ದಸರಾ
ದಸರಾ

ಕಂಟೈನ್‌ಮೆಂಟ್ ವಲಯದ ಹೊರಗೆ ಮಾತ್ರ ಹಬ್ಬ, ಜಾತ್ರೆಗಳಿಗೆ ಅವಕಾಶ: ಸರ್ಕಾರದ ನೂತನ ಮಾರ್ಗಸೂಚಿ!

ಮಹಾಮಾರಿ ಕೊರೋನಾ ಕಂಟೈನ್‌ಮೆಂಟ್ ವಲಯ ಬಿಟ್ಟು ಹೊರಗಡೆ ಹಬ್ಬಗಳ ಆಚರಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದಕ್ಕಾಗಿ ಕೆಲ ನಿಯಮಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ನವದೆಹಲಿ: ಮಹಾಮಾರಿ ಕೊರೋನಾ ಕಂಟೈನ್‌ಮೆಂಟ್ ವಲಯ ಬಿಟ್ಟು ಹೊರಗಡೆ ಹಬ್ಬಗಳ ಆಚರಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದಕ್ಕಾಗಿ ಕೆಲ ನಿಯಮಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ. 

ಭಾರತದಲ್ಲಿ ನವೆಂಬರ್-ಡಿಸೆಂಬರ್ ನಲ್ಲಿ ಹಬ್ಬಗಳು, ಜಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ನಡೆಯಲಿದ್ದು ಈ ವೇಳೆ ಅಪಾರ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ. ಹೀಗಾಗಿ ಇವುಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. 

ಮಾರ್ಗಸೂಚಿಗಳು
* ಕಾರ್ಯಕ್ರಮಗಳ ವೇಳೆ ಪರಸ್ಪರ ಆರು ಅಡಿ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ನೆಲದಲ್ಲಿ ಸೂಕ್ತ ಗುರುತುಗಳನ್ನು ಹಾಕಬೇಕು. ದೇವಸ್ತಾನಗಳಲ್ಲಿ ದೇವರ ವಿಗ್ರಹಗಳನ್ನು ಅಥವಾ ಪವಿತ್ರ ಗ್ರಂಥಗಳನ್ನು ಮಟ್ಟುವಂತಿಲ್ಲ. 

* ಕಂಟೈನ್‌ಮೆಂಟ್ ವಲಯದಲ್ಲಿ ಇರುವ ಜನರು ಮನೆಯಲ್ಲಿಯೇ ಹಬ್ಬ ಆಚರಿಸುವುದು. 

* ಜಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡುಗಾರ ತಂಡವನ್ನು ಕರೆಯುವುದಕ್ಕೆ ಅವಕಾಶವಿಲ್ಲ. 

* ಹಬ್ಬ ಆಚರಿಸುವ ಸ್ಥಳಕ್ಕೆ ಸೋಂಕಿನ ಲಕ್ಷಣವಿಲ್ಲದ ಸಿಬ್ಬಂದಿ ಮತ್ತು ಜನರಿಗಷ್ಟೇ ಅವಕಾಶ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯ.

* ಮಾಸ್ಕ್ ಧರಿಸಿದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು. ನಾಲ್ಕೈದು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಲ್ಲಿ ಜನದಟ್ಟಣೆ ಹೆಚ್ಚದಂತೆ ಕ್ರಮವಹಿಸಬೇಕು. 

Related Stories

No stories found.

Advertisement

X
Kannada Prabha
www.kannadaprabha.com