ಬಡ್ಡಿ ದರ ನಿರ್ಧರಿಸುವ ಎಂಪಿಸಿ ಸಮಿತಿಗೆ ಅಶೀಮಾ ಗೋಯಲ್, ಶಶಾಂಕ್ ಭಿಡೆ, ಜಯಂತ್ ವರ್ಮಾ ನೇಮಕ 

ಬಡ್ಡಿ ದರ ನಿರ್ಧರಿಸುವ ಮಹತ್ವದ ಸಮಿತಿಗೆ ಕೇಂದ್ರ ಸರ್ಕಾರ ಅಶೀಮಾ ಗೋಯಲ್, ಶಶಾಂಕ್ ಭಿಡೆ ಜಯಂತ್ ವರ್ಮಾ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ. 
ಅಶೀಮಾ ಗೋಯಲ್
ಅಶೀಮಾ ಗೋಯಲ್

ನವದೆಹಲಿ: ಬಡ್ಡಿ ದರ ನಿರ್ಧರಿಸುವ ಮಹತ್ವದ ಸಮಿತಿಗೆ ಕೇಂದ್ರ ಸರ್ಕಾರ ಅಶೀಮಾ ಗೋಯಲ್, ಶಶಾಂಕ್ ಭಿಡೆ ಜಯಂತ್ ವರ್ಮಾ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ. 

ಅ.06 ರಂದು ಆದೇಶ ನೀಡಲಾಗಿದ್ದು ಅ.2024 ರ ಅವಧಿವರೆಗೆ  ನೇಮಕ ಮಾಡಲಾಗಿದೆ. ಈ ಹಿಂದೆ ಸಮಿತಿಯಲ್ಲಿದ್ದ ಚೇತನ್ ಘಟೆ, ಪಮಿ ದುವಾ, ರವೀಂದ್ರ ಧೋಲಾಕಿಯಾ ಅವರ ಅವಧಿ ಸೆ.22, 2020 ಕ್ಕೆ ಕೊನೆಗೊಂಡಿತ್ತು.

ಹೊಸದಾಗಿ ನೇಮಕಗೊಂಡಿರುವ ಸದಸ್ಯರು ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.

ಅಶಿಮಾ ಗೋಯಲ್: ಪ್ರಧಾನ ಮಂತ್ರಿಗಳ ಆರ್ಥಿಕ ಸಹಲಾ ತಂಡದಲ್ಲಿ ಸದಸ್ಯರಾಗಿದ್ದ ಅಶೀಮಾ ಗೋಯಲ್, ಮುಂಬೈ ನ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ರಿಸರ್ಚ್ ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.

ಶಶಾಂಕ್ ಭಿಡೆ: ದೆಹಲಿಯ ಅನ್ವಯಿಕ ಆರ್ಥಿಕ ಸಂಶೋಧನೆ (Applied Economic Research ) ನಲ್ಲಿ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಯಂತ್ ಆರ್ ವರ್ಮ: ಐಐಎಂ ಅಹ್ಮದಾಬಾದ್ ನಲ್ಲಿ ಫೈನಾನ್ಸ್ ಹಾಗೂ ಅಕೌಂಟಿಂಗ್ ವಿಭಾಗದ ಪ್ರೊಫೆಸರ್ ಆಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com