ಜಾರ್ಖಂಡ್: ಆನ್ ಲೈನ್ ಸೌಲಭ್ಯ ವಂಚಿತ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಶಿಕ್ಷಕರ ಪಾಠ! 

ಜಾರ್ಖಂಡ್ ನಲ್ಲಿ 42 ಲಕ್ಷ ಶಾಲಾ ವಿದ್ಯಾರ್ಥಿಗಳ ಪೈಕಿ ಶೇ.33 ರಷ್ಟು ವಿದ್ಯಾರ್ಥಿಗಳು ಮಾತ್ರ ವಾಟ್ಸ್ ಆಪ್ ಮೂಲಕ ಆನ್ ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. 
ಜಾರ್ಖಂಡ್: ಆನ್ ಲೈನ್ ಸೌಲಭ್ಯ ವಂಚಿತ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪಾಠ ಮಾಡಲಿರುವ ಶಿಕ್ಷಕರು!
ಜಾರ್ಖಂಡ್: ಆನ್ ಲೈನ್ ಸೌಲಭ್ಯ ವಂಚಿತ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪಾಠ ಮಾಡಲಿರುವ ಶಿಕ್ಷಕರು!

ರಾಂಚಿ: ಜಾರ್ಖಂಡ್ ನಲ್ಲಿ 42 ಲಕ್ಷ ಶಾಲಾ ವಿದ್ಯಾರ್ಥಿಗಳ ಪೈಕಿ ಶೇ.33 ರಷ್ಟು ವಿದ್ಯಾರ್ಥಿಗಳು ಮಾತ್ರ ವಾಟ್ಸ್ ಆಪ್ ಮೂಲಕ ಆನ್ ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. 

ಆದರೆ ಉಳಿದ ವಿದ್ಯಾರ್ಥಿಗಳು ಸೌಲಭ್ಯ ವಂಚಿತ ವಿದ್ಯಾರ್ಥಿಗಳು ತರಗತಿಗಳಲ್ಲಿ ಹಿಂದೆ ಬೀಳದಂತೆ ಮಾಡಲು ಪಾಠ ಮಾಡುವುದಕ್ಕೆ ಜಾರ್ಖಂಡ್ ಸರ್ಕಾರ ವಿನೂತನ ಕ್ರಮ ಅಳವಡಿಸಿಕೊಳ್ಳುವುದಕ್ಕೆ ಮುಂದಾಗಿದೆ.

ಸರ್ಕಾರಿ ಶಾಲಾ ಶಿಕ್ಷಕರೇ ಅಂತಹ ಮಕ್ಕಳ ಬಗ್ಗೆ ವಿಶೇಷ ಗಮನ ನೀಡಿ, ಸೌಲಭ್ಯ ವಂಚಿತ ವಿದ್ಯಾರ್ಥಿಗಳನ್ನು ವಾರಕ್ಕೆ ಒಮ್ಮೆ ಭೇಟಿ ಮಾಡಿ ಡಿಜಿಟಲ್ ಕಂಟೆಂಟ್ ನ್ನು ತಲುಪಿಸಿ ಪಾಠ ಮಾಡಲಿದ್ದಾರೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಇದಕ್ಕಾಗಿ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ನ್ನು ತಯಾರಿಸಿದ್ದು, ರಾಜ್ಯ ಸರ್ಕಾರದ ಅನುಮೋದನೆ ಸಿಗಬೇಕಿದೆ. ದುಮ್ಕಾ, ಜಾಮ್ತಾರಾ ಜಿಲ್ಲೆಗಳ ಗ್ರಾಮಗಳಲ್ಲಿ ಈ ಸೌಲಭ್ಯವನ್ನು ಈಗಾಗಲೇ ಅಳವಡಿಕೆ ಮಾಡಿಕೊಳ್ಳಲಾಗಿದೆ.

ಮೊಹಲ್ಲಾ ಕ್ಲಾಸ್ ಗಳ ಕ್ರಮ ಅಳವಡಿಸಿಕೊಳ್ಳುವುದಕ್ಕೆ ಮಾತುಕತೆ ನಡೆಯುತ್ತಿದೆ, ವಿದ್ಯಾರ್ಥಿಗಳ ಸಣ್ಣ ಗುಂಪನ್ನು ಸೇರಿಸಿ ವಾರಕ್ಕೆ ಒಮ್ಮೆ ತರಗತಿ ನಡೆಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗಾಗಲೇ ದುಮ್ಕಾದಲ್ಲಿ 500 ಕ್ಕೂ ಹೆಚ್ಚು ಶಾಲೆಗಳು ಈ ಕ್ರಮವನ್ನು ಅಳವಡಿಸಿಕೊಂಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡೇ ತರಗತಿಗಳನ್ನು ನಡೆಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com