ದೇವ್ ದೀಪಾವಳಿ ಉದ್ಟಾಟಿಸಿದ ಪ್ರಧಾನಿ ಮೋದಿ
ದೇವ್ ದೀಪಾವಳಿ ಉದ್ಟಾಟಿಸಿದ ಪ್ರಧಾನಿ ಮೋದಿ

ವಾರಾಣಾಸಿಯಲ್ಲಿ ದೇವ್ ದೀಪಾವಳಿ ಮಹೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ, ಮನಸೆಳೆದ ದೀಪಾಲಂಕಾರ

ಪ್ರಧಾನಿ ನರೇಂದ್ರ ಮೋದಿ ವಾರಾಣಾಸಿಯ ರಾಜ್ ಘಾಟ್ ನಲ್ಲಿ  ದೇವ್ ದೀಪಾವಳಿ ಮಹೋತ್ಸವನ್ನು ಉದ್ಘಾಟಿಸಿ, ಮೊದಲ ದೀಪವನ್ನು ಹಚ್ಚಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಾರಾಣಾಸಿ: ಪ್ರಧಾನಿ ನರೇಂದ್ರ ಮೋದಿ ವಾರಾಣಾಸಿಯ ರಾಜ್ ಘಾಟ್ ನಲ್ಲಿ  ದೇವ್ ದೀಪಾವಳಿ ಮಹೋತ್ಸವನ್ನು ಉದ್ಘಾಟಿಸಿ, ಮೊದಲ ದೀಪವನ್ನು ಹಚ್ಚಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ತಿಕಾ ಮಾಸದ ಹುಣ್ಣಿಮೆ ಆಚರಣೆ ಅಂಗವಾಗಿ ಗಂಗಾ ನದಿಯ ದಡದಲ್ಲಿ 15 ಲಕ್ಷ  ದೀಪಗಳನ್ನು ಬೆಳಗಲಾಯಿತು. ಸಾಂಪ್ರದಾಯಿಕ ನೃತ್ಯಗಾರರು ನೃತ್ಯ ಪ್ರದರ್ಶಿಸಿದರು.

ದೀಪಾವಳಿ ನಂತರ ಆಚರಿಸುವ ದೇವ್ ದೀಪಾವಳಿಯಲ್ಲಿ ಗಂಗಾ ನದಿ ದಡದಲ್ಲಿ ದೊಡ್ಡ ಪ್ರಮಾಣದಲ್ಲಿ ದೀಪಗಳನ್ನು ಬೆಳಗಲಾಯಿತು. ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್  ದೇವ್ ದೀಪಾವಳಿ ಮಹೋತ್ಸವಕ್ಕಾಗಿ ರಾಜ್ ಘಾಟ್ ತಲುಪಿದರು. ಮೋದಿ ಭೇಟಿ ಹಿನ್ನೆಲೆಯಲ್ಲಿ ವಾರಾಣಾಸಿಯನ್ನು ವರ್ಣರಂಜಿತವಾಗಿ ಆಲಂಕರಿಸಲಾಗಿತ್ತು.

ದೇವ್ ದೀಪಾವಳಿ ಪ್ರಯುಕ್ತ ಗಂಗಾ ನದಿಯ 15 ಘಾಟ್ಸ್ ಗಳಲ್ಲಿ ದೀಪಾಲಂಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com