ರೈತರ ಪ್ರತಿಭಟನೆ ಪ್ರತಿಪಕ್ಷಗಳ ಕುತಂತ್ರ ಎಂದ ಪ್ರಧಾನಿ ಮೋದಿ

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಅವರು, ವಂಚನೆಯ ಇತಿಹಾಸ ಹೊಂದಿರುವ ಪಕ್ಷಗಳ ಕುತಂತ್ರ ಇದು ಎಂದಿದ್ದಾರೆ.

Published: 30th November 2020 07:28 PM  |   Last Updated: 30th November 2020 07:28 PM   |  A+A-


PM modi

ಪ್ರಧಾನಿ ಮೋದಿ

Posted By : Lingaraj Badiger
Source : PTI

ವಾರಣಾಸಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಅವರು, ವಂಚನೆಯ ಇತಿಹಾಸ ಹೊಂದಿರುವ ಪಕ್ಷಗಳ ಕುತಂತ್ರ ಇದು ಎಂದಿದ್ದಾರೆ.

ಇಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ,
"ಈ ಐತಿಹಾಸಿಕ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸುತ್ತಿರುವ ರೈತರನ್ನು ದಶಕಗಳಿಂದ ದಾರಿ ತಪ್ಪಿಸಿದ ಪಕ್ಷಗಳೇ ಈಗ ಮತ್ತೆ ಅವರಿಗೆ ಮೋಸ ಮಾಡುತ್ತಿವೆ ಎಂದು ಆರೋಪಿಸಿದರು.

ಪ್ರತಿಪಕ್ಷಗಳು ಕೃಷಿ ಕಾಯಿದೆ ಬದ್ದೆ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದು, ರೈತರು ಬೀದಿಗಿಳಿಯುವಂತೆ ಮಾಡಿದೆ. ಈ ಮೊದಲು ರೈತರ ಸಾಲ ಮನ್ನಾ ಪ್ಯಾಕೇಜ್ ಘೋಷಿಸಲಾಗುತ್ತಿತ್ತು. ಆದರೆ ಇಂತಹ ಲಾಭದ ಯೋಜನೆ ಯಾವತ್ತೂ ರೈತರಿಗೆ ತಲುವಂತೆ ಮಾಡಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯಿದೆಗಳನ್ನು ಬಲಗಾವಿ ಸಮರ್ಥಿಸಿಕೊಂಡ ಪ್ರಧಾನಿ ಮೋದಿ, ದಶಕಗಳ ಕಾಲ ರೈತರಿಗೆ ಹೇಳಿದ ಸುಳ್ಳು ಕೃಷಿಕರ ಮನಸ್ಸಿನಲ್ಲಿ ಆತಂಕವನ್ನು ಉಂಟು ಮಾಡಿದೆ. ಆದರೆ ಈ ಕಾಯಿದೆಯಿಂದ ರೈತರನ್ನು ಮೋಸಗೊಳಿಸುವ ಉದ್ದೇಶ ನಮಗೆ ಇಲ್ಲ. ನಮ್ಮ ಉದ್ದೇಶ ಕೂಡ ಈ ಗಂಗೆಯಷ್ಟೇ ಪವಿತ್ರವಾಗಿದೆ ಎಂದರು. 

ಮುಕ್ತ ಮಾರುಕಟ್ಟೆ ವ್ಯವಸ್ಥೆ ಎಂದರೆ ಸಂಪ್ರದಾಯಿಕ ಮಂಡಿಗಳನ್ನು ಮತ್ತು ಸರ್ಕಾರದಿಂದ ನಿಗದಿಗೊಳಿಸುವ ಬೆಂಬಲ ಬೆಲೆಯ ಅಂತ್ಯ ಎಂದಲ್ಲ ಎಂದು ಸ್ಪಷ್ಟಪಡಿಸಿದರು. ಈ ಹೊಸ ಕಾಯಿದೆ ರೈತರಿಗೆ ಸುಧಾರಣೆ ಮತ್ತು ಹೊಸ ಆಯ್ಕೆಗಳು ಸಿಗಲಿದೆ. ಅಲ್ಲದೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಇವು ಪ್ರವೇಶ ಕಲ್ಪಿಸುತ್ತವೆ ಎಂದರು.

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp