ಇಡೀ ದೇಶಕ್ಕೆ ಹೊಡೆತ ಬೀಳುತ್ತಿರುವಾಗ ಪೊಲೀಸರು ನನ್ನನ್ನು ತಳ್ಳಿದ್ದು ದೊಡ್ಡ ವಿಷಯವಲ್ಲ: ರಾಹುಲ್ ಗಾಂಧಿ

ಇಡೀ ದೇಶಕ್ಕೆ ಹೊಡೆತ ಬೀಳುತ್ತಿರುವಾಗ, ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೋಗುವಾಗ ಪೊಲೀಸರು, ನನ್ನನ್ನು ತಳ್ಳಿದ್ದು ದೊಡ್ಡ ವಿಷಯವೇನಲ್ಲಾ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಇಡೀ ದೇಶಕ್ಕೆ ಹೊಡೆತ ಬೀಳುತ್ತಿರುವಾಗ, ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೋಗುವಾಗ ಪೊಲೀಸರು, ನನ್ನನ್ನು ತಳ್ಳಿದ್ದು ದೊಡ್ಡ ವಿಷಯವೇನಲ್ಲಾ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

ಸಾರ್ವಜನಿಕರು ಮತ್ತು ರೈತರ ರಕ್ಷಣೆ ನಮ್ಮ ಕೆಲಸವಾಗಿದೆ. ಇಂತಹ ಸರ್ಕಾರದ ವಿರುದ್ಧ ತಿರುಗಿ ಬಿದ್ದರೆ ನೀವು ಕೂಡಾ ತಳ್ಳಲ್ಪಡುತ್ತೀರಿ. ಲಾಟಿಗಳಿಂದ ಹಲ್ಲೆ ನಡೆಸಲಾಗುತ್ತದೆ. ನಾವು ಅದಕ್ಕೆ ಸಿದ್ಧ ಎಂದಿದ್ದಾರೆ.

ಯಾರೂ ಊಹಿಸಲಾಗದ ರೀತಿಯಲ್ಲಿ ನಿಜವಾದ ರೀತಿಯಲ್ಲಿ ಹತ್ರಾಸ್ ಸಂತ್ರಸ್ತೆಯ ಕುಟುಂಬ ತಳಲ್ಪಟ್ಟಿದೆ. ಅದೇ ಕಾರಣದಿಂದ ಅವರನ್ನು ಭೇಟಿಯಾಗಲು ಬಯಸಿದೆ. ಅವರು ಏಕಾಂಗಿಯಲ್ಲ ಎಂಬುದನ್ನು ಆ ಕುಟುಂಬಕ್ಕೆ ಹೇಳಬಯಸುತ್ತೇನೆ. ಲಕ್ಷಾಂತರ ಮಹಿಳೆಯರ ದಿನನಿತ್ಯ ಅನುಚಿತ ವರ್ತನೆಯನ್ನು ಎದುರಿಸುತ್ತಿರುವುದಾಗಿ ಅವರಿಗೆ ಹೇಳಿರುವುದಾಗಿ ರಾಹುಲ್ ಗಾಂಧಿ ಹೇಳಿದರು.

ಹತ್ರಾಸ್ ಪ್ರಕರಣ ಹಾಗೂ ಉತ್ತರ ಪ್ರದೇಶ ಸರ್ಕಾರದ ನಡವಳಿಕೆ ಬಗ್ಗೆ ಮೌನ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.

ಹತ್ರಾಸ್ ಸಂತ್ರಸ್ಥೆಯ ಕುಟುಂಬವನ್ನು ಭೇಟಿಯಾಗಲು ಹೋಗುತ್ತಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾರೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿ ಬಂಧಿಸಿದ್ದರು. ಆದಾಗ್ಯೂ, ವಾರದ ಕೊನೆಯಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರು ಸಂತ್ರಸ್ತೆಯ ಕುಟುಂಬಕ್ಕೆ ಭೇಟಿ ಮಾಡಿ ಸಾಂತ್ವನ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com