ಬಂಡವಾಳಶಾಹಿಗಳಿಗೆ ಕೃಷಿ ಭೂಮಿ ಹಸ್ತಾಂತರದಿಂದ ಸಣ್ಣ ರೈತರನ್ನು ರಕ್ಷಿಸುವವರು ಯಾರು? ಸೋನಿಯಾ ಗಾಂಧಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳಿಂದ ರೈತರ ಭೂಮಿಯನ್ನು ಕೃಷಿಗಾಗಿ ಬಂಡವಾಳಶಾಹಿಗಳಿಗೆ ಹಸ್ತಾಂತರಿಸಲಾಗುತ್ತದೆ. ಆಗ ಕೋಟ್ಯಂತರ ಸಣ್ಣ ರೈತರನ್ನು ಯಾರು ರಕ್ಷಿಸುತ್ತಾರೆ? ಎಂದು ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳಿಂದ ರೈತರ ಭೂಮಿಯನ್ನು ಕೃಷಿಗಾಗಿ ಬಂಡವಾಳಶಾಹಿಗಳಿಗೆ ಹಸ್ತಾಂತರಿಸಲಾಗುತ್ತದೆ. ಆಗ ಕೋಟ್ಯಂತರ ಸಣ್ಣ ರೈತರನ್ನು ಯಾರು ರಕ್ಷಿಸುತ್ತಾರೆ? ಎಂದು ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.

ಕೃಷಿ ಕಾನೂನುಗಳನ್ನು ಜಾರಿಗೆ ತರುವ ಮುನ್ನ ರೈತರೊಂದಿಗೆ ಸಮಾಲೋಚನೆ ನಡೆಸಿಲ್ಲ,ಅವರ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ. ಕೆಲ ಸ್ನೇಹಿತರೊಂದಿಗೆ ಮಾತನಾಡಿ ಮೂರು ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಧಾನ್ಯ ಮಾರುಕಟ್ಟೆಗಳನ್ನು ರದ್ದುಗೊಳಿಸುತ್ತಿರುವಾಗ, ರೈತ ಸಹೋದರರ ಭೂಮಿಯನ್ನು ಕೃಷಿಗಾಗಿ ಬಂಡವಾಳಶಾಹಿಗಳಿಗೆ ಹಸ್ತಾಂತರಿಸಲಾಗುತ್ತದೆ. ಆಗ ಕೋಟ್ಯಂತರ ಸಣ್ಣ ರೈತರನ್ನು ಯಾರು ರಕ್ಷಿಸುತ್ತಾರೆ? ಎಂದು ಅವರು ಕಿಡಿಕಾರಿದ್ದಾರೆ.

ರೈತರೊಂದಿಗೆ, ಕೃಷಿ ಕಾರ್ಮಿಕರ ಮತ್ತು ಷೇರುದಾರರ ಭವಿಷ್ಯವು ಆತಂತ್ರವಾಗಲಿದೆ. ಧಾನ್ಯ ಮಾರುಕಟ್ಟೆಗಳಲ್ಲಿ ಕೆಲಸ ಮಾಡುವ ಸಣ್ಣ ಅಂಗಡಿಯವರು ಮತ್ತು ಮಂಡಿ ಕಾರ್ಮಿಕರಿಗೆ ಏನಾಗಬಹುದು? ಅವರ ಹಕ್ಕುಗಳನ್ನು ಯಾರು ರಕ್ಷಿಸುತ್ತಾರೆ? ಮೋದಿ ಸರ್ಕಾರ ಈ ಬಗ್ಗೆ ಯೋಚಿಸಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಇಂದು ನಾವು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವಾಗ ರೈತರು ಮೂರು 'ರೈತ ವಿರೋಧಿ' ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಹೇಳಿದ್ದಾರೆ.

ರೈತರು ಮತ್ತು ಕಾಂಗ್ರೆಸ್ ಹೋರಾಟ ಯಶಸ್ವಿಯಾಗಲಿದೆ, ರೈತರು ವಿಜಯಶಾಲಿಯಾಗುತ್ತಾರೆ ಎಂದು ನಂಬಿಕೆ ಹೊಂದಿರುವುದಾಗಿ ತಿಳಿಸಿದ್ದಾರೆ. ಇಂದು ರೈತರು, ಕಾರ್ಮಿಕರ ಪರ ಅತಿದೊಡ್ಡ ಸಹಾನುಭೂತಿ ಹೊಂದಿದ್ದ ಮಹಾತ್ಮ ಗಾಂಧಿ ಅವರ ಜನ್ಮ ದಿನ. ದೇಶದ ಆತ್ಮವು ಹಳ್ಳಿಗಳು, ಹೊಲಗಳು, ಮತ್ತು ಕೊಟ್ಟಿಗೆಗಳಲ್ಲಿ ನೆಲೆಸಿದೆ ಎಂದು ಅವರು ಹೇಳುತ್ತಿದ್ದಾಗಿ ಸೋನಿಯಾ ಗಾಂಧಿ ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅಗತ್ಯವುಳ್ಳ ಪ್ರತಿಯೊಬ್ಬ ದೇಶವಾಸಿಗೂ ಸರ್ಕಾರ ಉಚಿತವಾಗಿ ಆಹಾರ ಧಾನ್ಯಗಳನ್ನು ಪೂರೈಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರೈತರು, ಕಾರ್ಮಿಕರ ಪರವಾಗಿ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಹೋರಾಟ ನಡೆಸುತ್ತಿದ್ದು, ಮೂರು ಕಾನೂನುಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com