ಎಫ್ ಸಿಐ ಗೋದಾಮಿನಲ್ಲಿ 1,550 ಟನ್ ಗಳಷ್ಟು ಧಾನ್ಯಗಳು ಹಾನಿ, ವ್ಯರ್ಥ!

ಲಾಕ್ ಡೌನ್ ಸಮಯದಲ್ಲಿ ಹಲವಾರು ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ಸಂಚರಿಸುತ್ತಿದ್ದಾಗ ಆಹಾರವಿಲ್ಲದೇ ಸಾವನ್ನಪ್ಪಿದ್ದು ಒಂದೆಡೆಯಾದರೆ. ಈ ವರ್ಷದಲ್ಲಿ ಬರೊಬ್ಬರಿ 1,550 ಟನ್ ಗಳಷ್ಟು ಆಹಾರ ಧಾನ್ಯಗಳು ಎಫ್ ಸಿಐ ಗೋದಾಮುಗಳಲ್ಲಿ ಹಾನಿಗೊಳಗಾಗಿದೆ.  

ಈಗ ಬಹಿರಂಗಗೊಂಡಿರುವ ಅಂಕಿ-ಅಂಶಗಳಿಂದ 1,550 ಟನ್ ಗಳಷ್ಟು ಆಹಾರ ಧಾನ್ಯಗಳು ಎಫ್ ಸಿಐ ಗೋದಾಮುಗಳಲ್ಲಿ ನಾಶವಾಗಿವೆ ಎಂದು ತಿಳಿದುಬಂದಿದೆ. 

ಗ್ರಾಹಕ ವ್ಯವಹಾರಗಳ ಸಚಿವಾಲಯ ನೀಡಿರುವ ಅಂಕಿ-ಅಂಶಗಳ ಪ್ರಕಾರ ಮೇ ತಿಂಗಳಲ್ಲಿ 26 ಟನ್, ಜೂನ್ ತಿಂಗಳಲ್ಲಿ 1453 ಟನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಅನುಕ್ರಮವಾಗಿ 41 ಹಾಗೂ 51 ಟನ್ ಗಳಷ್ಟು ಆಹಾರ ಧಾನ್ಯಗಳು ಇನ್ನು ಮುಂದೆ ಬಳಕೆಯಾಗದಂತಹ ಸ್ಥಿತಿಗೆ ತಲುಪಿ ಹಾನಿಗೊಳಗಾಗಿವೆ.

ಪರಿಸ್ಥಿತಿಯ ವ್ಯಂಗ್ಯವೆಂಬಂತೆ ಒಂದೆಡೆ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಲಾಕ್ ಡೌನ್ ಹಿನ್ನೆಲೆ ಕಾಲ್ನಡಿಗೆಯಲ್ಲೇ ಸಂಚರಿಸುತ್ತಿದ್ದ ವಲಸಿಗ ಕಾರ್ಮಿಕರು ಆಹಾರ ಸಿಗದೇ ಸಾವನ್ನಪ್ಪಿದ್ದರು. ಆದರೆ ಆ ತಿಂಗಳಲ್ಲಿ ಎಫ್ ಸಿಐ ಗೋದಾಮಿನಲ್ಲಿದ್ದ ದವಸ-ಧಾನ್ಯಗಳಿಗೆ ಯಾವುದೇ ಹಾನಿಯೂ ಉಂಟಾಗಿರಲಿಲ್ಲ ಎಂದು ತಿಳಿದುಬಂದಿದೆ.

ಕಳೆದ ವರ್ಷದ ಏಪ್ರಿಲ್-ಜೂನ್ ಗೆ ಹೋಲಿಕೆ ಮಾಡಿದರೆ ಈ ಬಾರಿಯ ಹಾನಿ ಹೆಚ್ಚಿನ ಪ್ರಮಾಣದಲ್ಲಿದೆ. ಕಳೆದ ವರ್ಷ ಏಪ್ರಿಲ್ ಜೂನ್ ತಿಂಗಳಲ್ಲಿ 100 ಟನ್ ಗಳಷ್ಟು ಧಾನ್ಯಗಳು ಹಾನಿಗೀಡಾಗಿದ್ದರೆ, ಈ ವರ್ಷ 1500 ಟನ್ ಗಳಷ್ಟು ಹಾನಿಯಾಗಿವೆ.

ಎಫ್ ಸಿಐ ಗೋದಾಮುಗಳಲ್ಲಿ ವೈಜ್ಞಾನಿಕವಾಗಿ ಧಾನ್ಯಗಳನ್ನು ಸಂಗ್ರಹ ಮಾಡಲಾಗಿರುತ್ತದೆ. ಇಷ್ಟೆಲ್ಲದರ ನಡುವೆಯೂ ಸಣ್ಣ ಪ್ರಮಾಣದಷ್ಟು ಧಾನ್ಯಗಳು ಹಾನಿಗೊಳಗಾಗುತ್ತವೆ.

ಎಷ್ಟೇ ಪ್ರಮಾಣದ ಧಾನ್ಯಗಳು ಹಾನಿಗೊಳಗಾದರೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. 2014-18 ವರೆಗೆ 125 ಅಧಿಕಾರಿಗಳನ್ನು ಹೊಣೆ ಮಾಡಿ ಕ್ರಮ ಜರುಗಿಸಲಾಗಿದೆ. 

ಲಾಕ್ ಡೌನ್ ಅವಧಿಯಲ್ಲಿ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ಒದಗಿಸಲು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ  l2l ಎಲ್ಎಂಟಿಯಷ್ಟು ಆಹಾರ ಧಾನ್ಯಗಳನ್ನು ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com