ಕೋವಿಡ್-19 ತಡೆಗೆ ಗುಡುಚಿ, ಅಶ್ವಗಂಧ ಆಯುಷ್-64 ಬಳಸಲು ಕೇಂದ್ರ ಸರ್ಕಾರ ಶಿಫಾರಸು

ಕೋವಿಡ್-19 ಲಸಿಕೆಯ ಪ್ರಯೋಗದ ಹಂತಗಳು ಇನ್ನೂ ಮುಂದುವರೆದಿದ್ದು, ಲಘು ಮತ್ತು ಲಕ್ಷಣ ರಹಿತ ಕೋವಿಡ್-19 ರೋಗಿಗಳಿಗೆ ಸಾಮಾನ್ಯ ಆಯುರ್ವೇದಿಕ್ ಮೂಲಿಕೆಗಳಾಗಿರುವ ಗುಡುಚಿ, ಅಶ್ವಗಂಧ ಆಯುಷ್-64ನ್ನು ಬಳಸಲು ಕೇಂದ್ರ ಸರ್ಕಾರ ಮಂಗಳವಾರ ಶಿಫಾರಸು ಮಾಡಿದೆ.
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು

ನವದೆಹಲಿ: ಕೋವಿಡ್-19 ಲಸಿಕೆಯ ಪ್ರಯೋಗದ ಹಂತಗಳು ಇನ್ನೂ ಮುಂದುವರೆದಿದ್ದು, ಲಘು ಮತ್ತು ಲಕ್ಷಣ ರಹಿತ ಕೋವಿಡ್-19 ರೋಗಿಗಳಿಗೆ ಸಾಮಾನ್ಯ ಆಯುರ್ವೇದಿಕ್ ಮೂಲಿಕೆಗಳಾಗಿರುವ ಗುಡುಚಿ, ಅಶ್ವಗಂಧ ಆಯುಷ್-64ನ್ನು ಬಳಸಲು ಕೇಂದ್ರ ಸರ್ಕಾರ ಮಂಗಳವಾರ ಶಿಫಾರಸು ಮಾಡಿದೆ.

ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಮತ್ತು ಆಯುಷ್ ಸಚಿವ ಶ್ರೀಪಾದ್ ನಾಯಕ್ ,ಬಿಡುಗಡೆ ಮಾಡಿರುವ ಆಯುರ್ವೇದ ಮತ್ತು ಯೋಗ ಆಧಾರಿತ ಕೋವಿಡ್ -19 ರ ರಾಷ್ಟ್ರೀಯ ಕ್ಲಿನಿಕಲ್  ಕ್ಲಿನಿಕಲ್ ಮ್ಯಾನೇಜ್ ಮೆಂಟ್ ಪ್ರೋಟೊಕಾಲ್ ನಲ್ಲಿ ಹೆಚ್ಚಿನ ಅಪಾಯದಲ್ಲಿರುವ ಜನರು ಮತ್ತು ಸೋಂಕಿತ ಜನರ ಪ್ರಾಥಮಿಕ ಸಂಪರ್ಕಿತರಲ್ಲಿ ರೋಗವನ್ನು ತಡೆಗಟ್ಟಲು ನಿರ್ದಿಷ್ಟ ಕ್ರಮಗಳನ್ನು ಸಹ ಸೂಚಿಸಲಾಗಿದೆ. 

ಅಲ್ಲದೆ, ಕೋವಿಡ್ ನಂತರದ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಹೊರತುಪಡಿಸಿ ಲಕ್ಷಣರಹಿತ ಮತ್ತು ಸ್ವಲ್ಪ ರೋಗಲಕ್ಷಣದ ಜನರಿಗೆ ಕ್ರಮಗಳನ್ನು ಸಹ ಜಾರಿಗೊಳಿಸಿದೆ. ಆದಾಗ್ಯೂ, ಮಾರ್ಗಸೂಚಿಗಳು ಮಧ್ಯಮ ಅಥವಾ ತೀವ್ರವಾದ ಕಾಯಿಲೆಗೆ ಯಾವುದನ್ನೂ ಶಿಫಾರಸು ಮಾಡಿಲ್ಲ.

ಕೋವಿಡ್-19 ತಡೆಗಟ್ಟುವ ಕ್ರಮಗಳ ಕುರಿತು ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ,  ಆಯುರ್ವೇದ ಮತ್ತು ಯೋಗವು ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. 

ಪ್ರಸ್ತುತ ಸಂದರ್ಭದಲ್ಲಿ ಉತ್ತಮ ರೋಗ ನಿರೋಧಕ ಶಕ್ತಿಯಿಂದ ರೋಗ ಬಾರದಂತೆ ತಡೆಗಟ್ಟಬಹುದು ಎಂಬುದು ಪ್ರಸ್ತುತ ಸಂದರ್ಭದಲ್ಲಿನ ಕೋವಿಡ್-19 ಕಾಯಿಲೆಯಿಂದ ತಿಳಿಯಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com