ವಾಪಸ್ ಪಡೆದರು ಎಂದು ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com