ಹತ್ರಾಸ್: ಎಸ್ ಐಟಿ ತನಿಖೆ ಪೂರ್ಣ; ಗ್ರಾಮಕ್ಕೆ ಮಾಧ್ಯಮ ಪ್ರವೇಶಕ್ಕೆ ಅನುಮತಿ

ಹತ್ರಾಸ್ ಅತ್ಯಾಚಾರ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಾಳ (ಎಸ್ಐಟಿ) ಪೂರ್ಣಗೊಳಿಸಿದ್ದು, ಸಂತ್ರಸ್ತ ದಲಿತ ಯುವತಿಯ ಗ್ರಾಮಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. 
ಸಂತ್ರಸ್ತ ಯುವತಿಯ ಗ್ರಾಮದಲ್ಲಿ ಪೊಲೀಸ್ ಭದ್ರತೆ
ಸಂತ್ರಸ್ತ ಯುವತಿಯ ಗ್ರಾಮದಲ್ಲಿ ಪೊಲೀಸ್ ಭದ್ರತೆ

ಹತ್ರಾಸ್: ಹತ್ರಾಸ್ ಅತ್ಯಾಚಾರ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಾಳ (ಎಸ್ಐಟಿ) ಪೂರ್ಣಗೊಳಿಸಿದ್ದು, ಸಂತ್ರಸ್ತ ದಲಿತ ಯುವತಿಯ ಗ್ರಾಮಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. 

ಹತ್ರಾಸ್ ನ ಜಿಲ್ಲಾಡಳಿತ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಮಾಧ್ಯಮಗಳ ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ. 

ಎಸ್ಐಟಿ ತನಿಖೆ ಹಿನ್ನೆಲೆಯಲ್ಲಿ ಆ ಗ್ರಾಮಕ್ಕೆ ಹೊರಗಿನಿಂದ ಬರುವವರನ್ನು ಹಾಗೂ ಮಾಧ್ಯಮಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. 

ಈಗ ಎಸ್ಐಟಿ ತನಿಖೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಜಂಟಿ ಮ್ಯಾಜಿಸ್ಟ್ರೇಟ್ ಪ್ರೇಮ್ ಪ್ರಕಾಶ್ ಮೀನಾ ಹೇಳಿದ್ದಾರೆ. ಸಂತ್ರಸ್ತ ಯುವತಿಯ ಕುಟುಂಬಕ್ಕೆ ನಿರ್ಬಂಧ ವಿಧಿಸಿ, ಅವರ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂಬ ಅಂಶವನ್ನೂ ಪ್ರೇಮ್ ಪ್ರಕಾಶ್ ಮೀನಾ ತಳ್ಳಿಹಾಕಿದ್ದಾರೆ. 

ಹತ್ರಾಸ್ ಅತ್ಯಾಚಾರ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಈ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಎಸ್ಐಟಿ ರಚನೆ ಮಾಡಿದ್ದ ಅ.14 ರೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದೇ ವೇಳೆ ಉತ್ತರ ಪ್ರದೇಶದ ಹಿರಿಯ ಅಧಿಕಾರಿಗಳು ಸಂತ್ರಸ್ತ ಯುವತಿಯ ಪೋಷಕರನ್ನು ಭೇಟಿ ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com