ಪ್ರಾದೇಶಿಕ ಸಮಗ್ರತೆ ಮತ್ತು ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಲು ಭಾರತ ಬದ್ಧವಾಗಿದೆ: ಎಸ್.ಜೈಶಂಕರ್

ಚೀನಾಕ್ಕೆ ಮತ್ತೊಮ್ಮೆ ಸೂಕ್ಷ್ಮ ಸಂದೇಶ ರವಾನಿಸಿರುವ ಭಾರತ, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಸಮಗ್ರತೆ ಮತ್ತು ಶಾಂತಿಯುತ ಪರಿಹಾರಗಳ ಮೇಲೆ ನಂಬಿಕೆಯಿಟ್ಟಿದೆ ಎಂದು ಹೇಳಿದೆ.
ಸಮಾಲೋಚನೆ ಸಭೆಯಲ್ಲಿ ನಾಲ್ಕು ದೇಶಗಳ ಸಚಿವರುಗಳು
ಸಮಾಲೋಚನೆ ಸಭೆಯಲ್ಲಿ ನಾಲ್ಕು ದೇಶಗಳ ಸಚಿವರುಗಳು

ನವದೆಹಲಿ: ಚೀನಾಕ್ಕೆ ಮತ್ತೊಮ್ಮೆ ಸೂಕ್ಷ್ಮ ಸಂದೇಶ ರವಾನಿಸಿರುವ ಭಾರತ, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಸಮಗ್ರತೆ ಮತ್ತು ಶಾಂತಿಯುತ ಪರಿಹಾರಗಳ ಮೇಲೆ ನಂಬಿಕೆಯಿಟ್ಟಿದೆ ಎಂದು ಹೇಳಿದೆ.

ಟೋಕ್ಯೋದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕಗಳ ವಿದೇಶಾಂಗ ಸಚಿವರುಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ನಿಯಮ ಆಧಾರಿತ ಅಂತಾರಾಷ್ಟ್ರೀಯ ಆದೇಶಗಳನ್ನು ಎತ್ತಿಹಿಡಿಯಲು ಭಾರತ ಬದ್ಧವಾಗಿದೆ ಎಂದರು.

ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಮತ್ತು ಪೂರ್ವ ಲಡಾಕ್ ನಲ್ಲಿ ಚೀನಾದ ಆಕ್ರಮಣಕಾರಿ ಮನೋಸ್ಥಿತಿ ಮಧ್ಯೆ,ಅಮೆರಿಕ-ಭಾರತ-ಆಸ್ಟ್ರೇಲಿಯಾ-ಜಪಾನ್ ನಾಲ್ಕು ದೇಶಗಳ ಸಮಾಲೋಚನೆ ನಡೆಯುತ್ತಿದೆ. ಈ ಸಭೆಗೆ ಚೀನಾದ ವಿರೋಧವಿದ್ದು, ಗಡಿ ಪ್ರದೇಶಗಳಲ್ಲಿ ಚೀನಾದ ಅಭಿವೃದ್ಧಿಯನ್ನು ಮಟ್ಟಹಾಕಲು ನಾಲ್ಕು ದೇಶಗಳು ಒಟ್ಟು ಸೇರಿ ಈ ಸಮಾಲೋಚನೆ ಸಭೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಇಂಡೋ-ಫೆಸಿಫಿಕ್ ನಲ್ಲಿ ಕಾನೂನುಬದ್ಧ ಮತ್ತು ಪ್ರಮುಖ ಹಿತಾಸಕ್ತಿಗಳನ್ನು ಹೊಂದಿರುವ ಎಲ್ಲಾ ದೇಶಗಳ ಸುರಕ್ಷತೆ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಮುಂದುವರಿಸುವುದು ಆದ್ಯತೆಯಾಗಿ ಉಳಿದಿದೆ ಎಂದು ಜೈಶಂಕರ್ ಪ್ರತಿಪಾದಿಸಿದ್ದಾರೆ.

ಮುಕ್ತ ಮತ್ತು ಅಂತರ್ಗತ ಇಂಡೊ-ಫೆಸಿಫಿಕ್ ಮಾತುಕತೆಯನ್ನು ನಡೆಸಲು ಖಾತರಿಪಡಿಸಬೇಕಾದ ಅಗತ್ಯತೆಯನ್ನು ಕೂಡ ಜೈಶಂಕರ್ ಸಮಾಲೋಚನೆ ಸಭೆಯಲ್ಲಿ ಒತ್ತಿ ಹೇಳಿದರು.

ಚೀನಾವನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ಜೈಶಂಕರ್, "ಜಾಗತಿಕ ಸಾಂಕ್ರಾಮಿಕತೆಯ ಹೊರತಾಗಿಯೂ, ನಾವು ಇಂದು ಇಲ್ಲಿ ವೈಯಕ್ತಿಕವಾಗಿ ಭೇಟಿಯಾಗುತ್ತಿದ್ದೇವೆ ಎಂದರೆ ಇತ್ತೀಚಿನ ದಿನಗಳಲ್ಲಿ ಗಳಿಸಿರುವ ಈ ಸಮಾಲೋಚನೆಯ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಈ ಸಭೆಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮಾರಿಸ್ ಪೇನ್ ಮತ್ತು ಜಪಾನ್‌ನ ತೋಷಿಮಿಟ್ಸು ಮೊಟೆಗಿ ಭಾಗವಹಿಸಿದ್ದರು. ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಅನ್ನು ಕಾಪಾಡಿಕೊಳ್ಳುವ ಮಹತ್ವವನ್ನು ರಾಷ್ಟ್ರಗಳು ಒಟ್ಟಾಗಿ ಒಪ್ಪಿಕೊಂಡವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com