ಮೋದಿಯನ್ನು ಕೊಲ್ಲಲು ಯಾಕೆ ಯಾರೂ ಬಾಂಬ್ ತಯಾರಿಸಿಲ್ಲ: ಮಾಜಿ ಎಂಪಿ ಶಾಸಕ ವಿವಾದಾಸ್ಪದ ಹೇಳಿಕೆ!

ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವಂತಾ ಬಾಂಬ್ ಅನ್ನು ಯಾಕೆ ಯಾರೂ ತಯಾರಿಸುತ್ತಿಲ್ಲ ಎಂದು ಮಧ್ಯಪ್ರದೇಶದ ಮಾಜಿ ಶಾಸಕ ಮತ್ತು ಗೊಂಡ್ವಾನ ಗಾಂತ್ರ ಪಕ್ಷದ(ಜಿಜಿಪಿ) ಮುಖಂಡರು ಸಾರ್ವಜನಿಕ ಸಭೆಯಲ್ಲಿ ಕೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೋದಿ
ಮೋದಿ

ಭೋಪಾಲ್: ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವಂತಾ ಬಾಂಬ್ ಅನ್ನು ಯಾಕೆ ಯಾರೂ ತಯಾರಿಸುತ್ತಿಲ್ಲ ಎಂದು ಮಧ್ಯಪ್ರದೇಶದ ಜೆಜಿಪಿ ಮಾಜಿ ಶಾಸಕರೊಬ್ಬರು ಸಾರ್ವಜನಿಕ ಸಭೆಯಲ್ಲಿ ಕೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಮಾಜಿ ಶಾಸಕ ರಾಮ್‌ಗುಲಂ ಉಯ್ಕೆ, ಇತ್ತೀಚೆಗೆ ಸಿಯೋನಿ ಜಿಲ್ಲೆಯಲ್ಲಿ ನಡೆದ ಗ್ರಾಮಸ್ಥರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಕೋವಿಡ್ ಸಾಂಕ್ರಾಮಿಕ ರೋಗದ ಬಗ್ಗೆ ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡರು. ಒಬ್ಬ ವ್ಯಕ್ತಿ(ಪ್ರಧಾನಿ) 130 ಕೋಟಿ ಜನರ ಇಡೀ ದೇಶವನ್ನು ಮರುಳು ಮಾಡುತ್ತಿದ್ದಾನೆ. ಪ್ರಸ್ತುತ ಕೇಂದ್ರ ಸರ್ಕಾರವು ಮಹಾಮಾರಿ ವೈರಸ್ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದೆ ಎಂದು ಯುಕಿ ಹೇಳಿದರು. 

ಅಬ್ ಬಾಂಬ್ ನಹಿ ಬನ್ ರಹೀನ್ ಹೈ ಕ್ಯಾ, ಇಂದಿರಾ ಗಾಂಧಿ ಕೋ ಮಾರ್ನೆ ಕೆಲಿಯೆ ಗೋಲಿ ಬನ್ ಗಯೆ, ರಾಜೀವ್ ಗಾಂಧಿ ಕೋ ಮಾರ್ನೆ ಕೆಲಿಯೆ ಮಾನವ್ ಬಾಂಬ್ ಬನ್ ಗಯೆ, ಮೋದಿಜಿ ಕೋ ಉಡಾನೆ ಕೆಲಿಯೆ ಕೊಯಿ ಬಾಂಬ್ ನಹಿ ಬಾನಾ ಸಕ್ ರಾಹಾ ಹೈ ಕ್ಯಾ(ಬಾಂಬ್‌ಗಳ ಉತ್ಪಾದನೆಯನ್ನು ನಿಲ್ಲಿಸಲಾಗಿದೆಯಾ. ಇಂದಿರಾ ಗಾಂಧಿಯನ್ನು ಹತ್ಯೆ ಮಾಡಲು ಗುಂಡುಗಳು ಇದ್ದವು, ರಾಜೀವ್ ಗಾಂಧಿಯನ್ನು ಕೊಲ್ಲಲು ಮಾನವ ಬಾಂಬ್ ರೆಡಿಯಾಗಿತ್ತು ಆದರೆ ಮೋದಿಜಿಯನ್ನು ಕೊಲ್ಲಲು ಯಾಕೆ ಯಾರೂ ಬಾಂಬ್ ತಯಾರಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಅಭಿವೃದ್ಧಿಯ ಬಗ್ಗೆ ಪ್ರತಿಕ್ರಿಯಿಸಿದ ಸಿಯೋನಿ ಜಿಲ್ಲೆಯ ಸ್ಥಳೀಯ ಬಿಜೆಪಿ ಮುಖಂಡ ಪ್ರಮೋದ್ ಪಟೇಲ್, “ಮಾಜಿ ಶಾಸಕ ರಾಮ್‌ಗುಲಂ ಉಕೈ ಅವರು ಅಗ್ಗದ ಪ್ರಚಾರವನ್ನು ಸಂಗ್ರಹಿಸಲು ಮತ್ತು ಬುಡಕಟ್ಟು ಜನರನ್ನು ದಾರಿ ತಪ್ಪಿಸಲು ಅತ್ಯಂತ ಆಕ್ಷೇಪಾರ್ಹ ಭಾಷಣ ಮಾಡಿದ್ದಾರೆ. ಪ್ರಧಾನ ಮಂತ್ರಿಯನ್ನು ಕೊಲ್ಲಲು ಬಾಂಬ್ ತಯಾರಿಸಲು ಹೇಳುವುದು ಗಂಭೀರ ಅಪರಾಧ. ಸಿಯೋನಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಈ ವಿಷಯವನ್ನು ಅರಿತುಕೊಂಡು ಮಾಜಿ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದರು.

ಆಶ್ಚರ್ಯಕರ ಸಂಗತಿಯೆಂದರೆ, ಸದ್ಯ ಬಿಜೆಪಿ ನಾಯಕರು ಯಾರೂ ಯಾವುದೇ ಪೊಲೀಸ್ ದೂರು ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com