ಸಿಆರ್ ಪಿಎಫ್ ಮೇಲೆ ಸೋಮವಾರ ನಡೆದ ದಾಳಿ ಹಿಂದೆ ಎಲ್ಇಟಿ ಕೈವಾಡ

ಅ.05 ರಂದು ಸಿಆರ್ ಪಿಎಫ್ ರಸ್ತೆ ಉದ್ಘಾಟನಾ ಕಾರ್ಯಕ್ರಮದ ಮೇಲೆ ನಡೆದ ಮಾರಣಾಂತಿಕ ದಾಳಿಯ ಹಿಂದೆ ಪಾಕ್ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಅ.05 ರಂದು ಸಿಆರ್ ಪಿಎಫ್ ರಸ್ತೆ ಉದ್ಘಾಟನಾ ಕಾರ್ಯಕ್ರಮದ ಮೇಲೆ ನಡೆದ ಮಾರಣಾಂತಿಕ ದಾಳಿಯ ಹಿಂದೆ ಪಾಕ್ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.

ನೌಗಾಮ್ ಪ್ರದೇಶದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಳಿ ಉಗ್ರರು ಸಿಆರ್ ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ್ದರು ಈ ಘಟನೆಯಲ್ಲಿ ಇಬ್ಬರು ಸಿಬ್ಬಂದಿಗಳು ಹುತಾತ್ಮರಾಗಿದ್ದರು ಮೂವರು ತೀವ್ರವಾಗಿ ಗಾಯಗೊಂಡಿದ್ದರು

ನಾವು ಈ ದಾಳಿಯ ಹಿಂದೆ ಇರುವ ಉಗ್ರರನ್ನು ಗುರುತಿಸಿದ್ದೇವೆ. ಅವರು ಲಷ್ಕರ್ ಸಂಘಟನೆಗೆ ಸೇರಿದವರಾಗಿದ್ದು ಸೈಫುಲ್ಲಾ ಎಂಬ ಪಾಕಿ ಭಯೋತ್ಪಾದಕನ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅವರನ್ನು ಶೀಘ್ರವೇ ಹೆಡೆಮುರಿಕಟ್ಟಲಾಗುವುದು ಎಂದು ಕಾಶ್ಮೀರ ಝೋನ್ ನ ಐಜಿ ವಿಜಯ್ ಕುಮಾರ್ ತಿಳಿಸಿದ್ದಾರೆ. 

ಇಬ್ಬರು ಉಗ್ರರು ದ್ವಿಚಕ್ರವಾಹನದಲ್ಲಿ ಬಂದು ಎ.ಕೆ ರೈಫಲ್ ನಿಂದ ಗುಂಡು ಹಾರಿಸಿದ್ದರು. ಇದೇ ಮಾದರಿಯಲ್ಲಿ ಲಷ್ಕರ್ ಉಗ್ರಸಂಘಟನೆ ಬದ್ಗೌಮ್ ನ ಚಡೂರಾ ಪ್ರದೇಶದಲ್ಲಿ ದಾಳಿ ನಡೆಸಿ ಸಿಆರ್ ಪಿಎಫ್ ನ ಸಬ್ ಇನ್ಸ್ಪೆಕ್ಟರ್ ನ್ನು ಹತ್ಯೆ ಮಾಡಿತ್ತು ಎಂದೂ ಐಜಿಪಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com