ರಾಹುಲ್ ಗಾಂಧಿ ಮೇಲೆ ಹಲ್ಲೆ,ಪ್ರಜಾಪ್ರಭುತ್ವದ ಮೇಲಿನ ಗ್ಯಾಂಗ್ ರೇಪ್ - ಸಂಜಯ್ ರಾವತ್

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮೇಲಿನ ಉತ್ತರ ಪ್ರದೇಶ ಪೊಲೀಸರ ದೌರ್ಜನ್ಯ, ಒಂದು ರೀತಿಯಲ್ಲಿ  ದೇಶದ ಪ್ರಜಾಪ್ರಭುತ್ವದ ಮೇಲಿನ ಗ್ಯಾಂಗ್ ರೇಪ್ ಇದ್ದಂತೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ರಾಹುಲ್ ಗಾಂಧಿ, ಸಂಜಯ್ ರಾವತ್
ರಾಹುಲ್ ಗಾಂಧಿ, ಸಂಜಯ್ ರಾವತ್

ಮುಂಬೈ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮೇಲಿನ ಉತ್ತರ ಪ್ರದೇಶ ಪೊಲೀಸರ ದೌರ್ಜನ್ಯ, ಒಂದು ರೀತಿಯಲ್ಲಿ  ದೇಶದ ಪ್ರಜಾಪ್ರಭುತ್ವದ ಮೇಲಿನ ಗ್ಯಾಂಗ್ ರೇಪ್ ಇದ್ದಂತೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಇಂದಿರಾ ಗಾಂಧಿ ಅವರ ಮೊಮ್ಮಗ ಮತ್ತು ರಾಜೀವ್ ಗಾಂಧಿ ಅವರ ಪುತ್ರ ಎಂಬುದನ್ನು ನಾವು ಮರೆಯಬಾರದು. ಅವರಿಬ್ಬರೂ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ.ರಾಹುಲ್ ಗಾಂಧಿಯೊಂದಿಗೆ ಪೊಲೀಸರ ದೌರ್ಜನ್ಯವನ್ನು ದೇಶ ಎಂದಿಗೂ ಕ್ಷಮಿಸುವುದಿಲ್ಲ,ದೇಶದ ಪ್ರಜಾಪ್ರಭುತ್ವ ವಿರುದ್ಧಧ ಧೋರಣೆಯನ್ನು ಖಂಡಿಸುವ ರಾಹುಲ್ ಗಾಂಧಿ ಮತ್ತಿತರ ವಿರುದ್ಧ ಇದೇ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ರಾಹುಲ್ ಗಾಂಧಿ ರಾಷ್ಟ್ರೀಯ ರಾಜಕೀಯ ಮುಖಂಡರು. ಕಾಂಗ್ರೆಸ್ ಜೊತೆಗೆ ನಮಗೆ ಭಿನ್ನಾಭಿಪ್ರಾಯವಿರಬಹುದು ಆದರೆ, ಅವರೊಂದಿಗೆ ಪೊಲೀಸರು ವರ್ತಿಸಿದ ರೀತಿಯನ್ನು ಯಾರು ಕೂಡಾ ಬೆಂಬಲಿಸುವುದಿಲ್ಲ, ಅವರ ಕುತ್ತಿಗೆಯನ್ನು ಹಿಡಿದು ನೆಲಕ್ಕೆ ನೂಕಲಾಗಿದೆ. ಇದೊಂದು ರೀತಿಯಲ್ಲಿ ಪ್ರಜಾಪ್ರಭುತ್ವದ ಮೇಲಿನ ಗ್ಯಾಂಗ್ ರೇಪ್ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com