ಗುರಗಾಂವ್: 25 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಹಲ್ಲೆ

25 ವರ್ಷದ ಮಹಿಳೆ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ನಡೆಸಿ, ನಂತರ ಮನ ಬಂದಂತೆ ಆಕೆಯನ್ನು ಥಳಿಸಿರುವ ಘಟನೆ ಗುರಗಾಂವ್ ನಲ್ಲಿ ಭಾನುವಾರ ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡೀಗಢ: 25 ವರ್ಷದ ಮಹಿಳೆ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ನಡೆಸಿ, ನಂತರ ಮನ ಬಂದಂತೆ ಆಕೆಯನ್ನು ಥಳಿಸಿರುವ ಘಟನೆ ಗುರಗಾಂವ್ ನಲ್ಲಿ ಭಾನುವಾರ ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ 1 ಗಂಟೆಯೊಳಗೆ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದರು, ಬಂಧಿತರು 20 ರಿಂದ 25 ವರ್ಷ ವಯಸ್ಸಿನವರಾಗಿದ್ದಾರೆ.

ಗುರಗಾಂವ್ ನ ಡಿಎಲ್ ಎಫ್ 2ನೇ ಹಂತದಲ್ಲಿ ಘಟನೆ ನಡೆದಿದೆ ಎಂದು ಎಸಿಪಿ ತಿಳಿಸಿದ್ದಾರೆ. ಬಂಧಿತ ಆರೋಪಿಗಳೆಲ್ಲಾರು ಡೆಲಿವರಿ ಬಾಯ್ಸ್ ಗಳಾಗಿದ್ದಾರೆ.

ಆರೋಪಿಗಳು ಶನಿವಾರ ರಾತ್ರಿ ಸಿಕೆಂದರ್ ಪುರ್ ನಲ್ಲಿ ಮಹಿಳೆಯನ್ನು ಭೇಟಿ ಮಾಡಿದ್ದಾರೆ.  ನಂತರ ರಿಯಲ್ ಎಸ್ಟೇಟ್ ಕಚೇರಿಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಅತ್ಯಾಚಾರಕ್ಕೆ ಆಕೆ ವಿರೋಧಿಸಿದಾಗ ಒಬ್ಬ ಆರೋಪಿ ಆಕೆ ತಲೆಯನ್ನು ಗೋಡೆಗೆ ಗುದ್ದಿದ್ದಾನೆ,ತೀವ್ರವಾದ ಗಾಯಗಳಿಂದ ಆಕೆಯನ್ನು ಗುರಗಾಂವ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com