ರಾಜಕೀಯ ಅಖಾಡಕ್ಕೆ ನಟ ರಜನಿ ಕಾಂತ್, ಸೋಮವಾರ ತೀರ್ಮಾನ?
ರಾಜಕೀಯ ಪ್ರವೇಶಿಸದಂತೆ ವೈದ್ಯರು ಸಲಹೆ ಹೊರತಾಗಿಯೂ ಸೂಪರ್ ಸ್ಟಾರ್ ರಜನಿಕಾಂತ್ ಸೋಮವಾರ ರಾಜಕೀಯ ಪ್ರವೇಶ ಕುರಿತಂತೆ ತಮ್ಮ ವೇದಿಕೆಯ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಸಜ್ಜಾಗಿದ್ದಾರೆ.
Published: 29th November 2020 10:27 PM | Last Updated: 29th November 2020 10:27 PM | A+A A-

ಸೂಪರ್ ಸ್ಟಾರ್ ರಜನಿಕಾಂತ್
ಚೆನ್ನೈ: ರಾಜಕೀಯ ಪ್ರವೇಶಿಸದಂತೆ ವೈದ್ಯರು ಸಲಹೆ ಹೊರತಾಗಿಯೂ ಸೂಪರ್ ಸ್ಟಾರ್ ರಜನಿಕಾಂತ್ ಸೋಮವಾರ ರಾಜಕೀಯ ಪ್ರವೇಶ ಕುರಿತಂತೆ ತಮ್ಮ ವೇದಿಕೆಯ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಸಜ್ಜಾಗಿದ್ದಾರೆ.
ರಜನಿ ಮಕ್ಕಳ್ ಮಂದ್ರಾಮ್ ಜಿಲ್ಲಾ ಕಾರ್ಯದರ್ಶಿಗಳ ಸಭೆ ಚೆನ್ನೈನಲ್ಲಿನ ರಾಘವೇಂದ್ರ ಕಲ್ಯಾಣ ಮಂದಪಂನಲ್ಲಿ ನಡೆಯಲಿದೆ ಎಂದು ಮಂದ್ರಾಮ್ ಹೇಳಿದೆ.
ರಜನಿ ಮಕ್ಕಳ್ ಮಂದ್ರಾಮ್ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ರಾಜಕೀಯ ಪ್ರವೇಶದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಜನಿಕಾಂತ್ ಹೇಳಿದ್ದರು. ನಾಳೆ ಈ ಸಭೆ ನಡೆಯಲಿದೆ.
ಮುಂದಿನ ವರ್ಷ ಏಪ್ರಿಲ್- ಮೇ ತಿಂಗಳಿನಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ ತಮ್ಮ ನಿಲುವನ್ನು ತಿಳಿಸುವುದಾಗಿ ರಜನಿಕಾಂತ್ ಸ್ವತಃ ಹೇಳಿದ್ದರಿಂದ ರಾಜಕೀಯ ಪ್ರವೇಶದ ಸಾಧ್ಯತೆಯನ್ನು ಪ್ರಕಟಿಸಬಹುದೆಂದು ನಿರೀಕ್ಷಿಸಲಾಗಿದೆ.
2016 ರಲ್ಲಿ ಮೂತ್ರಪಿಂಡ ಕಸಿಗೆ ಒಳಗಾಗಿದ್ದರಿಂದ ಮತ್ತು ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ವೈದ್ಯರು ರಾಜಕೀಯ ಪ್ರವೇಶಿಸದಂತೆ ಸಲಹೆ ನೀಡಿದ್ದಾರೆ ಎಂದು ರಜನಿಕಾಂತ್ ಅಕ್ಟೋಬರ್ 29 ರಂದು ಹೇಳಿಕೆ ನೀಡಿದ್ದರು. ಅವರ ಆರೋಗ್ಯ ಸ್ಥಿತಿಯನ್ನು ಬಹಿರಂಗಪಡಿಸುವಿಕೆಯು ರಾಜಕೀಯ ಪಕ್ಷವನ್ನು ಪ್ರಾರಂಭಿಸಲು ರಜನಿಕಾಂತ್ ಗಂಭೀರವಾಗಿ ಚಿಂತಿಸುತ್ತಿರುವ ಸೂಚನೆಯೂ ಕಂಡುಬಂದಿದೆ.