ಪ್ರಿಯಾಂಕಾ ಗಾಂಧಿ ಕುರ್ತಾ ಹಿಡಿದೆಳೆದಾ ಪುರುಷ ಪೊಲೀಸ್, ಪೊಲೀಸರ ವರ್ತನೆಗೆ ನೆಟಿಗರಿಂದ ಕಿಡಿ!

ಹತ್ರಾಸ್ ಗ್ಯಾಂಗ್ ರೇಪ್ ಮೃತ ಸಂತ್ರಸ್ತೆಯ ಪೋಷಕರನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಜೊತೆ ಪ್ರಿಯಾಂಕಾ ಗಾಂಧಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಇಬ್ಬರನ್ನು ಮಾರ್ಗ ಮಧ್ಯೆ ಪೊಲೀಸರು ತಡೆಯಲು ಮುಂದಾಗಿದ್ದರು.

Published: 03rd October 2020 11:58 PM  |   Last Updated: 03rd October 2020 11:58 PM   |  A+A-


priyanka gandhi

ಪ್ರಿಯಾಂಕಾ ಗಾಂಧಿ

Posted By : Vishwanath S
Source : Online Desk

ಲಖನೌ: ಹತ್ರಾಸ್ ಗ್ಯಾಂಗ್ ರೇಪ್ ಮೃತ ಸಂತ್ರಸ್ತೆಯ ಪೋಷಕರನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಜೊತೆ ಪ್ರಿಯಾಂಕಾ ಗಾಂಧಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಇಬ್ಬರನ್ನು ಮಾರ್ಗ ಮಧ್ಯೆ ಪೊಲೀಸರು ತಡೆಯಲು ಮುಂದಾಗಿದ್ದರು. ಆಗ ಓರ್ವ ಪೊಲೀಸ್ ಸಿಬ್ಬಂದಿ ಪ್ರಿಯಾಂಕಾರನ್ನು ತಡೆಯಲು ಮುಂದಾದ ವೇಳೆ ಅವರ ಕುರ್ತಾ ಹಿಡಿದು ಎಳೆದಾಡಿದ್ದರು. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಪ್ರಿಯಾಂಕಾ ಗಾಂಧಿ ಕುರ್ತಾವನ್ನು ಪುರುಷ ಪೊಲೀಸ್ ಸಿಬ್ಬಂದಿ ಹಿಡಿದು ಎಳೆದಾಡಿರುವುದಕ್ಕೆ ನೆಟಿಗರು ಕಿಡಿಕಾರಿದ್ದಾರೆ. ಮಹಿಳೆಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ಪೊಲೀಸರಿಗೆ ಗೊತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. 

ಉತ್ತರ ಪ್ರದೇಶದ ಪೊಲೀಸರಿಂದ ತಮ್ಮ ಪಕ್ಷದ ಕಾರ್ಯಕರ್ತರನ್ನು ರಕ್ಷಿಸಲು ಪ್ರಿಯಾಂಕಾ ಗಾಂಧಿ ಪ್ರಯತ್ನಿಸುತ್ತಿರುವಾಗ ಈ ಘಟನೆ ನಡೆದಿದೆ. 

ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಶಿವಸೇನೆ ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ. ನಿಮ್ಮ ಸರ್ಕಾರದಲ್ಲಿ ಮಹಿಳಾ ಪೊಲೀಸರು ಇಲ್ವಾ ಎಂದು ಕುಟುಕಿದ್ದಾರೆ.

ಈ ಹಿಂದೆ ರಾಹುಲ್ ಗಾಂಧಿಯನ್ನು ಪೊಲೀಸರು ತಡೆಯಲು ಮುಂದಾದಾಗ ಅವರು ಎಡವಿ ಕೆಳಗೆ ಬಿದ್ದಿದ್ದರು.

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp