ಸೇಡಿನ ಕೊಲೆಗಳಲ್ಲಿ ಬೆಂಗಳೂರು ಭಾರತದಲ್ಲೇ ನಂ.1, ದೆಹಲಿಗೆ 2ನೇ ಸ್ಥಾನ

ದೇಶದಲ್ಲೇ ಅತೀ ಹೆಚ್ಚು ಸೇಡಿನ ಕೊಲೆಗಳು ನಡೆದಿರುವ ನಗರಗಳ ಪೈಕಿ ಕರ್ನಾಟಕ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ರಾಷ್ಟ್ರ ರಾಜಧಾವಿ ದೆಹಲಿ ಎರಡನೇ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.

Published: 07th October 2020 01:33 PM  |   Last Updated: 07th October 2020 01:33 PM   |  A+A-


NCRB

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ಬೆಂಗಳೂರು: ದೇಶದಲ್ಲೇ ಅತೀ ಹೆಚ್ಚು ಸೇಡಿನ ಕೊಲೆಗಳು ನಡೆದಿರುವ ನಗರಗಳ ಪೈಕಿ ಕರ್ನಾಟಕ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ರಾಷ್ಟ್ರ ರಾಜಧಾವಿ ದೆಹಲಿ ಎರಡನೇ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ಬಿಡುಗಡೆ ಮಾಡಿರುವ 2019ರ ಅಪರಾಧ ಪ್ರಕರಣಗಳ ದತ್ತಾಂಶಗಳ ಅನ್ವಯ ದೇಶದಲ್ಲಿ ನಡೆದ ಒಟ್ಟಾರೆ ಕೊಲೆ ಪ್ರಕರಣಗಳ ಪಟ್ಟಿಯಲ್ಲಿ ದೆಹಲಿ ಅಗ್ರಾ ಸ್ಥಾನದಲ್ಲಿದೆ. ದೆಹಲಿಯಲ್ಲಿ ಒಟ್ಟು 505 ಕೊಲೆ  ಪ್ರಕರಣಗಳು ನಡೆದಿದ್ದು, 2019ರಲ್ಲಿ ಬೆಂಗಳೂರಿನಲ್ಲಿ ಒಟ್ಟು 210 ಕೊಲೆ ನಡೆದಿದ್ದು ಸಿಲಿಕಾನ್ ಸಿಟಿ 2ನೇ ಸ್ಥಾನದಲ್ಲಿದೆ. 58 ದ್ವೇಷದ ಕೊಲೆ ಪ್ರಕರಣಗಳು ದಾಖಲಾಗಿರುವ ನಾಗಪುರ ಮೂರನೇ ಸ್ಥಾನದಲ್ಲಿದ್ದು, ಚೆನ್ನೈ (45 ಪ್ರಕರಣ), ಸೂರತ್ (43 ಪ್ರಕರಣ), ಕೋಲ್ಕತಾ (27 ಪ್ರಕರಣ) ಅಹ್ಮದಾಬಾದ್ (23 ಪ್ರಕರಣ)  ಮತ್ತು ಇಂದೋರ್ (16 ಪ್ರಕರಣ) ನಂತರದ ಸ್ಥಾನದಲ್ಲಿದೆ.

ಒಟ್ಟು ಕೊಲೆ ಪ್ರಕರಣಲ್ಲಿ ಶೇ.75 ಪ್ರಕರಣಗಳು ವೈಯಕ್ತಿಕ ದ್ವೇಷ, ಮಾರಾಟ ಹಾಗೂ ಪೂರ್ವ ನಿಯೋಜಿತ ಕೃತ್ಯಗಳಾಗಿವೆ. ಉದ್ಯಾನ ನಗರಿಯಲ್ಲಿ 2019ರಲ್ಲಿ 106 ಸೇಡಿನ ಕೊಲೆಗಳು ನಡೆದಿದ್ದು, ದೆಹಲಿಯಲ್ಲಿ 87 ಕೊಲೆಗಳಾಗಿವೆ. ಅದರಂತೆ ಸೇಡಿಗಾಗಿ ನಡೆದ ಕೊಲೆ ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರ  ಸ್ಥಾನದಲ್ಲಿದ್ದು, ದೆಹಲಿ 2ನೇ ಸ್ಥಾನದಲ್ಲಿದೆ.

ವೈಯಕ್ತಿಕ ದ್ವೇಷದಿಂದಾಗಿಯೇ ಹೆಚ್ಚಿನ ಕೊಲೆಗಳು ನಡೆದಿದ್ದು, ಭೂಮಿ, ಮಹಿಳೆ ಹಾಗೂ ಸಂಪತ್ತಿಗಾಗಿ ಹೆಚ್ಚು ಕೊಲೆ ಪ್ರಕರಣಗಳು ನಡೆದಿವೆ ಎಂಬುದು ಎನ್‍ಸಿಆರ್‍ ಬಿ ದತ್ತಾಂಶಗಳಿಂದ ಬಹಿರಂಗವಾಗಿದೆ. ವೈಯಕ್ತಿಕ ದ್ವೇಷದ ಕೊಲೆಗಳು ಕುಟುಂಬಗಳಲ್ಲಿ, ಸ್ನೇಹಿತರು ಹಾಗೂ ಒಂದೇ ಪ್ರದೇಶದಲ್ಲಿ ವಾಸಿಸುವ ಜನರ  ನಡುವೆ ನಡೆದಿವೆ. ಲಾಭಕ್ಕಾಗಿ ನಡೆದಿರುವ ಕೊಲೆಗಳಿಗೆ ಈ ತನಿಖೆ ಕಷ್ಟವೇನಲ್ಲ. ಅಪರಾಧ ಉದ್ದೇಶವನ್ನು ಪತ್ತೆ ಹಚ್ಚಿದ ಬಳಿಕ ಶಂಕಿತರನ್ನು ಪತ್ತೆ ಹಚ್ಚುವುದು ಹಾಗೂ ಬಂಧಿಸುವುದು ಸುಲಭವಾಗುತ್ತದೆ ಎಂದು ನಿವೃತ್ತ ಡಿಜಿಪಿ ಡಿ.ವಿ.ಗುರುಪ್ರಸಾದ್ ತಿಳಿಸಿದ್ದಾರೆ.

ವೈಯಕ್ತಿಕ ಲಾಭಕ್ಕಾಗಿ ನಡೆಯುವ ಕೊಲೆಗಳು ಹೆಚ್ಚು ಆತಂಕಕಾರಿ. ದ್ವೇಷದ ಆಧಾರಿತ ಕೊಲೆಗಳು ಹೆಚ್ಚಾಗಿ ನಡೆಯುವುದು ವೈಯಕ್ತಿಕ ಕಾರಣಗಳಿಂದ. ಲಾಭಾಕ್ಕಾಗಿ ಕೊಲೆ ಮಾಡುವ ಉದ್ದೇಶವೆಂದರೆ ಚಿನ್ನ, ಹಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಪಡೆದುಕೊಳ್ಳುವುದು. ಇತ್ತೀಚೆಗೆ ಬೆಂಗಳೂರಿನ  ಹೆಬ್ಬಗೋಡುವಿನಲ್ಲಿ 25 ವರ್ಷದ ಯುವತಿಯ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಕೊಲೆಗಾರ ಮೊಬೈಲ್ ಫೋನ್ ಹಾಗೂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದ. ಲಾಭಕ್ಕಾಗಿ ಮಾಡುವ ಕೊಲೆಯ ಪ್ರಕರಣಗಳು ಪೊಲೀಸರಿಗೆ ಸವಾಲಾಗಿ ಪರಿಣಮಿಸುತ್ತವೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp