ಹತ್ರಾಸ್ ಪ್ರಕರಣ: ಜಾತಿ ಹಿಂಸಾಚಾರ ಪ್ರಚೋದಿಸುವ ಸಂಚು, ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲು!

ಹತ್ರಾಸ್ ನ ಬೂಲ್ಗರಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ನಿರ್ದಿಷ್ಟ ಜಾತಿಯ ಜನರನ್ನು ಪ್ರಚೋದಿಸಲು ಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

Published: 07th October 2020 08:22 PM  |   Last Updated: 07th October 2020 08:22 PM   |  A+A-


Rahul-Shyoraj Jivan

ರಾಹುಲ್-ಜೀವನ್

Posted By : Vishwanath S
Source : The New Indian Express

ಲಖನೌ: ಹತ್ರಾಸ್ ನ ಬೂಲ್ಗರಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ನಿರ್ದಿಷ್ಟ ಜಾತಿಯ ಜನರನ್ನು ಪ್ರಚೋದಿಸಲು ಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಾಂಗ್ರೆಸ್ ನಾಯಕ ಶ್ಯೋರಾಜ್ ಜೀವನ್, ಹತ್ರಾಸ್ ಘಟನೆಯನ್ನು ತನ್ನ ರಾಜಕೀಯವನ್ನು ಮುಂದುವರೆಸಲು ಕಾಂಗ್ರೆಸ್ ಬಳಸಿದೆ ಎಂದು ಒಪ್ಪಿಕೊಳ್ಳುತ್ತಿರುವುದು ವೀಡಿಯೊಗಳಲ್ಲಿ ಕಾಣಿಸಿದೆ. ಜಿಲ್ಲೆಯಲ್ಲಿ ಜಾತಿ ಹಿಂಸಾಚಾರವನ್ನು ಉಂಟುಮಾಡುವ ಉದ್ದೇಶದಿಂದ ಅವರು ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಯ ಕುಟುಂಬ ಮತ್ತು ಇಡೀ ವಾಲ್ಮೀಕಿ ಸಮುದಾಯವನ್ನು ಪ್ರಚೋದಿಸಲು ಪ್ರಚೋದನಕಾರಿ ಭಾಷೆಯನ್ನು ಬಳಸಿದ್ದಾರೆ.

ಜೀವನ್ ಕೇಂದ್ರ ಸಂಪುಟದಲ್ಲಿ ಮಾಜಿ ರಾಜ್ಯ ಸಚಿವರು ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ.

ವಿಡಿಯೋ ತುಣುಕುಗಳನ್ನು ಆಧರಿಸಿ ದೇಶದ್ರೋಹದ ಆರೋಪದಡಿಯಲ್ಲಿ ಹತ್ರಾಸ್ ಪೊಲೀಸರು ಶ್ಯೋರಾಜ್ ಜೀವನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೂಲತಃ ಅಲಿಗಢದಿಂದ ಬಂದಿರುವ ಜೀವನ್ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ಮೂಲಗಳು ಹೇಳಿಕೊಂಡಿದ್ದು, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೇಳಿಕೊಂಡಿದೆ. ಎಲ್ಲಾ ಆರೋಪಗಳನ್ನು ದಲಿತ ಕಾಂಗ್ರೆಸ್ ನಾಯಕ ಜೀವನ್ ನಿರಾಕರಿಸಿದ್ದಾರೆ. 

ಸೆಪ್ಟೆಂಬರ್ 19ರಂದು ಅಲಿಗಢದ ಜೆಎಲ್ಎನ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾದಾಗ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದ ಜೀವನ್, ಹತ್ರಾಸ್ನಲ್ಲಿ ಜಾತಿ ಆಧಾರಿತ ಭಾರಿ ಗಲಭೆಗಳನ್ನು ಉಂಟುಮಾಡಲು ಸಿದ್ಧತೆಗಳು ಪೂರ್ಣಗೊಂಡಿವೆ. ಒಂದು ವೇಳೆ ಗಲಭೆ ಶುರವಾದರೆ ಹಿಂಸಾಚಾರವನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Stay up to date on all the latest ರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp