ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಮನೆಗೆ 24 ಗಂಟೆ ಭದ್ರತೆ ಒದಗಿಸಿದ ಯೋಗಿ ಆದಿತ್ಯನಾಥ್ ಸರ್ಕಾರ

ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಮನೆಗೆ ದಿನದ 24 ಗಂಟೆ ಭದ್ರತೆ ಒದಗಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
ಹತ್ರಾಸ್ ಗ್ರಾಮದಲ್ಲಿ ಭದ್ರತೆ
ಹತ್ರಾಸ್ ಗ್ರಾಮದಲ್ಲಿ ಭದ್ರತೆ

ಹತ್ರಾಸ್: ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಮನೆಗೆ ದಿನದ 24 ಗಂಟೆ ಭದ್ರತೆ ಒದಗಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.

ಸಂತ್ರಸ್ತೆ ಕುಟುಂಬಸ್ಥರು ಭದ್ರತೆ ನೀಡುವಂತೆ ಬೇಡಿಕೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಭದ್ರತೆಗೆ ಸಿಬ್ಬಂದಿ ನಿಯೋಜಿಸಲಾಗಿದೆ.

ಇಬ್ಬರು ಮಹಿಳಾ ಸಬ್ ಇನ್ಸ್ ಪೆಕ್ಟರ್,ಆರು ಮಹಿಳಾ ಪೇದೆಗಳು ಬೀಡು ಬಿಟ್ಟಿದ್ದಾರೆ, ಸಂತ್ರಸ್ತೆಯ ಸಹೋದರನ ಮನೆಯ ಭದ್ರತೆಗಾಗಿ ಇಬ್ಬರು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಶಸ್ತ್ರ ಸಜ್ಜಿತ ಇಬ್ಬರು ಭದ್ರತಾ ಸಿಬ್ಬಂದಿ ಕೂಡ ಬೀಡು ಬಿಟ್ಟಿದ್ದಾರೆ. 

ಯಾವುದೇ ಅಹಿತಕರ ಘಟನೆ ನಡೆಯದಂತೆ 15 ಪೊಲೀಸ್ ಸಿಬ್ಬಂದಿ, ಮೂವರು ಸ್ಟೇಷನ್ ಹೌಸ್ ಆಫೀಸರ್ಸ್ (ಎಸ್‌ಎಚ್‌ಒ) ಮತ್ತು ಒಬ್ಬ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಶ್ರೇಣಿಯ ಅಧಿಕಾರಿಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಆರೋಪಿಗಳ ಸಂಬಂಧಿಕರಿಂದ ತಮಗೆ ಅಪಾಯವಿದ್ದು, ನಮ್ಮ ಸುರಕ್ಷತೆಗಾಗಿ ಭದ್ರತೆ ನೀಡಬೇಕು ಎಂದು ಸಂತ್ರಸ್ತೆಯ ಸಹೋದರ ತಿಳಿಸಿದ್ದರು, ಮುಂದಿನ ದಿನಗಳಲ್ಲಿ ನಾವು ಜೀವನ ಮಾಡುವುದು ಸಹ ಕಷ್ಟವಿದೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದರು. ತಮ್ಮ ಕುಟುಂಬಕ್ಕೆ ಬೆದರಿಕೆ ಇರುವುದರಿಂದ ಉತ್ತರ ಪ್ರದೇಶ ಸರ್ಕಾರದಿಂದ ಭದ್ರತೆ ಕೋರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com