ಮತ್ತೊಂದು ಚಂಡಮಾರುತದ ಹೊಡೆತಕ್ಕೆ ಸಜ್ಜಾದ ತಮಿಳುನಾಡು, ಪುಲಿಕಾಟ್ ದ್ವೀಪದಲ್ಲಿ ಪ್ರವಾಹ ಭೀತಿ

 ಡಿಸೆಂಬರ್ 2ರೊಳಗೆ ಮತ್ತೊಂದು ಚಂಡಮಾರುತ ಉಂಟಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಸೋಮವಾರ ಖಚಿತಪಡಿಸಿದ್ದು, ಇದು ದಕ್ಷಿಣ ತಮಿಳುನಾಡು ಹಾಗೂ ಕೇರಳ ಕರಾವಳಿಯಲ್ಲಿ ಪರಿಣಾಮ ಬೀರಲಿದೆ.
ನೀರಿನಿಂದ ಆವೃತ್ತವಾದ ಪ್ರದೇಶ
ನೀರಿನಿಂದ ಆವೃತ್ತವಾದ ಪ್ರದೇಶ

ಚೆನ್ನೈ: ಡಿಸೆಂಬರ್ 2ರೊಳಗೆ ಮತ್ತೊಂದು ಚಂಡಮಾರುತ ಉಂಟಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಸೋಮವಾರ ಖಚಿತಪಡಿಸಿದ್ದು, ಇದು ದಕ್ಷಿಣ ತಮಿಳುನಾಡು ಹಾಗೂ ಕೇರಳ ಕರಾವಳಿಯಲ್ಲಿ ಪರಿಣಾಮ ಬೀರಲಿದೆ.

ಇತ್ತೀಚಿನ ಉಪಗ್ರಹ ಮತ್ತು ಹಡುಗು ನಿಗಾವಣೆಗಳ ಪ್ರಕಾರ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತ ವಾಯುವ್ಯದತ್ತ ಸಾಗಿದ್ದು, ಸುಮಾರು 710 ಕಿಲೋ ಮೀಟರ್ ದೂರದ  ಶ್ರೀಲಂಕಾದ ತ್ರಿನ್ ಕೋಮಲಿ ಮತ್ತು 1,120 ಕಿಲೋಮೀಟರ್ ದೂರದ ಕನ್ಯಾಕುಮಾರಿಯ ಪೂರ್ವ ಆಗ್ನೇಯದಲ್ಲಿ ಕೇಂದ್ರಿಕೃತವಾಗಿದೆ.

ಇದು ಸೋಮವಾರ ರಾತ್ರಿಯೊಳಗೆ ತೀವ್ರ ಕುಸಿತಗೊಂಡು ಡಿಸೆಂಬರ್ 1 ರ ರಾತ್ರಿಯ ಹೊತ್ತಿಗೆ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಇಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತದ ಪ್ರಭಾವದಿಂದ ಡಿಸೆಂಬರ್ ನಿಂದ ಭಾರೀ ಮಳೆಯಾಗಲಿದೆ. ಒಳನಾಡು ಪ್ರದೇಶಗಳಾದ  ತಿರುನೆಲ್ವೇಲಿ, ತೂತುಕುಡಿ, ಕನ್ನಿಯಕುಮಾರಿ ಮತ್ತು ರಾಮನಾಥಪುರಂ ಹಾಗೂ ತಂಜಾವೂರು, ತಿರುವರೂರು, ನಾಗಪಟ್ಟಿನಂ ಜಿಲ್ಲೆಗಳು ಮತ್ತು ಕಾರೈಕಲ್ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಉಪ ನಿರ್ದೇಶಕ ಎಸ್, ಬಾಲಚಂದ್ರನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com