ಯುಪಿ, ಬಿಹಾರ ರೀತಿ ಪಶ್ಚಿಮ ಬಂಗಾಳ ಮಾಫಿಯಾ ರಾಜ್ ಆಗುತ್ತಿದೆ: ಬಿಜೆಪಿ ನಾಯಕ ದಿಲೀಪ್ ಘೋಷ್

ಉತ್ತರ ಪ್ರದೇಶ, ಮತ್ತು ಬಿಹಾರದಂತೆ ಪಶ್ಚಿಮ ಬಂಗಾಳ ಕೂಡ ಹಂತ ಹಂತವಾಗಿ ಮಾಫಿಯಾ ರಾಜ್ಯವಾಗುತ್ತಿದೆ ಎಂದು  ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ದಿಲೀಪ್ ಘೋಷ್
ದಿಲೀಪ್ ಘೋಷ್

ಕರಗಪುರ: ಉತ್ತರ ಪ್ರದೇಶ, ಮತ್ತು ಬಿಹಾರದಂತೆ ಪಶ್ಚಿಮ ಬಂಗಾಳ ಕೂಡ ಹಂತ ಹಂತವಾಗಿ ಮಾಫಿಯಾ ರಾಜ್ಯವಾಗುತ್ತಿದೆ ಎಂದು  ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ಬಿಜೆಪಿ ಅಧಿಕಾರದಲ್ಲಿರುವ ಆ ಎರಡು ರಾಜ್ಯಗಳಲ್ಲಿ ಮಾಫಿಯಾ-ರಾಜ್ ಅಸ್ತಿತ್ವದಲ್ಲಿದೆ ಎಂದು ಒಪ್ಪಿಕೊಳ್ಳುತ್ತಿರುವುದು ಒಳ್ಳೆಯದೇ ಎಂದು ತೃಣಮೂಲ ಕಾಂಗ್ರೆಸ್ ತಿಳಿಸಿದೆ.

ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಠಾಣೆ ಎದುರೇ  ಬಿಜೆಪಿ ಕೌನ್ಸಿಲರ್ ಹತ್ಯೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು  ದಿಲೀಪ್ ಘೋಷ್ ಪ್ರತಿಕ್ರಿಯಿಸಿದ್ದಾರೆ. ದಿನದಿಂದ ದಿನಕ್ಕೆ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗುತ್ತಿದೆ ಎಂದು ಹೇಳಿದ್ದಾರೆ.

ತಿತಾಗರ್ ಮುನಿಸಿಪಾಲಿಟಿ ಕೌನ್ಸಿಲರ್ ಶುಕ್ಲಾ ಅವರನ್ನು ಭಾನುವಾರ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com