ತೆಲಂಗಾಣ: 13 ವರ್ಷದ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಬೆಂಕಿ ಹಚ್ಚಿದ ಕಿರಾತಕ

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 20 ವರ್ಷದ ದಲಿತ ಯುವತಿ ಮೇಲಿನ ಸಾಮೂಹಿಕ ಹತ್ಯೆ ಹಾಗೂ ಹತ್ಯೆ ಪ್ರಕರಣದ ಬೆನ್ನಲ್ಲೇ, ತೆಲಂಗಾಣದ ಖಮ್ಮಂ ಜಿಲ್ಲೆಯ ಮನೆಯೊಂದರಲ್ಲಿ ಕೆಲಸಕ್ಕಿದ್ದ 13 ವರ್ಷದ ಅಪ್ರಾಪ್ತ ದಲಿತ ಬಾಲಕಿ ಮೇಲೆ ಮಾಲೀಕನ ಪುತ್ರ ಅತ್ಯಾಚಾರಕ್ಕೆ ಯತ್ನಿಸಿದ್ದು, ನಂತರ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

Published: 05th October 2020 06:52 PM  |   Last Updated: 05th October 2020 07:40 PM   |  A+A-


Casual_photo1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಖಮ್ಮಂ: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 20 ವರ್ಷದ ದಲಿತ ಯುವತಿ ಮೇಲಿನ ಸಾಮೂಹಿಕ ಹತ್ಯೆ ಹಾಗೂ ಹತ್ಯೆ ಪ್ರಕರಣದ ಬೆನ್ನಲ್ಲೇ, ತೆಲಂಗಾಣದ ಖಮ್ಮಂ ಜಿಲ್ಲೆಯ ಮನೆಯೊಂದರಲ್ಲಿ ಕೆಲಸಕ್ಕಿದ್ದ 13 ವರ್ಷದ ಅಪ್ರಾಪ್ತ ದಲಿತ ಬಾಲಕಿ ಮೇಲೆ ಮಾಲೀಕನ ಪುತ್ರ ಅತ್ಯಾಚಾರಕ್ಕೆ ಯತ್ನಿಸಿದ್ದು, ನಂತರ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಆಕೆಯ ದೇಹ ಶೇ. 70 ರಷ್ಟು ಸುಟ್ಟಿದ್ದು, ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾಳೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಸೆಪ್ಟೆಂಬರ್ 18 ರಂದು ಈ ಘಟನೆ ನಡೆದಿದ್ದು, ಆ ಬಾಲಕಿಗೆ ಕೆಲಸ ನೀಡಿದ್ದ ವ್ಯಕ್ತಿ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಿದ್ದು, ಕುಟುಂಬದವರಿಗೆ ಘಟನೆ ತಿಳಿಯದಂತೆ ಮಾಡಿದ್ದಾರೆ. ಮನೆಯಲ್ಲಿ ನಿಜವಾಗಿ ಏನು ನಡೆದಿದೆ ಎಂಬುದನ್ನು ಬಾಲಕಿ ಇಂದು ತನ್ನ ತಂದೆಗೆ ಮಾಹಿತಿ ನೀಡಿದ್ದಾಳೆ. ಇದರ ಆಧಾರದ ಮೇಲೆ ದೂರು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಮೇ ತಿಂಗಳಿನಿಂದ ಅಲ್ಲಂ ಸುಬ್ಬರಾವ್ ಮನೆಯಲ್ಲಿ ಆ ಬಾಲಕಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಆಕೆಯ ತಂದೆಯನ್ನು ಕರೆದ ಸುಬ್ಬರಾವ್ , ಕೆಲಸ ಮಾಡುತ್ತಿದ್ದಾಗ ಆಕಸ್ಮಿಕ ಅಗ್ನಿ ಅನಾಹುತದಿಂದ ಆಕೆ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡ ತಂದೆ ಆಸ್ಪತ್ರೆಗೆ ಹೋಗಿ ನೋಡಲಾಗಿ, ಆಕೆ ತೀವ್ರ ಗಾಯಗಳಿಂದ ಅರೆಪ್ರಜ್ಞಾವಸ್ಥೆಯಲ್ಲಿರುವುದು ಕಂಡುಬಂದಿದೆ. ಇಂದು ಆ ಬಾಲಕಿಗೆ ಪ್ರಜ್ಞೆ ಬಂದಿದ್ದು, ಅಲ್ಲಂ ಸುಬ್ಬರಾವ್ ಅವರ ಪುತ್ರ ಅಲ್ಲಂ ಮಾರಯ್ಯ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ತಿಳಿಸಿದ್ದಾಳೆ.

ರೂಮ್ ನಲ್ಲಿದ್ದಾಗ ಹಿಂದೆಯಿಂದ ಬಂದ ಅಲ್ಲಂ ಮಾರಯ್ಯ, ತನ್ನೊಂದಿಗೆ ಮಲಗುವಂತೆ ಕೇಳಿದ್ದಾನೆ. ಇದಕ್ಕೆ ನಿರಾಕರಿಸಿದಾಗ ಬಟ್ಟೆ ಹರಿದು ಹಾಕಿ, ಬೆಂಕಿ ಹಚ್ಚಿದ್ದಾಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಬಾಲಕಿ ಹೇಳಿಕೆ ನೀಡಿದ್ದಾಳೆ.

Stay up to date on all the latest ರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp