ಏಕಕಾಲದಲ್ಲಿ ಪಾಕಿಸ್ತಾನ-ಚೀನಾ ವಿರುದ್ಧ ಯುದ್ಧ ಮಾಡಲು ಭಾರತೀಯ ಸೇನೆ ಸನ್ನದ್ಧ: ಐಎಎಫ್ ಮುಖ್ಯಸ್ಥ ಆರ್ ಕೆಎಸ್ ಭದುರಿಯಾ

ಪೂರ್ವ ಲಡಾಖ್‌ನಲ್ಲಿ ಚೀನಾದ ಪಿಎಲ್‌ಎ ಜೊತೆ ನಡೆಯುತ್ತಿರುವ ಗಡಿ ವಿವಾದದ ನಡುವೆಯೇ, ಭಾರತೀಯ ವಾಯುಸೇನೆ ಏಕಕಾಲದಲ್ಲಿ ಪಾಕಿಸ್ತಾನ-ಚೀನಾ ವಿರುದ್ಧ ಯುದ್ಧ ಮಾಡಲು ಸರ್ವಸನ್ನದ್ಧವಾಗಿದೆ ಎಂದು ಐಎಎಫ್ ಮುಖ್ಯಸ್ಥ ಆರ್ ಕೆಎಸ್ ಭದುರಿಯಾ ಹೇಳಿದ್ದಾರೆ.
ಆರ್ ಕೆಎಸ್ ಭದುರಿಯಾ
ಆರ್ ಕೆಎಸ್ ಭದುರಿಯಾ

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಚೀನಾದ ಪಿಎಲ್‌ಎ ಜೊತೆ ನಡೆಯುತ್ತಿರುವ ಗಡಿ ವಿವಾದದ ನಡುವೆಯೇ, ಭಾರತೀಯ ವಾಯುಸೇನೆ ಏಕಕಾಲದಲ್ಲಿ ಪಾಕಿಸ್ತಾನ-ಚೀನಾ ವಿರುದ್ಧ ಯುದ್ಧ ಮಾಡಲು ಸರ್ವಸನ್ನದ್ಧವಾಗಿದೆ ಎಂದು ಐಎಎಫ್ ಮುಖ್ಯಸ್ಥ ಆರ್ ಕೆಎಸ್ ಭದುರಿಯಾ ಹೇಳಿದ್ದಾರೆ.

ಈ ಕುರಿತಂತೆ ದೆಹಲಿಯಲ್ಲಿ ಮಾತನಾಡಿದ ಆರ್ ಕೆಎಸ್ ಬಡೌರಿಯಾ ಅವರು, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಎರಡು ಪ್ರಮುಖ ಯುದ್ಧಗಳೂ ಸೇರಿದಂತೆ ಭಾರತದ ವಿರುದ್ಧದ ಯಾವುದೇ ಸಂಘರ್ಷಕ್ಕೂ ಭಾರತೀಯ ಸೇನೆ ಸರ್ವಸನ್ನದ್ಧವಾಗಿದೆ. ನಾವು ಯಾವುದೇ ಸಂಘರ್ಷಕ್ಕೆ ಸಿದ್ಧರಾಗಿದ್ದೇವೆ. ಯಾವುದೇ  ಆಕಸ್ಮಿಕತೆಯನ್ನು ಎದುರಿಸಲು ನಾವು ಬಲವಾಗಿ ನಿಯೋಜಿಸಲ್ಪಟ್ಟಿದ್ದೇವೆ ಎಂದು ಭದುರಿಯಾ ವರ್ಚುವಲ್ ಸಭೆಯಲ್ಲಿ ಹೇಳಿದ್ದಾರೆ. 

ಭಾರತೀಯ ವಾಯುಸೇನೆಗೆ ರಾಫೆಲ್ ಯುದ್ಧ ವಿಮಾನ ಸೇರ್ಪಡೆ ನಮ್ಮ ಶಕ್ತಿ-ಸಾಮರ್ಥ್ಯವನ್ನು ಬಳಿಷ್ಠಗೊಳಿಸಿದೆ. ಭಾರತೀಯ ವಾಯುಸೇನೆ ಶೀಘ್ರಗತಿಯಲ್ಲಿ ಬದಲಾಗುತ್ತಿದ್ದು, ಅತ್ಯಾಧುನಿಕ ಅವಕಾಶಗಳಿಗೆ ತೆರೆದುಕೊಳ್ಳುವ ಮೂಲಕ ತಮ್ಮ ಸಾಮರ್ಥ್ವನ್ನು ವೃದ್ಧಿಸಿಕೊಳ್ಳುತ್ತಿದೆ ಎಂದು ಹೇಳಿದರು. ಅಂತೆಯೇ  ಚೀನಾ-ಭಾರತ ನಡುವಿನ ಸೌಹಾರ್ಧ ಮಾತುಕತೆ ಪ್ರಕ್ರಿಯೆ ಕಡಿಮೆ ಮತ್ತು ನಿಧಾನವಾಗುತ್ತಿದ್ದು, ಚೀನಾ ಸೇನೆ ಎಲ್ ಎಸಿ ಅತಿಕ್ರಮಣ ಮಾಡುವುದು ಸರಿಯಲ್ಲ. ಚೀನಾ ಸೇನೆಯ ನಿಲುವ ನಮ್ಮಲ್ಲಿ ಅಚ್ಚರಿಯನ್ನುಂಟು ಮಾಡಿದೆ. ನಾವು ಎಂದಿಗೂ ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ ವಾಯುಸೇನೆ ಯಾವುದೇ ರೀತಕಿಯ  ಕ್ಲಿಷ್ಟಕರ ಪರಿಸ್ಥಿತಿಗೆ ಶೀಘ್ರವಾಗಿ ಹೊಂದಿಕೊಳ್ಳುತ್ತಿದ್ದು, ಅತ್ಯಗತ್ಯ ಸಲಕರಣೆಗಳು, ವಸ್ತುಗಳು ಸೈನಿಕರ ಕೈ ಸೇರುವಂತೆ ಮಾಡಲಾಗುತ್ತಿದೆ. ಇದರಲ್ಲಿ ವಾಯುಪಡೆಯ ಪಾತ್ರ ಮಹತ್ವದ್ದಾಗಿದೆ ಎಂದು ಭದುರಿಯಾ ಹೇಳಿದರು.

ಗಡಿಯಲ್ಲಿ ನಾವು ಈಗ ಸರ್ವ ಸನ್ನದ್ಧವಾಗಿದ್ದು, ಮುಂದಿನ 3 ತಿಂಗಳ ಲಡಾಖ್ ಪರಿಸ್ಥಿತಿ ಇಂಡೋ-ಚೀನಾ ನಡುವಿನೆ ಮಾತುಕತೆಯ ಮೇಲೆ ಆಧಾರಿತವಾಗಿರುತ್ತದೆ. ಮಾತುಕತೆ ಫಲಪ್ರದವಾಗುವ ವಿಶ್ವಾಸ ತಮಗಿದೆ. ಚೀನಾ ಸರ್ಕಾರ ಕೂಡ ಮಾತುಕತೆಗೆ ಮುಂದಾಗಿರುವುದು ಸಕಾರಾತ್ಮಕ ನಡೆಯಾಗಿದೆ. ಆದರೂ  ನಾವು ಸೇನೆ ನಿಯೋಜನೆಯಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಗಡಿಯಲ್ಲಿ ಸೈನಿಕರ ನಿಯೋಜಿಸುವ ಅಧಿಕಾರ ನಮಗಿದೆ. ಚೀನಾದ ಯಾವುದೇ ದುಸ್ಸಾಹಸಕ್ಕೆ ಉತ್ತರ ನೀಡುವ ಸಾಮರ್ಥ್ಯ ವಾಯುಸೇನೆಗೆ ಇದೆ. ಅಂತೆಯೇ ಯಾವುದೇ ಕಾರಣಕ್ಕೂ ಎದುರಾಳಿಯನ್ನು ಕಡಿಮೆ ಅಂದಾಜು ಮಾಡುವುದಿಲ್ಲ.  ಎದುರಾಳಿಯ ಯಾವುದೇ ಆಕ್ರಮಣಕಾರಿ ನಿಲುವಿಗೆ ತಕ್ಕ ಉತ್ತರ ನೀಡಲು ತಾವು ಸಿದ್ಧ ಎಂದೂ ಭದುರಿಯಾ ಹೇಳಿದ್ದಾರೆ.

ಈಗಾಗಲೇ ನಾವು ರಾಫೇಲ್ ಯುದ್ಧ ವಿಮಾನಗಳು, ಚಿನೂಕ್ಸ್, ಅಪಾಚೆ ಹೆಲಿಕಾಪ್ಟರ್ ಗಳನ್ನು ಗಡಿಯಲ್ಲಿ ಕಾರ್ಯನಿಯೋಜಿಸಿದ್ದೇವೆ. ಮುಂದಿನ 3 ವರ್ಷಗಳಲ್ಲಿ ನಾವು ರಾಫೆಲ್ ಮತ್ತು ಎಲ್ಸಿಎ ಮಾರ್ಕ್ 1 ಸ್ಕ್ವಾಡ್ರನ್ಗಳು ಪೂರ್ಣ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಲಿದ್ದೇವೆ. ಜೊತೆಗೆ ಹೆಚ್ಚುವರಿ  ಮಿಗ್ -29 ಅನ್ನು ನೌಕಾಪಡೆಯಲ್ಲಿ ನಿಯೋಜಿಸಲಾಗುತ್ತಿದೆ. ಒಂದು ದಶಕದಲ್ಲಿ ಎಎಂಸಿಎ ನಮ್ಮ ಮುಖ್ಯ ಆಧಾರವಾಗಲಿದೆ. ಆರನೇ ತಲೆಮಾರಿನ ತಂತ್ರಜ್ಞಾನಗಳಾದ ಡೈರೆಕ್ಟೆಡ್ ಎನರ್ಜಿ, ಸ್ವಾರ್ಮ್ ಡ್ರೋನ್, ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳ ತಯಾರಿಕಾ ಪ್ರಕ್ರಿಯೆ ಆರಂಭವಾಗಿದೆ. ಸ್ಥಳೀಯ ಸುಧಾರಿತ ಮಧ್ಯಮ  ಯುದ್ಧ ವಿಮಾನಗಳನ್ನು 2027 ಸೇನೆಗೆ ಸೇರ್ಪಡೆ ಮಾಡುವ ಗುರಿ ಹೊಂದಿದ್ದೇವೆ ಎಂದು ಭದುರಿಯಾ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com