ಆತ್ಮೀಯ ಸ್ನೇಹಿತನನ್ನು ಗೌರವಿಸಲು ಮತ್ತೆ 'ನಮಸ್ತೆ ಟ್ರಂಪ್‌' ಮಾಡುತ್ತೀರಾ? ಮೋದಿಗೆ ಚಿದಂಬರಂ ಪ್ರಶ್ನೆ!

ಮೋದಿಯವರೇ ಈಗ ತಮ್ಮ ಆತ್ಮೀಯ ಸ್ನೇಹಿತನನ್ನು ಗೌರವಿಸಲು ಮತ್ತೊಂದು ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತೀರಾ? ಎಂದು ಪ್ರಧಾನಿ ಮೋದಿಯನ್ನು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.
ಪಿ. ಚಿದಂಬರಂ
ಪಿ. ಚಿದಂಬರಂ

ನವದೆಹಲಿ: ಮೋದಿಯವರೇ ಈಗ ತಮ್ಮ ಆತ್ಮೀಯ ಸ್ನೇಹಿತನನ್ನು ಗೌರವಿಸಲು ಮತ್ತೊಂದು ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತೀರಾ? ಎಂದು ಪ್ರಧಾನಿ ಮೋದಿಯನ್ನು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಭಾರತವನ್ನು ಚೀನಾ ಮತ್ತು ರಷ್ಯಾದೊಂದಿಗೆ ಸೇರಿಸಿ ಈ ಮೂರು ದೇಶಗಳು ಕೊರೊನಾ ಸಾವಿನ ಸಂಖ್ಯೆಯನ್ನು ಮರೆಮಾಡಿದೆ ಎಂದು ಟ್ರಂಪ್ ಟಾಂಗ್ ನೀಡಿದ್ದಾರೆ.

ಈ ಮೂರು ದೇಶಗಳು ಹೆಚ್ಚು ವಾಯುಮಾಲಿನ್ಯಕ್ಕೆ ಕಾರಣವಾಗಿವೆ ಎಂದು ಕೂಡ ಟ್ರಂಪ್‌ ಆರೋಪಿಸಿದ್ದಾರೆ.  ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಬುಧವಾರ ಟ್ರಂಪ್‌ ಹಾಗೂ ಬಿಡೆನ್‌ ಅವರ ನಡುವೆ ಬಹಿರಂಗ ಚರ್ಚೆ ನಡೆದಿತ್ತು. ಈ ವೇಳೆ ಭಾರತವನ್ನು ಟ್ರಂಪ್‌ ಪ್ರಸ್ತಾಪಿಸಿದ್ದಾರೆ

ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಜೆಸ್ಸಿಕಾಳ ಸಾವಿನ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಬಾಬ್ರಿ ಮಸೀದಿ ಧ್ವಂಸ ತೀರ್ಪಿಗೆ ತನ್ನದೆ ರೀತಿಯಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವ್ಯಾಖ್ಯಾನ ನೀಡಿದ್ದಾರೆ. "ಅಂದು ನೋ ವನ್‌ ಕಿಲ್ಲ್‌ಡ್‌ ಜೆಸ್ಸಿಕಾ(ಯಾರೂ ಜೆಸ್ಸಿಕಾಳನ್ನು ಕೊಂದಿಲ್ಲ) ಎನ್ನುವ ಬೇಗುದಿಯ ಕೂಗು ಇಡೀ ದೇಶವ್ಯಾಪಿ ಕೇಳಿ ಬರುತ್ತಿತ್ತು. ಇಂದು ನೋ ವನ್‌ ಡೆಮಾಲಿಷ್‌ಡ್‌ ಮಾಸ್ಕ್ಯೂ(ಯಾರು ಮಸೀದಿ ಕೆಡವಿಲ್ಲ) ಅನ್ನುವ ಕೂಗು ಇದೀಗ ದೇಶ ವ್ಯಾಪಿಯಾಗಿ ಕೇಳಿಬರುತ್ತಿದೆ ಎಂದು ಕೋರ್ಟ್‌ ತೀರ್ಪು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com