ಹತ್ರಾಸ್ ಸಂತ್ರಸ್ತೆಯ ರಕ್ತಸಂಬಂಧಿ ಮತ್ತು ಮುಖ್ಯ ಆರೋಪಿಗಳ ನಡುವೆ 100 ಬಾರಿ ಫೋನ್ ಕರೆ: ಕರೆ ವಿವರ ವರದಿ

ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೀಡಾದ ಸಹೋದರನ ಕಾಲ್ ಡಿಟೇಲ್ ರಿಪೋರ್ಟ್(ಸಿಡಿಆರ್)ನಲ್ಲಿ ಸಂತ್ರಸ್ತೆಯ ರಕ್ತ ಸಂಬಂಧಿ ಮತ್ತು ಮುಖ್ಯ ಆರೋಪಿ ಸಂದೀಪ್ ಠಾಕೂರ್ ನಡುವೆ 100 ಬಾರಿ ಕರೆ ಮಾಡಿರುವುದು ಎಂದು ಬಹಿರಂಗಗೊಂಡಿದೆ. 
ಪೊಲೀಸರು
ಪೊಲೀಸರು

ಲಖನೌ: ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೀಡಾದ ಸಹೋದರನ ಕಾಲ್ ಡಿಟೇಲ್ ರಿಪೋರ್ಟ್(ಸಿಡಿಆರ್)ನಲ್ಲಿ ಸಂತ್ರಸ್ತೆಯ ರಕ್ತ ಸಂಬಂಧಿ ಮತ್ತು ಮುಖ್ಯ ಆರೋಪಿ ಸಂದೀಪ್ ಠಾಕೂರ್ ನಡುವೆ 100 ಬಾರಿ ಕರೆ ಮಾಡಿರುವುದು ಎಂದು ಬಹಿರಂಗಗೊಂಡಿದೆ. 

ಸಿಡಿಆರ್ ಪ್ರಕಾರ, ಬಾಲಕಿಯ ಸಹೋದರ ಮತ್ತು ಮುಖ್ಯ ಆರೋಪಿ ಸಂದೀಪ್ ಠಾಕೂರ್ ಅವರ ಹೆಸರಿನಲ್ಲಿ ನೋಂದಾಯಿಸಲಾದ ದೂರವಾಣಿ ಸಂಖ್ಯೆಯಿಂದ ಅಕ್ಟೋಬರ್ 2019 ಮತ್ತು ಮಾರ್ಚ್ 2020ರ ನಡುವೆ ಸುಮಾರು 100 ಬಾರಿ ಕರೆ ಮಾಡಲಾಗಿದ್ದು ಅದರ ನಕಲು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗೆ ಸಿಕ್ಕಿದೆ. 

ಸೆಪ್ಟೆಂಬರ್ 29ರಂದು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ 19 ವರ್ಷದ ದಲಿತ ಬಾಲಕಿ ಸಾವನ್ನಪ್ಪಿದ್ದರು. ಸೆಪ್ಟೆಂಬರ್ 14ರಂದು ಹತ್ರಾಸ್ ಜಿಲ್ಲೆಯ ಬೂಲ್ಗರಿ ಗ್ರಾಮದಲ್ಲಿ ನಡೆದ ಕ್ರೂರ ದಾಳಿಯಲ್ಲಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಜೆಎಲ್ಎನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಹತ್ರಾಸ್ ಸಾಮೂಹಿಕ ಅತ್ಯಾಚಾರದಲ್ಲಿ ಸಿಬಿಐ ತನಿಖೆ ನಡೆಸಬೇಕು. ಯೋಗಿ ಸರ್ಕಾರವನ್ನು ಕೆಣಕಲು 'ಕೆಟ್ಟ ಅಭಿಯಾನ' ನಡೆಯುತ್ತಿದೆ ಎಂದು ಎಸ್ಸಿ ತಿಳಿಸಿದ್ದಾರೆ. 

ಸೆಪ್ಟೆಂಬರ್ 22ರಂದು ಸಂತ್ರಸ್ತೆ ತನ್ನ ಗ್ರಾಮದ ನಾಲ್ಕು ಯುವಕರು ಸಾಮೂಹಿಕ ದರೋಡೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾಳೆ. ನಂತರ, ಆಗ್ರಾದ ಎಫ್‌ಎಸ್‌ಎಲ್ ನೀಡಿದ ವರದಿಯನ್ನು ಉಲ್ಲೇಖಿಸಿ ಪೊಲೀಸರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com