ಜೆಇಇ ಅಡ್ವಾನ್ಸ್ಡ್-2020 ಫಲಿತಾಂಶ ಪ್ರಕಟ: ಚಿರಾಗ್ ಫಲೋರ್ ಟಾಪರ್

ಜೆಇಇ ಅಡ್ವಾನ್ಸ್ಡ್-2020 ಫಲಿತಾಂಶ ಪ್ರಕಟಗೊಂಡಿದ್ದು, ಚಿರಾಗ್ ಫಲೋರ್ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ. 

Published: 05th October 2020 11:59 AM  |   Last Updated: 05th October 2020 01:13 PM   |  A+A-


IIT Delhi

Posted By : Srinivas Rao BV

ನವದೆಹಲಿ: ಜೆಇಇ ಅಡ್ವಾನ್ಸ್ಡ್-2020 ಫಲಿತಾಂಶ ಪ್ರಕಟಗೊಂಡಿದ್ದು, ಚಿರಾಗ್ ಫಲೋರ್ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ. 

396 ಅಂಕಗಳಿಗೆ 352 ಅಂಕಗಳನ್ನು ಪಡೆದಿರುವ ಚಿರಾಗ್ ಐಐಟಿ ಬಾಂಬೆ ಝೋನ್ ನಿಂದ ಜೆಇಇ ಪರೀಕ್ಷೆ ಬರೆದಿದ್ದರು.

ವಿದ್ಯಾರ್ಥಿನಿಯರ ವಿಭಾಗದಲ್ಲಿ ಐಐಟಿ ರೂರ್ಕಿ ಝೋನ್ ನಿಂದ ಪರೀಕ್ಷೆ ಬರೆದಿದ್ದ ಕನಿಷ್ಕಾ ಮಿತ್ತಲ್ 396 ಅಂಕಗಳಿಗೆ 315 ಅಂಕಗಳನ್ನು ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ.  ಕನಿಷ್ಕಾ ಮಿತ್ತಲ್ ಅವರನ್ನು ಹೊರತುಪಡಿಸಿ ಯಾವುದೇ ವಿದ್ಯಾರ್ಥಿನಿಯರೂ ಜೆಇಇ ಟಾಪ್ 10 ರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಜೆಇಇ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸೆ.27 ರಂದು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ನಡೆದಿತ್ತು. ಒಂದು ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

jeeadv.nic.in ವೆಬ್ ಸೈಟ್ ನಲ್ಲಿ ಫಲಿತಾಂಶಗಳನ್ನು ನೋಡಬಹುದಾಗಿದೆ.

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp