ಕೊರೋನಾ ಟ್ಯಾಬ್ಲೆಟ್ ಗಾಗಿ ಚಿನ್ನದ ಸರ ಕಳೆದುಕೊಂಡ ತಮಿಳುನಾಡು ವೃದ್ಧೆ

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದು ಕೆಲವು ಕಿಡಿಗೇಡಿಗಳಿಗೆ ಹಣ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಂತಾಗಿದೆ. ಕಿಡಿಗೇಡಿಯ ಕೃತ್ಯದಿಂದ ಮಹಿಳೆಯೊಬ್ಬರು 20 ಗ್ರಾಂ ಚಿನ್ನದ ಸರ ಕಳೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಧುರೈ: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದು ಕೆಲವು ಕಿಡಿಗೇಡಿಗಳಿಗೆ ಹಣ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಂತಾಗಿದೆ. ಕಿಡಿಗೇಡಿಯ ಕೃತ್ಯದಿಂದ ಮಹಿಳೆಯೊಬ್ಬರು 20 ಗ್ರಾಂ ಚಿನ್ನದ ಸರ ಕಳೆದುಕೊಂಡಿದ್ದಾರೆ.

ಮಗಳ ಮನೆಗೆ ಬಸ್ ನಲ್ಲಿ ತೆರಳುತ್ತಿದ್ದ ತಮಿಳುನಾಡಿನ ವೃದ್ಧೆಯೊಬ್ಬರು ದುಷ್ಕರ್ಮಿಯೊಬ್ಬ ನೀಡಿದ ಮಾತ್ರೆಯಿಂದ ಚಿನ್ನದ ಸರ ಕಳೆದುಕೊಂಡಿದ್ದಾರೆ.

ರಾಜಮ್ಮಾಳ್  ಶುಕ್ರವಾರ ಬಸ್ ನಲ್ಲಿ ತಮ್ಮ ಮನೆಗೆ ತೆರಳುತ್ತಿದ್ದರು. ಈ ವೇಳೆ ಬಸ್ ನಲ್ಲಿದ್ದ ಸಹ ಪ್ರಯಾಣಿಕ ಆಕೆಗೆ  ಮಾತ್ರೆ ನೀಡಿದ್ದಾನೆ, ಈ ಮಾತ್ರೆ ತಿಂದರೆ ಕೊರೋನಾ ಬರೊಲ್ಲ ಎಂದು ಹೇಳಿದ್ದಾನೆ. ಆತನ ಮಾತು ನಂಬಿದ ಆಕೆ  ಮಾತ್ರೆ ತಿಂದಿದ್ದಾರೆ.  

ಕತ್ತಿನಲ್ಲಿರುವ ಸರವನ್ನು ಬಿಚ್ಚಿ ಬ್ಯಾಗ್ ಗೆ ಇಡುವಂತೆ ಹೇಳಿದ್ದಾನೆ, ಆತನ ಮಾತರ ನಂಬಿದ ವೃದ್ದೆ ಸರ ತೆಗೆದು ಮಾತ್ರೆ ತಿಂದಿದ್ದಾರೆ. ಮಾತ್ರೆ ತಿಂದ ನಂತರ ಆಕೆ ಅಸ್ವಸ್ಥಗೊಂಡಿದ್ದಾರೆ.

ಆಕೆ ಇಳಿಯಬೇಕಾಗಿದ್ದ ಮೂರು ಸ್ಟಾಪ್ ಗಳ ಮೊದಲು ಆರೋಪಿ ಆಕೆಯನ್ನು ಇಳಿಸಿದ್ದಾನೆ, ಆಕೆಗೆ ಒಂದು ಕಪ್ ಟೀ ಕುಡಿಸಿದ್ದಾನೆ, ಜೊತೆಗೆ ಮತ್ತೊಂದು ಬಸ್ ಹತ್ತಿಸಿ ಆಕೆ ಇಳಿಯಬೇಕಾದ ನಿಲ್ದಾಣದಲ್ಲಿ ಇಳಿಸಿದ್ದಾನೆ. ತಿರುನಗರದಲ್ಲಿ ಬಸ್ ಇಳಿಯುವಾಗ ಆಕೆಯ ಬಳಿಯಿಂದ ಚಿನ್ನದ ಸರ ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

12 ಗಂಟೆಗಳ ನಂತರ ಮಹಿಳೆ ಮತ್ತೆ ಸಹಜ ಸ್ಥಿತಿಗೆ ಬಂದಿದ್ದಾರೆ. ರಾಜಮ್ಮಾಳ್ ಆಸ್ಟಿನ್ ಪಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com