ಪ್ರಿಯಾಂಕಾ ಗಾಂಧಿ ಕುರ್ತಾ ಹಿಡಿದು ಎಳೆದ ಪೊಲೀಸ್: ಘಟನೆ ಬಗ್ಗೆ ಕ್ಷಮೆ ಕೇಳಿದ ನೊಯ್ಡಾ ಪೊಲೀಸರು

ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಮಾಡಲು ಹೋಗುತ್ತಿದ್ದ ವೇಳೆ ತಡೆದ ಪೊಲೀಸರು ಕುರ್ತಾ ಹಿಡಿದು ಎಳೆದ ಘಟನೆ ಬಗ್ಗೆ ಕ್ಷಮೆ ಕೇಳಿರುವ ಗೌತಮ್ ಬುದ್ಧ ನಗರ ಪೊಲೀಸರು ಈ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಹೇಳಿದ್ದಾರೆ.
ದೆಹಲಿಯ ವಾಲ್ಮೀಕಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ
ದೆಹಲಿಯ ವಾಲ್ಮೀಕಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ

ನೊಯ್ಡಾ: ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಮಾಡಲು ಹೋಗುತ್ತಿದ್ದ ವೇಳೆ ತಡೆದ ಪೊಲೀಸರು ಕುರ್ತಾ ಹಿಡಿದು ಎಳೆದ ಘಟನೆ ಬಗ್ಗೆ ಕ್ಷಮೆ ಕೇಳಿರುವ ಗೌತಮ್ ಬುದ್ಧ ನಗರ ಪೊಲೀಸರು ಈ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ತಮ್ಮ ಸೋದರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇನ್ನಿತರ ಮುಖಂಡರೊಂದಿಗೆ ಮೊನ್ನೆ ಶನಿವಾರ ಅಪರಾಹ್ನ ಗ್ಯಾಂಗ್ ರೇಪ್ ನಲ್ಲಿ ಮೃತಪಟ್ಟ ದಲಿತ ಮಹಿಳೆಯ ಕುಟುಂಬಸ್ಥರನ್ನು ಭೇಟಿ ಮಾಡಲು ತೆರಳುತ್ತಿದ್ದರು. ಈ ವೇಳೆ ದೆಹಲಿ-ಉತ್ತರ ಪ್ರದೇಶ ಗಡಿಭಾಗ ಡಿಎನ್ ಡಿ ಮೇಲ್ಸೇತುವೆ ಬಳಿ ಪೊಲೀಸರು ಮತ್ತು ಕಾಂಗ್ರೆಸ್ ಮುಖಂಡರ ಮಧ್ಯೆ ಸ್ವಲ್ಪ ಮಾತಿನ ಚಕಮಕಿ ನಡೆದು ಹೆಲ್ಮೆಟ್ ಧರಿಸಿದ್ದ ಒಬ್ಬ ಪೊಲೀಸ್ ಅಧಿಕಾರಿ ಪ್ರಿಯಾಂಕಾ ಗಾಂಧಿ ಅವರು ಧರಿಸಿದ್ದ ಕುರ್ತಾವನ್ನು ಹಿಡಿದು ಎಳೆದರು. ಈ ವಿಡಿಯೊ ವ್ಯಾಪಕವಾಗಿ ಸುದ್ದಿಯಾಗಿತ್ತು.

ಈ ಘಟನೆ ಬಗ್ಗೆ ನೊಯ್ಡಾ ಪೊಲೀಸರು ವಿಷಾದ ವ್ಯಕ್ತಪಡಿಸಿದ್ದು ಜನದಟ್ಟಣೆ ಮಧ್ಯೆ ಪ್ರಿಯಾಂಕಾ ಗಾಂಧಿ ಮೇಲೆ ಪುರುಷ ಪೊಲೀಸ್ ಅಧಿಕಾರಿ ಕೈಯಿಂದ ಹಿಡಿದು ಎಳೆದ ಕ್ರಮ ಸರಿಯಲ್ಲ. ಇದಕ್ಕಾಗಿ ಪ್ರಿಯಾಂಕಾ ಗಾಂಧಿ ಕ್ಷಮೆ ಕೇಳುತ್ತೇವೆ.ಈ ಬಗ್ಗೆ ಡಿಸಿಪಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು ಹಿರಿಯ ಮಹಿಳಾ ಅಧಿಕಾರಿಯಿಂದ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com