ಕೋವಿಡ್-19: 5 ಕೋಟಿ ರೂ. ಪರಿಹಾರ ಕೇಳಿದ್ದವನ ವಿರುದ್ಧವೇ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ!

ಪ್ರಾಯೋಗಿಕ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ತನ್ನ ಆರೋಗ್ಯದಲ್ಲಿ ಏರುಪೇರಾಗಿದ್ದು, ನನಗೆ 5 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರಕರಣ ಹೂಡಿದ್ದವನ ವಿರುದ್ಧವೇ ಸೆರಮ್ ಸಂಸ್ಥೆ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪ್ರಾಯೋಗಿಕ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ತನ್ನ ಆರೋಗ್ಯದಲ್ಲಿ ಏರುಪೇರಾಗಿದ್ದು, ನನಗೆ 5 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರಕರಣ ಹೂಡಿದ್ದವನ ವಿರುದ್ಧವೇ ಸೆರಮ್ ಸಂಸ್ಥೆ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದೆ.

ಹೌದು.. ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೋವಿ ಶೀಲ್ಡ್ ಲಸಿಕೆಯ ಪ್ರಾಯೋಗಿಕ ಪ್ರಕ್ರಿಯೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದ ತಮಿಳುನಾಡು ಮೂಲದ ವ್ಯಕ್ತಿ ತನ್ನ ಆರೋಗ್ಯದಲ್ಲಿ ಸತತ ಏರುಪೇರಾಗುತ್ತಿದ್ದು, ಹೀಗಾಗಿ ಸೆರಮ್ ಸಂಸ್ಥೆ ತಮಗೆ 5 ಕೋಟಿ ರೂ ಪರಿಹಾರ ನೀಡಬೇಕು  ಎಂದು ಪ್ರಕರಣ ದಾಖಲಿಸಿದ್ದಾರೆ. ಆದರೆ ಸ್ವಯಂ ಕಾರ್ಯಕರ್ತನ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಸೆರಮ್ ಸಂಸ್ಥೆ ಅವರ ಆರೋಪ ದೋಷಪೂರಿತವಾದದ್ದು. ಕೊವಿಡ್-19 ಲಸಿಕೆ ವೈದ್ಯಕೀಯ ಪ್ರಯೋಗದ ಹಂತದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಲಸಿಕೆ ಪ್ರಯೋಗ  ಮತ್ತು ಸ್ವಯಂಸೇವಕನ ಆರೋಗ್ಯ ಸ್ಥಿತಿ ಬದಲಾಗುವುದಕ್ಕೂ ಯಾವುದೇ ಸಂಬಂಧವಿಲ್ಲ. ಸ್ವಯಂಸೇವಕನು ತನ್ನ ವೈಯಕ್ತಿಕ ಆರೋಗ್ಯ ಸಮಸ್ಯೆಗೂ ಮತ್ತು ಕೊವಿಡ್-19 ಲಸಿಕೆ ಪ್ರಯೋಗಕ್ಕೂ ನಂಟು ಕಲ್ಪಿಸುತ್ತಿದ್ದಾನೆ ಎಂದು ಆರೋಪಿಸಿದೆ.

ಕೊರೊನಾವೈರಸ್ ಲಸಿಕೆ ವೈದ್ಯಕೀಯ ಪ್ರಯೋಗದಲ್ಲಿ ಭಾಗವಹಿಸುವುದರಿಂದ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರು ಆಗುವ ಕುರಿತು ವೈದ್ಯರ ತಂಡವು ಎಚ್ಚರಿಕೆ ನೀಡಿತ್ತು. ಆದಾಗ್ಯೂ, ದುರುದ್ದೇಶಪೂರಿತನಾಗಿ ವ್ಯಕ್ತಿ ವೈದ್ಯಕೀಯ ಪ್ರಯೋಗಕ್ಕೆ ಒಳಗಾದರು. ಇದೀಗ ಕಂಪನಿಯ ಹೆಸರನ್ನು  ಕೆಡಿಸಲು ಸಾರ್ವಜನಿಕವಾಗಿ ದೂರು ನೀಡುತ್ತಿದ್ದಾರೆ. ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಕೊವಿಡ್-19 ಲಸಿಕೆ ತೆಗೆದುಕೊಂಡಿದ್ದಕ್ಕೆ ತನ್ನ ಆರೋಗ್ಯದಲ್ಲಿ ಏರುಪೇರು ಆಗಿದೆ ಎಂಬ ಆರೋಪದ ಹಿಂದೆ ಹಣ ಗಳಿಸುವ ದುರುದ್ದೇಶವಿದೆ. ಸಂಸ್ಥೆಯ ಹೆಸರು ಹಾಳು  ಮಾಡುವುದರ ಜೊತೆಗೆ ಹಣ ಮಾಡಿಕೊಳ್ಳುವುದಕ್ಕಾಗಿ ಈ ರೀತಿ ಆರೋಪಗಳನ್ನು ಹೊರಿಸಲಾಗುತ್ತಿದೆ. ಇಂತಹ ಆರೋಪಗಳಿಂದ ಸಂಸ್ಥೆಯ ಹೆಸರಿಗೆ ಕಳಂಕ ಬರಲಿದ್ದು, ಹೀಗಾಗಿ ಸೆರಮ್ ಸಂಸ್ಥೆ ಆ ವ್ಯಕ್ತಿಯ ವಿರುದ್ಧ 100 ಕೋಟಿ ರೂ ಪರಿಹಾರ ಕೇಳಿ ಮಾನನಷ್ಚ ಮೊಕದ್ದಮೆ ಹೂಡುತ್ತದೆ ಎಂದು ಸಂಸ್ಥೆಯು ತನ್ನ ಹೇಳಿಕೆಯಲ್ಲಿ ಹೇಳಿದೆ.

ಏನಿದು ಪ್ರಕರಣ?
ಕಳೆದ ಅಕ್ಟೋಬರ್.01ರಂದು ಚೆನ್ನೈನ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸ್ವಯಂಸೇವಕರಿಗೆ ಕೊವಿಡ್-19 ಲಸಿಕೆಯನ್ನು ನೀಡಲಾಗಿತ್ತು. ಹೀಗೆ ಲಸಿಕೆಯ ಮೊದಲ ಡೋಸ್ ಪಡೆದ ವ್ಯಕ್ತಿಯೊಬ್ಬರಿಗೆ ನರದೌರ್ಬಲ್ಯ ಮತ್ತು ಮಾನಸಿಕ ಸಮಸ್ಯೆ  ಕಾಣಿಸಿಕೊಂಡಿದೆ. ಕೋವಿಶೀಲ್ಡ್ ಲಸಿಕೆಯ ವೈದ್ಯಕೀಯ ಪ್ರಯೋಗದಿಂದ ತಮ್ಮ ಜೀವಕ್ಕೆ ಅಪಾಯವಾಗಿದ್ದು 5 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಇದರ ಜೊತೆಗೆ ಆ ಲಸಿಕೆಯ ಉತ್ಪಾದನೆ ಮತ್ತು ಸಂಶೋಧನೆ ನಿಲ್ಲಿಸಬೇಕು ಎಂದು ಚೆನ್ನೈ ಮೂಲದ 40 ವರ್ಷದ ವ್ಯಕ್ತಿಯೊಬ್ಬರು  ಮನವಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com